Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

70 ಖರೀದಿದಾರರಿಗೆ 22 ಕೋಟಿ ಮರುಪಾವತಿಸಿ: ಪಾರ್ಶ್ವನಾಥ್ ಡೆವಲಪರ್ಸ್ ಗೆ ಸುಪ್ರೀಂ ಆದೇಶ

supreme-newನವದೆಹಲಿ: ನಿಗದಿತ ಸಮಯಕ್ಕೆ ಸರಿಯಾಗಿ ಫ್ಲ್ಯಾಟ್ ಗಳನ್ನು ನೀಡದ ಕಾರಣ ಖರೀದಿದಾರರಿಗೆ ಹಣ ಮರುಪಾವತಿ ಮಾಡುವಂತೆ ಪಾರ್ಶ್ವನಾಥ್ ಡೆವಲಪರ್ಸ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಘಾಜಿಯಾಬಾದ್ ನಲ್ಲಿ ಪಾರ್ಶ್ವನಾಥ್ ಎಕ್ಸೋಟಿಕಾ ಪ್ರಾಜೆಕ್ಟ್ ಅಡಿಯಲ್ಲಿ ಫ್ಲ್ಯಾಟ್ ಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿ ಈ ಡೆವಲಪ್ರ್ಸ್ ಖರೀದಿದಾರರಿಂದ ಹಣ ಪಡೆದಿದ್ದರು, ಆದರೆ ಘಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ ಈ ಪ್ರಾಜೆಕ್ಟ್ ಅನುಮತಿಯನ್ನು ರದ್ದುಗೊಳಿಸಿತ್ತು.

ಹೀಗಾಗಿ ಎಪ್ಪತ್ತು ಮಂದಿ ಫ್ಲ್ಯಾಟ್ ಖರೀದಿದಾರರಿಗೆ ಒಟ್ಟು 22 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡುವಂತೆ ಸುಪ್ರೀಂಕೋರ್ಟ್ ಪಾರ್ಶ್ವನಾಥ್ ಡೆವಲಪರ್ಸ್ಗೆ ಆದೇಶ ನೀಡಿದೆ.ಕಟ್ಟಡ ನಿರ್ಮಾಪಕರು ಈಗಾಗಲೇ 12 ಕೋಟಿ ರೂಪಾಯಿಗಳನ್ನು ಠೇವಣಿ ಇಟ್ಟಿದ್ದಾರೆ.

ಉಳಿದ 10 ಕೋಟಿ ರೂಪಾಯಿಗಳನ್ನು ಠೇವಣಿ ಇಡಲು ಡಿಸೆಂಬರ್ 10ರವರೆಗೆ ಕಾಲಾವಕಾಶ ನೀಡಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

No Comments

Leave A Comment