Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

US ಅಂತಿಮ ಅಧ್ಯಕ್ಷೀಯ ಚರ್ಚೆಯಲ್ಲಿ ಟ್ರಂಪ್‌ ಎದುರು ಹಿಲರಿ ಜಯಭೇರಿ

hilary-clinton1-700ಲಾಸ್‌ ವೇಗಾಸ್‌ : ನಿನ್ನೆ ಬುಧವಾರ ರಾತ್ರಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಅಂತಿಮ ಚರ್ಚೆಯಲ್ಲಿ ಡೆಮೊಕ್ರಾಟಿಕ್‌ ನಾಮಿನಿ ಹಿಲರಿ ಕ್ಲಿಂಟನ್‌ ಅವರು ತಮ್ಮ ರಿಪಬ್ಲಿಕನ್‌ ಎದುರಾಳಿ ಡೋನಲ್ಡ್‌ ಟ್ರಂಪ್‌ ಅವರನ್ನು ಶೇ.52 – ಶೇ.39 ಮತಗಳ ಅಂತರದಲ್ಲಿ ಸೋಲಿಸಿರುವುದಾಗಿ ಸಿಎನ್‌ಎನ್‌ / ಓಆರ್‌ಸಿ ಚರ್ಚಾ ವೀಕ್ಷಕರ ಮತ ಗಣನೆಯಿಂದ ತಿಳಿದು ಬಂದಿದೆ.

ಚರ್ಚಾ ವೀಕ್ಷಕರ ಈ ಮತ ಗಣನೆಯಲ್ಲಿ ಶೇ.4ರಷ್ಟು ತಪ್ಪು ಒಪ್ಪು ಆಗಿರುವ ಸಂಭಾವ್ಯತೆ ಇದೆಯಾದರೂ ಹಿಲರಿ ಕ್ಲಿಂಟನ್‌ ಅವರು ಟ್ರಂಪ್‌ ಎದುರು ಗೆಲವು ಸಾಧಿಸಿರುವುದು ನಿಚ್ಚಳವಿದೆ ಎಂದು ಸಮೀಕ್ಷೆ ತಿಳಿಸಿದೆ.

ಮಾದರಿ ಚರ್ಚಾ ವೀಕ್ಷಕರಲ್ಲಿ ಶೇ.36 ಡೆಮೋಕ್ರಾಟಿಕ್‌ ಮತ್ತು ಶೇ.29 ರಿಪಬ್ಲಿಕನ್‌ ಒಲವು ಹೊಂದಿದ್ದರು. ಎಲ್ಲ ಅಮೆರಿಕನ್ನರ ಸರಾಸರಿ ಮತ ಗಣನೆಯಲ್ಲಿ ರಿಪಬ್ಲಿಕನ್‌ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡೆಮೋಕ್ರಾಟಿಕ್‌ಗಳು ಇದ್ದರು.

ಈ ಅಂತಿಮ ಅಧ್ಯಕ್ಷೀಯ ಚರ್ಚೆಯಲ್ಲಿ ಟ್ರಂಪ್‌ ನಿರ್ವಹಣೆ ನಿರೀಕ್ಷೆಗಿಂತಲೂ ಉತ್ತಮವೇ ಇತ್ತು. ಹತ್ತರಲಿ ಆರು ಮಂದಿ ಟ್ರಂಪ್‌ ನಿರೀಕ್ಷೆಗಿಂತಲೂ ಉತ್ತಮ ನಿರ್ವಹಣೆ ತೋರಿರುವುದಾಗಿ ಹೇಳಿದರು. ಶೇ.44 ಮಂದಿ ಹಿಲರಿ ನಿರ್ವಹಣೆಯ ಬಗ್ಗೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನೆವಾಡಾ ವಿಶ್ವವಿದ್ಯಾಲಯದಲ್ಲಿ ಈ ಅಂತಿಮ ಅಧ್ಯಕ್ಷೀಯ ಚರ್ಚೆಯು ನಡೆದಿತ್ತು. ಇದನ್ನು ಫಾಕ್ಸ್‌ ನ್ಯೂಸ್‌ನ ಕ್ರಿಸ್‌ ವ್ಯಾಲೇಸ್‌ ಅವರು ನಡೆಸಿಕೊಟ್ಟರು.

No Comments

Leave A Comment