Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ದೆಹಲಿ: ಸುಟ್ಟ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆ

infant-baby-delhiನವದೆಹಲಿ: ರಾಜಧಾನಿ ದೆಹಲಿ ಮುನಿರ್ಕಾ ಫ್ಲೈಓವರ್ ಬಳಿ ಒಂದು ದಿನದ ನವಜಾತ ಹೆಣ್ಣು ಶಿಶುವೊಂದು ಸುಟ್ಟ ಸ್ಥಿತಿಯಲ್ಲಿ ಮಂಗಳವಾರ ರಾತ್ರಿ ಪತ್ತೆಯಾಗಿದೆ.ನವಜಾತ ಶಿಶುವನ್ನು ಬಟ್ಟೆ ಬ್ಯಾಗ್ ವೊಂದರಲ್ಲಿ ಹಾಕಿ ಬಿಸಾಡಲಾಗಿದೆ.

ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದ ಪೊಲೀಸರು ನವಜಾತ ಶಿಶುವನ್ನು ಏಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಮಗುವಿಗೆ ಶೀತವಾಗಿದ್ದು, ಪ್ರಾಣಾಪಾಯಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನವಜಾತ ಶಿಶುವಿನ ಪೋಷಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

No Comments

Leave A Comment