Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಜಮ್ಮು ಕಾಶ್ಮೀರ: ಪೊಲೀಸರಿಂದ ರೈಫ‌ಲ್‌ ಕಸಿದು ಪರಾರಿಯಾದ ಉಗ್ರರು

jk-police-700ಶ್ರೀನಗರ : ಸೇನಾ ಸಮವಸ್ತ್ರದಲ್ಲಿ ಬಂದ ಉಗ್ರರು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಟಿವಿ ಟವರ್‌ ಕಾಯುತ್ತಿದ್ದ ಪೊಲೀಸರ ಕೈಯಿಂದ ಐದು ಸರ್ವಿಸ್‌ ರೈಫ‌ಲ್‌ ಕಸಿದು ಪಲಾಯನಗೈದಿರುವುದಾಗಿ ಪೊಲೀಸ್‌ ಅಧಿಕಾರಿಯೋರ್ವರು ಹೇಳಿದ್ದಾರೆ.

ಅನಂತ್‌ನಾಗ್‌ ಜಿಲ್ಲೆಯ ದೂರೂ ಪ್ರದೇಶದಲ್ಲಿದಲ್ಲಿನ ದಲ್ವಾಶ್‌ ಎಂಬಲ್ಲಿರುವ ಟಿವಿ ಟವರ್‌ ಕಾವಲು ಪೊಲೀಸರ ಕೋಣೆಗೆ ನಸುಕಿನ 12.30ರ ವೇಳೆಗೆ ನುಗ್ಗಿ ಸೇನಾ ಸಮವಸ್ತ್ರ ಧಾರಿ ಉಗ್ರರು ಅಲ್ಲಿದ್ದ ಪೊಲೀಸರಿಂದ ಐದು ಸರ್ವಿಸ್‌ ರೈಫ‌ಲ್‌ಗ‌ಳನ್ನು ಕಸಿದು ಪರಾರಿಯಾದರು ಎಂದು ಅಧಿಕಾರಿ ಹೇಳಿದ್ದಾರೆ.

ಉಗ್ರರು ಕಸಿದುಕೊಂಡಿರುವ ಐದು ಸರ್ವಿಸ್‌ ರೈಫ‌ಲ್‌ಗ‌ಳಲ್ಲಿ ಮೂರು ಎಸ್‌ಎಲ್‌ಆರ್‌ ರೈಫ‌ಲ್‌ಗ‌ಳು, ಒಂದು ಕಾರ್ಬೈನ್‌ ರೈಫ‌ಲ್‌ ಮತ್ತು ಒಂದು ಎಎನ್‌ಎಸ್‌ಎಎಸ್‌ ರೈಫ‌ಲ್‌ ಆಗಿದೆ. ಟಿವಿ ಟವರ್‌ ಕಾಯುತ್ತಿದ್ದ ಇಂಡಿಯಾ ರಿಸರ್ವ್‌ ಪೊಲೀಸ್‌ ಪಡೆ ಸಿಬಂದಿಗಳಿಂದ ಉಗ್ರರು ಇವನ್ನು ಕಸಿದುಕೊಂಡು ಪರಾರಿಯಾದರು.

ಇನ್ನೊಂದು ಪ್ರಕರಣದಲ್ಲಿ ಉಗ್ರರು ಪುಲ್ವಾಮಾ ಜಿಲ್ಲೆಯ ಸಿರ್ನೂ ಎಂಬಲ್ಲಿ ನಿನ್ನೆ ಭಾನುವಾರ ರಾತ್ರಿ ಅಲ್ಪ ಸಂಖ್ಯಾಕ ಸಮುದಾಯದವರಿಗೆ ರಕ್ಷಣೆ ನೀಡುತ್ತಿದ್ದ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು.

ಪೊಲೀಸ್‌ ಸಿಬಂದಿಗಳು ಒಡನೆಯೇ ಉಗ್ರರಿಗೆ ಗುಂಡಿನ ಪ್ರತ್ಯುತ್ತರ ನೀಡಿದ ಕಾರಣ ಉಗ್ರರು ಸ್ಥಳದಿಂದ ಕಾಲ್ಕಿತ್ತರು. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

No Comments

Leave A Comment