Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಬೆಂಕಿ ಹಚ್ಚಿಕೊಂಡು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

woman-set-on-fireಹೈದರಾಬಾದ್: ಹಾಸ್ಟೆಲ್ ನಲ್ಲಿ ಬೆಂಕಿ ಹಚ್ಚಿಕೊಂಡು 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ.ಸಾತ್ವಿಕ (16) ಆತ್ಮಹತ್ಯೆಗೆ ಶರಣಾಗಿರುವ ಯುವತಿಯಾಗಿದ್ದಾಳೆ.

ಶ್ರೀ ಚೈತನ್ಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಯುವತಿ ಹಾಸ್ಟೆಲ್ ವೊಂದರಲ್ಲಿ ಇದ್ದಳು. ಆದರೆ, ನಿನ್ನೆ ಮಧ್ಯಾಹ್ನ ಇದ್ದಕ್ಕಿದ್ದಂತೆ ತನ್ನ ರೂಮಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಹೇಳಲಾಗುತ್ತಿದೆ.ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲ ನಿಮಿಷಗಳ ಹಿಂದೆ ಸಾತ್ವಿಕ ತನ್ನ ತಾಯಿಗೆ ಕರೆ ಮಾಡಿದ್ದು, ಹಾಸ್ಟೆಲ್ ನಲ್ಲಿ ಇರಲು ಆಗುತ್ತಿಲ್ಲ ಎಂದು ದುಃಖದಿಂದ ಹೇಳಿಕೊಂಡಿದ್ದಾಳೆಂದು ತಿಳಿದುಬಂದಿದೆ.ಎಂದಿನಂತೆ ಕಾಲೇಜು ಮುಗಿಸಿ ಮಧ್ಯಾಹ್ನದ ವೇಳೆಗೆ ಸಾತ್ವಿಕ ಹಾಸ್ಟೆಲ್ ಗೆ ಬಂದಿದ್ದಾಳೆ.

ಊಟ ಮುಗಿಸಿ ರೂಮಿಗೆ ಬಂದಾಗ ತನ್ನ ತಾಯಿಗೆ ಕರೆ ಮಾಡಿ ಹಾಸ್ಟೆಲ್ ನಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. 1.30ರ ಸುಮಾರಿಗೆ 4ನೇ ಮಹಡಿಯ ರೂಮಿನಿಂದ ಹೊಗೆ ಬರುತ್ತಿದ್ದುದ್ದನ್ನು ಕೆಲ ವಿದ್ಯಾರ್ಥಿನಿಯರು ನೋಡಿದ್ದಾರೆ. ಸ್ಥಳಕ್ಕೆ ಹೋಗಾದ ಸಾತ್ವಿಕ ಬೆಂಕಿ ಹಚ್ಚಿಕೊಂಡಿರುವುದು ಕಂಡುಬಂದಿದೆ.

ಕೂಡಲೇ ಹಾಸ್ಟೆಲ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.2.30ರ ಸುಮಾರಿಗೆ ಊಟ ಮುಗಿಸಿ ರೂಮಿಗೆ ಹೋದ ನಂತರ ಸಾತ್ವಿಕ ಬೆಂಕಿ ಹಚ್ಚಿಕೊಂಡಿದ್ದಾಳೆ.

ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದಾಗ ಸಾತ್ವಿಕ ದೇಹ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಸುಟ್ಟ ಬೂದಿಯ ಮಾದರಿಯನ್ನೇ ತೆಗೆದುಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್ ಪೆಕ್ಟರ್ ಕೆ. ರಮೇಶ್ ಅವರು ಹೇಳಿದ್ದಾರೆ.

No Comments

Leave A Comment