Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಕೊಲ್ಲೂರು –ಸಾಗರ ಹೆದ್ದಾರಿಯಲ್ಲಿ ಇಬ್ಬರು ದರೋಡೆಕೋರರ ಬಂಧನ

98-16-blogಕೊಲ್ಲೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಲ್ಲೂರು –ಸಾಗರ ಹೆದ್ದಾರಿಯಲ್ಲಿ ದಿನಾಂಕ 20/10/2016 ರಂದು ಬೆಳಿಗ್ಗೆ 09.45 ಗಂಟೆಗೆ ಉದಯ ಶೇರುಗಾರ ಎಂಬವರು ತನ್ನ ದ್ವಿಚಕ್ರ ವಾಹನದಲ್ಲಿ ಕೊಲ್ಲೂರು ಕಡೆಯಿಂದ ದಳಿ ಕಡೆಗೆ ಹೋಗುತ್ತಿರುವಾಗ್ಗೆ ಕೊಲ್ಲೂರು–ಸಾಗರ ಹೆದ್ದಾರಿಯದಳಿ ಎಂಬಲ್ಲಿ ಉದಯ ಶೇರುಗಾರ ರವರ ಹಿಂಬದಿಯಿಂದ ಇನ್ನೋವಾ ವಾಹನದಲ್ಲಿ ಬಂದ 6 ಮಂದಿಯಿದ್ದ ದರೋಡೆಕೋರರು ಉದಯ ಶೇರುಗಾರರನ್ನು ಅಡ್ಡಹಾಕಿ ನಿಲ್ಲಿಸಿಅವರನ್ನು ಸೇರಿ ಕೈಯಿಂದ ಮುಖಕ್ಕೆ, ಮೂಗಿಗೆ ಬೆನ್ನಿಗೆ ಹೊಡೆದು, ನಂತರ ಕಬ್ಬಿಣದ ರಾಡಿನಿಂದ ಉದಯ ಶೇರುಗಾರ ಎಡಕಾಲಿಗೆ ಏಕಾಏಕಿಯಾಗಿ ಹೊಡೆದು, ಕಣ್ಣಿಗೆ ಮೆಣಸಿನ ಪುಡಿ ಎರಚಿ ದ್ವಿಚಕ್ರವಾಹನದ ಕೀಯನ್ನು, ಅಂಗಿಯ ಕಿಸೆಯಲ್ಲಿದ್ದ ಮೊಬೈಲ್ 8 ಸಾವಿರ ರೂ. ಮೌಲ್ಯದ ಫೋನನ್ನು ಮತ್ತು ಕಿಸೆಯಲ್ಲಿದ್ದ ನಗದು 1000/ ರೂ. ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದು ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.

ಈ ಬಗ್ಗೆ ಆರೋಪಿತರ ಖಚಿತ ಮಾಹಿತಿಯನ್ನು ಪಡೆದ ಕೊಲ್ಲೂರು ಠಾಣಾ ಪಿ.ಎಸ್. ಐ ಮತ್ತು ಸಿಬ್ಬಂದಿರವರು ಆರೋಪಿಗಳಾದ  1 ಮೋಹನ ಕುಮಾರ್  ಯಾನೆ ಮೋನಿ (27) ತಂದೆ; ಚಂದ್ರಪ್ಪ ವಾಸ; 8 ನೇ ಕೆ.ಎಸ್.ಆರ್.ಪಿ ಪಡೆ ಮುಂಭಾಗ ಮಂಜಿಗನಹಳ್ಳಿ  ಗ್ರಾಮ ಮತ್ತು ಅಂಚೆ ನವಿಲೆಬಸಾಪುರ ರಸ್ತೆ  ಭದ್ರಾವತಿ ತಾಲೂಕು  ಮತ್ತು 2) ನರೇದ್ರ ಬಾಬು ಯಾನೆ ಬಾಬು(27) ತಂದೆ; ದಿ| ಶಿವಣ್ಣ ವಾಸ; ಮನೆ ನಂ 203 11 ನೇ ಕ್ರಾಸ್, ಕಾವೇರಿ ಪುರ ಮುಖ್ಯ ರಸ್ತೆ ಕಾಮಾಕ್ಷಿ ಪಾಳ್ಯ  ಬೆಂಗಳೂರು 79,  ಖಾಯಂ ವಿಳಾಸ; ಕಲ್ಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಮುದ್ದಿಗೆರೆ ಅಂಚೆ ಮತ್ತು ಗ್ರಾಮ  ಮಾಗಡಿ ತಾಲೂಕು ರಾಮನಗರ ಜಿಲ್ಲೆ  ಎಂಬವರನ್ನು  ರಾತ್ರಿ ಅರೆಶಿರೂರಿನಲ್ಲಿ ದಸ್ತಗಿರಿ ಮಾಡಿ  ಕೃತ್ಯಕ್ಕೆ ಬಳಸಿದ ಮೂರು ಲಕ್ಷದ ಇನ್ನೋವಾ ಕಾರು KA-14-A-6593 ನೇ ನೊಂದಣಿ ಸಂಖ್ಯೆಯ ಸಿಲ್ವರ್ ಬಣ್ಣದ ಇನ್ನೋವಾ ಕಾರು, ಕಬ್ಬಿಣದ ರಾಡು ಇತ್ಯಾಧಿಗಳನ್ನು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳಾದ  ಚಂದ್ರಕುಮಾರ ಯಾನೆ ಜಾಂಟಿ, ಜಾನಿ, ಸಿದ್ಧ, ನಾಗೇಶ ಹಾಗೂ ದರೋಡೆ ಕೃತ್ಯಕ್ಕೆ ಸಹಕರಿಸಿದವರನ್ನು ದಸ್ತಗಿರಿ  ಮಾಡುವ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ ಬಾಲಕೃಷ್ಣ ಕೆ.ಟಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರವರಾದ ಶ್ರೀ ವಿಷ್ಣುವರ್ಧನ್ ರವರ ನಿರ್ಧೇಶನದಂತೆ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರವೀಣ್ ಹೆಚ್, ನಾಯಕ್ ರವರ ಮತ್ತು ಬೈಂದೂರು ವೃತ್ತ ನಿರೀಕ್ಷಕರಾದ ಶ್ರೀ ರಾಘವ ಪಡೀಲ್ ರವರ  ಮಾರ್ಗದರ್ಶನದಲ್ಲಿ ಕೊಲ್ಲೂರು ಠಾಣಾ ಪಿಎಸ್,ಐ ಶೇಖರ, ಮತ್ತು ಸಿಬ್ಬಂದಿಗಳಾದ ಅಶೋಕ್ ಕುಮಾರ್, ನವೀನ ಕುಮಾರ್, ನವೀನ, ನಾಗರಾಜ ಮತ್ತಿತರರು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

No Comments

Leave A Comment