Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪುಣೆ ಸಮೀಪ ಹಾಡು ಹಗಲೇ ಬಿಜೆಪಿ ನಾಯಕ ಶೇಳ್ಕೆ ಭೀಕರ ಹತ್ಯೆ

murder-700ಪುಣೆ : ಪುಣೆಯಿಂದ 35 ಕಿ.ಮೀ. ದೂರದ ತಾಲೇಗಾಂವ್‌ ಧಬಾಡೆ ಎಂಬಲ್ಲಿ ಭಾನುವಾರ ಹಾಡುಹಗಲೇ 38ರ ಹರೆಯದ ಬಿಜೆಪಿ ನಾಯಕ, ತಾಲೇಗಾಂವ್‌ ಮುನಿಸಿಪಲ್‌ ಕೌನ್ಸಿಲ್‌ನ ಮಾಜಿ ಮೇಯರ್‌ ಆಗಿರುವ ಶಚಿನ್‌ ಶೇಳ್ಕೆ ಎಂಬವರನ್ನು ದುಷ್ಕರ್ಮಿಗಳ ಗುಂಪೊಂದು ಕೊಚ್ಚಿ ಕೊಲೆಗೈದ ಘಟನೆ ವರದಿಯಾಗಿದೆ.

ಶೇಳ್ಕೆ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಹಂತಕರು ಅವರನ್ನು ಭಾನುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಪೆಟ್ರೋಲ್‌ ಪಂಪ್‌ ಸಮೀಪ ಅಡ್ಡಗಟ್ಟಿದರು. ಶೇಳ್ಕೆ ಅವರನ್ನು ಹಂತಕರು ಮೊದಲು ಕಾರಿನಿಂದ ಕೆಳಗಿಳಿಯುವಂತೆ ಹೇಳಿದರು.

ಕಾರಿನಿಂದ ಹೊರ ಬರುತ್ತಿದ್ದಂತೆಯೇ ಹಂತಕರು ಶೇಳ್ಕೆ ಮೇಲೆ ಗುಂಡು ಹಾರಿಸಿದರು. ಬಳಿಕ ಹರಿತವಾದ ಆಯುಧದಿಂದ ಅವರನ್ನು ಕೊಚ್ಚಿ ಕೊಂದು ಪರಾರಿಯಾದರು ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಜೈ ಜಾಧವ್‌ ಹೇಳಿದ್ದಾರೆ. ಶೇಳ್ಕೆ ಅವರ ಹತ್ಯೆಗೆ  ಹಳೇ ವೈಷಮ್ಯ ಕಾರಣವಿರಬಹುದೆಂದು ಅವರು ಹೇಳಿದರು.

ಗುಂಡೇಟು ಹಾಗೂ ಮಾರಕಾಸ್ತ್ರಗಳ ದಾಳಿಗೆ ಗುರಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಶೇಳ್ಕೆ ಅವರನ್ನು ಸ್ಥಳದಲ್ಲಿದ್ದವರು ತತ್‌ಕ್ಷಣವೇ ಖಾಸಗಿ ಆಸ್ಪತ್ರೆಗೆ ಒಯ್ದರಾದರೂ ಅಲ್ಲಿನ ವೈದ್ಯರು ಶೇಳ್ಕೆ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಕ್ರಿಮಿನಲ್‌ ರೆಕಾರ್ಡ್‌ ಹೊಂದಿರುವ ಹಾಗೂ ಈಗ ತಲೆಮರೆಸಿಕೊಂಡಿರುವ ಶ್ಯಾಮ್‌ ದಾಭಡೆಯ ಸಹವರ್ತಿಗಳೆಂದು ಶಂಕಿಸಲಾಗಿರುವ ಹತ್ತು ಮಂದಿಯ ವಿರುದ್ಧ  ಶೇಳ್ಕೆ ಹತ್ಯೆಗೆ ಸಂಬಂಧಿಸಿ ಕೇಸು ದಾಖಲಿಸಲಾಗಿದೆ. ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಶೇಳ್ಕೆ ಹತ್ಯೆ ನಡೆದ ಸ್ಥಳದಲ್ಲಿನ ವಿದ್ಯಮಾನಗಳು ದಾಖಲಾದ ಸಿಸಿಟಿವಿ ಚಿತ್ರಿಕೆಯನ್ನು ಪೊಲೀಸರು ಅವಲೋಕಿಸುತ್ತಿದ್ದು ಉಳಿದ ಹಂತಕರಿದಾಗಿ ಬಲೆಬೀಸಿದ್ದಾರೆ.

No Comments

Leave A Comment