Log In
BREAKING NEWS >
ಉಡುಪಿಯ ಶ್ರೀಶಿರೂರು ಶ್ರೀಗಳು ಹರಿಪಾದಕ್ಕೆ-ಇನ್ನಿಲ್ಲವಾದರು ಶ್ರೀಗಳು-ಉಡುಪಿಯ ಶ್ರೀಕೃಷ್ಣಮಠ ಹಾಗೂ ಶಿರೂರು ಮಠಕ್ಕೆ ಬಿಗುಭದ್ರತೆ

ಗೋವಾದಲ್ಲಿ ಕನ್ನಡಿಗರ ಮೇಲೆ ದಾಳಿ:ಮನೆಗಳಿಗೆ ಬೆಂಕಿ,ಹಲವರಿಗೆ ಹಲ್ಲೆ

attackಪೊಂಡಾ : ಇಲ್ಲಿನ ಉಸ್‌ಗಾಂವ್‌ ಎಂಬಲ್ಲಿ ಕನ್ನಡಿಗರ ಮೇಲೆ ಇನ್ನೂರಕ್ಕು ಹೆಚ್ಚು ಮಂದಿಯ ಪುಂಡರ ಗುಂಪೊಂದು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದು ,ಕೆಲ ಮನೆಗಳಿಗೆ ಬೆಂಕಿ ಹಚ್ಚಿ ,ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಯುವಕರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆ ನಡೆಯಲು ವಲಸಿಗರ ಗುಂಪೊಂದು ಕೆಲ ದಿನಗಳ ಹಿಂದೆ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದೆ ಕಾರಣ ಎಂದು ಹೇಳಲಾಗಿದ್ದು ,ಆ ಬಳಿಕ ಉದ್ರಿಕ್ತರು ಗುಂಪು ಕಟ್ಟಿಕೊಂಡು ದಾಂಧಲೆ ನಡೆಸಿದ್ದಾರೆ.

ವಲಸಿಗರು ಸ್ಥಳ ಬಿಟ್ಟು ತೆರಳಬೇಕು ಎಂದು ಆಗ್ರಹಿಸಿ ಬುಧವಾರ ಈ ಭಾಗದಲ್ಲಿ ಬಂದ್‌ ನಡೆಸಲಾಗಿತ್ತು. ಆ ಬಳಿಕ ಕನ್ನಡಿಗರ ಮೇಲೆ ಗೂಂಡಾಗಿರಿ ನಡೆಸಲಾಗಿದ್ದು ಕೂಡಲೇ ಸ್ಥಳ ಬಿಟ್ಟು ತೆರಳುವಂತೆ ಆಗ್ರಹಿಸಿದ್ದಾರೆ.ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ.

ಹಲ್ಲೆಗೊಳಗಾದ ಕನ್ನಡಿಗರು ನಮಗೆ ರಕ್ಷಣೆ ನೀಡಲು ಸಹಕರಿಸಬೇಕು ಎಂದು ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.

No Comments

Leave A Comment