Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಬಿಸಿಸಿಐಗೆ ಪ್ರತ್ಯೇಕ ಲೆಕ್ಕ ಪರಿಶೋಧಕರನ್ನು ನೇಮಿಸಿ: ಲೋಧಾ ಸಮಿತಿಗೆ ಸುಪ್ರೀಂ ಆದೇಶ

lodha-newನವದೆಹಲಿ: ಮಾಧ್ಯಮ ಹಕ್ಕು, ಒಪ್ಪಂದಗಳು ಸೇರಿದಂತೆ ಬಿಸಿಸಿಐನ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಆಡಿಟರ್ ನೇಮಿಸಬೇಕು ಎಂದು ಲೋಧಾ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವ ಮೂಲಕ , ಬಿಸಿಸಿಐ ಮೇಲೆ ಸುಪ್ರೀಂ ಮತ್ತೆ ಚಾಟಿ ಬೀಸಿದೆ.

ಬಿಸಿಸಿಐ ವ್ಯವಹಾರಗಳನ್ನು ಮತ್ತು ಖಾತೆಗಳನ್ನು ಆಡಿಟ್ ಮಾಡುವಂತೆ ಸೂಚಿಸಿದೆ. ಜತೆಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ಗೆ ಲೋಧಾ ಸಮಿತಿಯ ಮುಂದೆ ಹಾಜರಾಗಿ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವ ಸಂಬಂಧ ಸೂಚನೆ ಪಡೆದುಕೊಳ್ಳುವಂತೆ ತಿಳಿಸಿದೆ.

ಜೊತೆಗೆ ಐಸಿಸಿ ಅಧ್ಯಕ್ಷ ಶಸಾಂಕ್ ಮನೋಹರ್ ಅವರಿಗೆ ಸಮಿತಿಯ ಆದೇಶದ ಪ್ರತಿಯನ್ನು ತಲುಪಿಸುವಂತೆ ಲೋಧಾ ಸಮಿತಿ ಕಾರ್ಯದರ್ಶಿ ಅವರಿಗೆ  ಸೂಚಿಸಲಾಗಿದೆ.

ಜತೆಗೆ ಟೆಂಡರ್ ಮತ್ತು ಗುತ್ತಿಗೆ ಮೊತ್ತದ ಮೇಲೂ ಸಹ ಗರಿಷ್ಠ ಪ್ರಮಾಣವನ್ನು ನಿಗದಿ ಮಾಡುವಂತೆ ತಿಳಿಸಿದೆ ನ್ಯಾಯಮೂರ್ತಿ ಟಿ.ಎಸ್ ಠಾಗೂರ್ ನೇತತ್ವದ ಪೀಠ ಸೂಚಿಸಿದೆ.ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವವರೆಗೆ ರಾಜ್ಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲಾರದು ಎಂದು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಆದೇಶಿಸಿದೆ.

No Comments

Leave A Comment