Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಅ. 23 “ಕನಕ ನಡೆ’; ಸ್ವತ್ಛ ಭಾರತ ಸಾಕಾರದತ್ತ ಯುವಬ್ರಿಗೇಡ್‌ ಹೆಜ್ಜೆ

chakravarty-sulibeleಮಂಗಳೂರು: ಸ್ವತ್ಛತೆಯ ಉದ್ದೇಶ ತಿಳಿಸುವುದು ಮತ್ತು ಸ್ವತ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವ ಮುಂದುವರಿದ ಭಾಗವಾಗಿ ಯುವಬ್ರಿಗೇಡ್‌ ವತಿಯಿಂದ “ಕನಕ ನಡೆ’ ಸ್ವತ್ಛ ಉಡುಪಿ ಕಾರ್ಯಕ್ರಮ ಅ. 23ರಂದು ಉಡುಪಿಯಲ್ಲಿ ನಡೆಯಲಿದೆ.

ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ರಾಜ್ಯಾದ್ಯಂತ ಸುಮಾರು 700 ಮಂದಿ ಯುವಬ್ರಿಗೇಡ್‌ ಕಾರ್ಯಕರ್ತರು ಮತ್ತು ಸ್ಥಳೀಯರು, ಸೇರಿದಂತೆ ಒಟ್ಟು 1,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಮಾರು 2,000 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಯುವಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ಮಠದ ಆಸುಪಾಸಿನ 6 ಮಾರ್ಗ ಸ್ವತ್ಛತೆ
ಉಡುಪಿ ಶ್ರೀ ಕೃಷ್ಣ ಮಠವನ್ನು ಸಂಪರ್ಕಿಸುವ ಒಟ್ಟು 6 ಮಾರ್ಗಗಳಲ್ಲಿ ಸ್ವತ್ಛತಾ ಕಾರ್ಯಕ್ರಮ ಜರಗಲಿದೆ. ಬಡಗುಪೇಟೆ, ತೆಂಕುಪೇಟೆ, ಪಡುಪೇಟೆ (ಕನಕದಾಸ ರಸ್ತೆ), ವಾದಿರಾಜ ರಸ್ತೆ, ಕಲ್ಸಂಕದಿಂದ ಪಾರ್ಕಿಂಗ್‌ ಪ್ರದೇಶವನ್ನು ತಲುಪುವ ರಸ್ತೆ, ಅದಮಾರು ಮಠದ ಓಣಿಗಳಲ್ಲಿ ಸ್ವತ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಅಕ್ಕಪಕ್ಕದ ಮನೆಗಳಿಗೆ ತೆರಳಿ ಸ್ವತ್ಛತೆಯ ಕುರಿತು ಜಾಗೃತಿ ಸಂದೇಶ ನೀಡಲಾಗುವುದು.

ಕಾರ್ಯಕ್ರಮವು ಕೇವಲ ಒಂದೇ ದಿನಕ್ಕೆ ಸೀಮಿತವಾಗಿರದೆ, ವಿವಿಧ ತೀರ್ಥಕ್ಷೇತ್ರಗಳ ಆಸುಪಾಸಿನಲ್ಲಿಯೂ ಮುಂದುವರಿಯಲಿದೆ. ಇದು ಉಡುಪಿಯಿಂದ ಆರಂಭಗೊಳ್ಳಲಿದೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ವಿವರಿಸಿದ್ದಾರೆ.

ಭದ್ರತಾ ಕ್ರಮ
ಉಡುಪಿ:
ಭದ್ರತೆಗಾಗಿ ಸುಮಾರು 250-300 ಸಿವಿಲ್‌ ಪೊಲೀಸ್‌ ಅಲ್ಲದೆ ಮೂರು ಕೆಎಸ್‌ಆರ್‌ಪಿ ಪಡೆ, ಮೂರು ಹೋಮ್‌ಗಾರ್ಡ್ಸ್‌ ಪಡೆ, ಸಶಸ್ತ್ರ ಮೀಸಲು ಪಡೆಯವರಿದ್ದಾರೆ. ಮಠದ ಸುತ್ತಲೂ ಸ್ವತ್ಛತೆ ಮಾಡಲು ಕನಕ ನಡೆ ಸ್ವತ್ಛತಾ ಕಾರ್ಯಕ್ರಮಕ್ಕೆ ಅನುಮತಿ ಕೇಳಿದ್ದಾರೆ. ಸ್ವಾಭಿಮಾನಿ ಪಡೆಯವರೂ ಅನುಮತಿ ಕೇಳಿದ್ದಾರೆ ಎಂದು “ಉದಯವಾಣಿ’ಗೆ ಉಡುಪಿ ಎಸ್ಪಿ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

9ರಿಂದ 1ನೇ ಸ್ಥಾನಕ್ಕೆ ಬರಬೇಕೆಂಬ ಆಶಯ
ಸ್ವತ್ಛತೆಯಲ್ಲಿ ಉಡುಪಿ ಈಗಾಗಲೇ ದೇಶದಲ್ಲೇ ನಂಬರ್‌ 9ನೇ ಸ್ಥಾನದಲ್ಲಿದೆ. ಅದು 1ನೇ ಸ್ಥಾನಕ್ಕೆ ಬರಬೇಕೆಂಬುದು ಪ್ರತಿಯೊಬ್ಬರ ಕನಸು. ಈ ನಿಟ್ಟಿನಲ್ಲಿ ಉಡುಪಿ ಸ್ವತ್ಛತಾ ಕಾರ್ಯಕ್ರಮದ ಆಶಯ ರೂಪುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವತ್ಛ ಭಾರತ ಕಲ್ಪನೆಯಡಿಯಲ್ಲಿ ದೇಶಾದ್ಯಂತ ಸ್ವತ್ಛತಾ ಕಾರ್ಯಕ್ರಮ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಸುವಲ್ಲಿ ಕಾರ್ಯಕ್ರಮ ಮಹತ್ವ ಪಡೆಯಲಿದೆ. ಭಕ್ತ ಕನಕದಾಸರಿಗೆ ಒಲಿದು ದರ್ಶನ ನೀಡುವ ಮೂಲಕ ಶ್ರೀ ಕೃಷ್ಣನು ಭಕ್ತಿಯ ಮಹಿಮೆಯನ್ನು ಸಾರಿದ ಪವಿತ್ರ ನೆಲೆ ಉಡುಪಿಯಾಗಿರುವುದರಿಂದ ಕಾರ್ಯಕ್ರಮಕ್ಕೆ “ಕನಕನಡೆ’ ಎಂದು ಹೆಸರಿಡಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

No Comments

Leave A Comment