Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಅ.20-27 ಮುಂಬಯಿ ಚಿತ್ರೋತ್ಸವ : ಪಾಕ್‌ ಸಿನೆಮಾ ಪ್ರದರ್ಶನ ಇಲ್ಲ

pak-film-700ಹೊಸದಿಲ್ಲಿ : ಇದೇ ಅಕ್ಟೋಬರ್‌ 20ರಿಂದ 27ರ ತನಕ ನಡೆಯಲಿರುವ 2016ರ ಮುಂಬಯಿ ಚಿತ್ರೋತ್ಸವದಲ್ಲಿ ಪಾಕಿಸ್ಥಾನದ ಯಾವುದೇ ಸಿನೆಮಾವನ್ನು ಪ್ರದರ್ಶಿಸದಿರಲು ಮುಂಬಯಿ ಅಕಾಡೆಮಿ ಆಫ್ ಮೂವಿಂಗ್‌ ಇಮೇಜ್‌ (ಎಂಎಎಂಐ) ನಿರ್ಧರಿಸಿದೆ.

ಪಾಕ್‌ ಚಿತ್ರ ಕಲಾವಿದರನ್ನು ಹಾಗೂ ತಂತ್ರಜ`ರನ್ನು ಭಾರತೀಯ ಚಿತ್ರಗಳಲ್ಲಿ ನಿಷೇಧಿಸುವ ಕುರಿತ ವಿವಾದ ಜ್ವಲಂತವಾಗಿರುವ ಈ ಸಂದರ್ಭದಲ್ಲೇ ಮುಂಬಯಿ ಚಿತ್ರೋತ್ಸವದಲ್ಲಿ ಪಾಕಿಸ್ಥಾನದ ಯಾವುದೇ ಸಿನೆಮಾವನ್ನು ಪ್ರದರ್ಶಿಸದಿರಲು ನಿರ್ಧರಿಸಲಾಗಿರುವುದು ಗಮನಾರ್ಹವಾಗಿದೆ.

ನಿನ್ನೆಯಷ್ಟೇ ಎಂಎಎಂಐ ಮುಂಬಯಿ ಚಿತ್ರೋತ್ಸವ ಸಂಘಟಕರು, ಚಿತ್ರೋತ್ಸವದಲ್ಲಿ ಪಾಕ್‌ ಚಿತ್ರವೊಂದನ್ನು ಪ್ರದರ್ಶನಕ್ಕಾಗಿ ಆಯ್ಕೆ ಮಾಡಿದ್ದರು. ಈ ನಿರ್ಧಾರವನ್ನು ನಗರದ “ಸಂಘರ್ಷ್‌’ ಎಂಬ ಸಾಮಾಜಿಕ ಸಂಘಟನೆಯೊಂದು ಖಂಡಿಸಿ, ಈ ಬಗ್ಗೆ ಪ್ರತಿಭಟನೆ ನಡೆಸಲು ಪೊಲೀಸ್‌ ಅನುಮತಿ ಕೋರಿತ್ತು. ಈ ಹಿನ್ನೆಲೆಯಲ್ಲಿ ಮುಂಬಯಿ ಚಿತ್ರೋತ್ಸವ ಸಂಘಟಕರು ಪಾಕ್‌ ಸಿನೆಮಾ ಪ್ರದರ್ಶಿಸದಿರುವ ನಿರ್ಧಾರ ತಳೆದರು.

ಹದಿನೆಂಟನೇ ಮುಂಬಯಿ ಚಿತ್ರೋತ್ಸವವು ಇದೇ ಅಕ್ಟೋಬರ್‌ 20ರಿಂದ 27ರ ವರೆಗೆ ನಡೆಯಲಿದ್ದು 54 ದೇಶಗಳ ಸುಮಾರು 180ಕ್ಕೂ ಹೆಚ್ಚು ಸಿನೆಮಾಗಳು ಇಲ್ಲಿ  ಪ್ರದರ್ಶಿಸಲ್ಪಡಲಿವೆ.

ಭಾರತದ ಮೇಲಿನ ಉಗ್ರ ದಾಳಿಗಾಗಿ ಪಾಕ್‌ ಸಿನೆಮಾ ಮತ್ತು  ಚಿತ್ರ ಕಲಾವಿದರು ನಿಷೇಧಕ್ಕೆ ಗುರಿಯಾಗಿದ್ದಾರೆ.ಕಳೆದ ಶುಕ್ರವಾರ ಭಾರತದ ಸಿನೇಮಾ ಮಾಲಕರು ಮತ್ತು ಪ್ರದರ್ಶಕರ ಸಂಘವು ಪಾಕ್‌ ಕಲಾವಿದ ಫ‌ವಾದ್‌ ಖಾನ್‌ ನಟಿಸಿರುವ “ಏ ದಿಲ್‌ಹೈ ಮುಷ್‌ಕಿಲ್‌’ ಚಿತ್ರವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿತ್ತು.

No Comments

Leave A Comment