Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಪಶ್ಚಿಮ ಬಂಗಾಲದ 16ರ ಹರೆಯದ ಹುಡುಗನಲ್ಲಿ ಸ್ತ್ರೀ ಗುಪ್ತಾಂಗ ಪತ್ತೆ

surgery-700ಹೊಸದಿಲ್ಲಿ : ಅತ್ಯಂತ ಅಪರೂಪದಲ್ಲೇ ಅಪರೂಪದ ಪ್ರಕರಣದಲ್ಲಿ ಪಶ್ಚಿಮ ಬಂಗಾಲದ 16 ವರ್ಷ ಪ್ರಾಯದ ಹುಡುಗನಲ್ಲಿ ಸ್ತ್ರೀ ಗುಪ್ತಾಂಗ ಪತ್ತೆಯಾಗಿದೆ.

ಸ್ತ್ರೀಯರಲ್ಲಿ ಕಂಡು ಬರುವ ಯೋನಿ ಮಾತ್ರವಲ್ಲದೆ ಗರ್ಭಕೋಶ, ಅಂಡಾಶಯ, ಫ್ಯಾಲೋಪಿಯನ್‌ ಟ್ಯೂಬ್‌ ಮುಂತಾದ ಸ್ತ್ರೀ ಲಿಂಗ ಸಹಜ ಅಂಗಾಂಶಗಳು ಈ ಹುಡುಗನಲ್ಲಿ ಅಂತರ್ಗತವಾಗಿರುವುದು ಕಂಡು ಬಂದಿದೆ.

ವಿಶ್ವಾದ್ಯಂತದಿಂದ ಈ ವರೆಗೆ ವರದಿಯಾಗಿರುವ ಈ ರೀತಿಯ ವಿಸ್ಮಯಕಾರಿ ಪ್ರಕರಣಗಳಲ್ಲಿ ಇದು ಹತ್ತನೇ ಪ್ರಕರಣವಾಗಿ ದಾಖಲಾಗಿರುವುದು ಗಮನಾರ್ಹವಾಗಿದೆ.

ವೈದ್ಯಕೀಯವಾಗಿ ಈ  ಲಿಂಗ ವ್ಯತಿರಿಕ್ತ ಗುಪ್ತಾಂಗ ಪ್ರಕರಣಕ್ಕೆ ಪರ್ಸಿಸ್ಟೆಂಟ್‌ ಮುಲೇರಿಯನ್‌ ಡಕ್ಟ್ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ. ಈ ಬೆಳವಣಿಗೆಯನ್ನು ನಿಯಂತ್ರಿಸುವ ಕ್ರಮವಾಗಿ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು ಈ ವರ್ಷಾರಂಭದಲ್ಲಿ ಹುಡುಗನ ಮೇಲೆ ಸರಣಿ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ್ದರು.

ಎರಡು ಹಂತಗಳಲ್ಲಿ ಹುಡುಗನ ಮೇಲೆ ನಡೆಸಲಾಗಿರುವ ಶಸ್ತ್ರ ಚಿಕಿತ್ಸೆಯ ಬಳಿಕ ಇದೀಗ ಹುಡುಗನು ಸಾಮಾನ್ಯ ಸ್ಥಿತಿಗೆ ತಲುಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

No Comments

Leave A Comment