Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕಾಶ್ಮೀರ ಪ್ರತಿಭಟನೆ 104ನೇ ದಿನಕ್ಕೆ; 400 ದಾಟಿದ ಬಂಧಿತರ ಸಂಖ್ಯೆ

kashmir-curfew1-700ಜಮ್ಮು ಕಾಶ್ಮೀರ : ಕಾಶ್ಮೀರದಲ್ಲಿನ ಸರಕಾರಿ ವಿರೋಧಿ ಪ್ರತಿಭಟನೆಗಳು 104ನೇ ದಿನವನ್ನು ತಲುಪಿದ್ದು ಸಾರ್ವಜನಿಕ ಸುರಕ್ಷಾ ಕಾಯಿದೆಯಡಿ ಭಾರೀ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ.

ಸಾರ್ವಜನಿಕ ಸುರಕ್ಷಾ ಕಾಯಿದೆಯಡಯ ಬಂಧಿತರನ್ನು ಆರು ತಿಂಗಳ ಅವಧಿಯ ಮಟ್ಟಿಗೆ ಯಾವುದೇ ಕೋರ್ಟ್‌ ವಿಚಾರಣೆ ಇಲ್ಲದೆ, ರಾಜ್ಯದ ಭದ್ರತೆಗೆ ಅಪಾಯ ಒಡ್ಡಿರುವ ಆರೋಪದ ಮೇಲೆ, ಜೈಲಿನಲ್ಲಿ ಇರಿಸಬಹುದಾಗಿದೆ.

ಕಳೆದ ಜುಲೈ 8ರಂದು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಬರ್ಹಾನ್‌ ವಾನಿಯ ಹತ್ಯೆ ನಡೆದಂದಿನಿಂದ ಈ ತನಕ ಸುಮಾರು 563 ಮಂದಿಯನ್ನು  ಸಾರ್ವಜನಿಕ ಸುರಕ್ಷಾ ಕಾಯಿದೆಯಡಿ ಬಂಧಿಸಲಾಗಿದೆ; ಮಾತ್ರವಲ್ಲದೆ ಇನ್ನೂ 487 ಮಂದಿಯ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಲಾಗಿದ್ದು ಈ ಪೈಕಿ 434 ಮಂದಿಯನ್ನು ಬಂಧಿಸಲಾಗಿದೆ ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ತಿಳಿಸಿದೆ.

ಬಂಧಿತರಲ್ಲಿ ಪ್ರಮುಖರೆಂದರೆ ಬಂಡಿಪೋರ್‌ನ ಕಂದಾಯ ಅಧಿಆರಿ ಮದಸೀರ್‌ ಅಹ್ಮದ ಭಟ್‌ (ಸರಕಾರಿ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಆರೋಪ), ಫಿರ್ದೋಸ್‌ ಅಹ್ಮದ್‌ ಭಟ್‌ (ಕಲ್ಲೆಸೆತದಲ್ಲಿ ತೊಡಗಿಕೊಂಡ ಆರೋಪ), ಬಂಡಿಪೋರದ ಪಾಪ್‌ಚಾನ್‌ ಗ್ರಾಮದ ಶಿಕ್ಷಕ ಬಶೀರ್‌ ಅಹ್ಮದ್‌ ಶಾ (ಕಲ್ಲೆಸೆತ), ಮಾನವ ಹಕ್ಕು ಕಾರ್ಯಕರ್ತ ಖುರ್ರಮ್‌ ಪರ್ವೇಜ್‌.

ಸಾರ್ವಜನಿಕ ಸುರಕ್ಷಾ ಕಾಯಿದೆಯಡಿ ಬಂಧಿಸಲ್ಪಟ್ಟ ಅತಿ ಕಿರಿಯವನೆಂದರೆ 17 ವರ್ಷ ಪ್ರಾಯದ, 9ನೇ ತರಗತಿ ಶಿಕ್ಷಣದಿಂದ ಹೊರಬಿದ್ದ, ತನ್ವೀರ್‌ ಅಹ್ಮದ್‌ ಭಟ್‌.

No Comments

Leave A Comment