Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಕೋಟಿಲಿಂಗೇಶ್ವರನ ಸನ್ನಿಧಿಯಲ್ಲೇ ರಕ್ತಪಾತ; ಮಚ್ಚಿನಿಂದ ಕೊಲೆಗೆ ಯತ್ನ!

attemptಕೋಲಾರ: ಇಲ್ಲಿನ ಪ್ರಸಿದ್ಧ ಕೋಟಿಲಿಂಗೇಶ್ವರ ಸನ್ನಿಧಿಯಲ್ಲೇ ದೇಗುಲದ ಕಾರ್ಯದರ್ಶಿ ಕುಮಾರಿ (50) ಅವರ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಕೊಲೆಗೈಯಲು ಯತ್ನಿಸಿರುವ ಘಟನೆ ನಡೆದಿದ್ದು, ಈ ದೃಶ್ಯಗಳೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರದಲ್ಲಿರುವ ಪ್ರಸಿದ್ಧ ಕೋಟಿ ಶಿವಲಿಂಗ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಬೇರೆಯವರ ಜಮೀನನ್ನು ಕುಮಾರಿ ಅವರು ತಮ್ಮ ವಶಕ್ಕೆ ಪಡೆದಿರುವ ಆರೋಪದಲ್ಲಿ ಈ ಕೊಲೆ ಯತ್ನ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಭಾನುವಾರ ಸಂಜೆ ಕಮ್ಮಸಂದ್ರದ ಸಂತೋಷ್ ಮತ್ತು ಸ್ನೇಹಿತರು ಮಚ್ಚಿನಿಂದ ಕುಮಾರಿ ಅವರ ಕುತ್ತಿಗೆ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು 12 ಬಾರಿ ಮಚ್ಚು ಬೀಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕುಮಾರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment