Log In
BREAKING NEWS >
ಉಡುಪಿಯ ಕಿನ್ನಿಮುಲ್ಕಿಯಲ್ಲಿ ಜನವರಿ 17ರ೦ದು ಸಾಯ೦ಕಾಲ 7ಗ೦ಟೆಗೆ ಉಡುಪಿಯ ಖ್ಯಾತ ಉದ್ಯಮಿ ಹಾಗೂ ಕಾ೦ಗ್ರೆಸ್ ಮುಖ೦ಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರ ಸಭಾ ಸದಸ್ಯರಾದ ಶ್ರೀಅಮೃತ ಕೃಷ್ಣಮೂರ್ತಿ ಆಚಾರ್ಯರವರ ಸಾರಥ್ಯದಲ್ಲಿ ನೂತನ ಯಶೋಧ ಆಟೋ ರಿಕ್ಷಾ ಅಸೋಸಿಯೇಷನ್ ಶುಭಾರ೦ಭಗೊಳ್ಳಲಿದೆ.

“ಪರ್ಯಾಯ ಬಾಹ್ಯಾಕಾಶ ನಿಲ್ದಾಣ”ಕ್ಕೆ ಇಬ್ಬರು ಗಗನ ಯಾತ್ರಿಗಳ ರವಾನಿಸಿದ ಚೀನಾ!

tiangong-2-shenzhou-11ಬೀಜಿಂಗ್‌: ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದೊಂದಿಗೆ ಪೈಪೋಟಿಗಿಳಿದಿರುವ ಚೀನಾ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುತ್ತಿದ್ದು, ಇದಕ್ಕಾಗಿ ಮಂಗಳವಾರ ಇಬ್ಬರು  ಗನನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ರವಾನಿಸಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದ ಪಾರುಪತ್ಯ ಮೀರಿಸುವ ಉದ್ದೇಶದಿಂದ ನಾಸಾ ನೇತೃತ್ವದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರತಿಯಾಗಿ ತನ್ನದೇ ಆದ ಪ್ರತ್ಯೇಕ ಬಾಹ್ಯಾಕಾಶ  ನಿಲ್ದಾಣ ಸ್ಥಾಪಿಸುತ್ತಿರುವ ಚೀನ ಇದಕ್ಕಾಗಿ ಸೋಮವಾರ ತನ್ನ ಇಬ್ಬರು ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ರವಾನಿಸಿದೆ. ಉತ್ತರ ಚೀನಾದ ಗೋಬಿ ಮರುಭೂಮಿ ಸಮೀಪದಲ್ಲಿರುವ  ಜಿಯುಖ್ವಾನ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆಂಝೌ-11 ಬಾಹ್ಯಾಕಾಶ ನೌಕೆಯನ್ನು ಲಾಂಗ್‌ ಮಾರ್ಚ್‌-2ಎಫ್ ರಾಕೆಟ್‌ ಸಹಾಯದಿಂದ ಉಡಾವಣೆ ಮಾಡಲಾಗಿದೆ.

ಶೆಂಝೌ-11 ಬಾಹ್ಯಾಕಾಶ ನೌಕೆಯಲ್ಲಿ 50 ವರ್ಷದ ಜಿಂಗ್‌ ಹೇಪೆಂಗ್‌ ಹಾಗೂ 37 ವರ್ಷದ ಚೆನ್‌ ಡಾಂಗ್‌ ಅವರನ್ನು ಕಳುಹಿಸಲಾಗಿದ್ದು, ಎರಡು ದಿನಗಳಲ್ಲಿ ಟಿಯಾಂಗಾಂಗ್‌-2 ಬಾಹ್ಯಾಕಾಶ  ಕೇಂದ್ರ ತಲುಪಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಈ ಇಬ್ಬರೂ ಗಗನಯಾತ್ರಿಗಳು 30 ದಿನಗಳ ಕಾಲ ಅಲ್ಲಿಯೇ ತಂಗಲಿದ್ದು, ಜೀವನ ನಡೆಸಲು ಬೇಕಾದ ಸಾಮರ್ಥ್ಯಗಳ  ಕುರಿತು ಇಬ್ಬರೂ ಗಗನಯಾತ್ರಿಗಳು ಅಲ್ಲಿ ಪರೀಕ್ಷೆ  ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

2012ರಲ್ಲೇ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಿದ್ದ ಚೀನಾಬಾಹ್ಯಾಕಾಶ ಕೇಂದ್ರದಲ್ಲಿ ಅಮೆರಿಕದ ನಾಸಾ ಪಾರುಪತ್ಯ ಮೆಟ್ಟಿನಿಲ್ಲುವ ಸಲುವಾಗಿ 2012ರಲ್ಲೇ ಚೀನಾ ಟಿಯಾಂಗಾಂಗ್‌-1 ಹೆಸರಿನ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಿತ್ತು. ಕಳೆದ  ಮಾರ್ಚ್‌ನಲ್ಲಷ್ಟೇ ಅದರ ಸೇವಾವಧಿ ಅಂತ್ಯಗೊಂಡು ಇದೀಗ ಟಿಯಾಂಗಾಂಗ್‌-2 ಹೆಸರಿನಲ್ಲಿ 2022ರೊಳಗೆ ತನ್ನದೇ ಆದ ಶಾಶ್ವತ ಬಾಹ್ಯಾಕಾಶ ಕೇಂದ್ರ ತೆರೆಯಲು ಚೀನಾ ಮುಂದಾಗಿದೆ.  ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಸೇವಾವಧಿ 2024ಕ್ಕೆ ಮುಗಿಯಲಿದೆ. ಅನಂತರ ಬಾಹ್ಯಾಕಾಶದಲ್ಲಿ ಸ್ವಂತ ಕೇಂದ್ರ ಹೊಂದಿದ ಏಕೈಕ ದೇಶ ಎಂಬ ಹಿರಿಮೆ ಚೀನಾದ್ದಾಗಲಿದೆ.

No Comments

Leave A Comment