Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬೆಂಗಳೂರು ಬಸವೇಶ್ವರ ವೃತ್ತದಿಂದ ಮೇಖ್ರಿ ವೃತ್ತದವರೆಗೆ ಮಾನವ ಸರಪಳಿ ಉಕ್ಕಿನ ಸೇತುವೆ ವಿರುದ್ಧ ಬೀದಿಗಿಳಿದ ನಾಗರಿಕರು

ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆಯನ್ನು ವಿರೋಧಿಸಿ ‘ಉಕ್ಕಿನ ಮೇಲ್ಸೇತುವೆ ವಿರೋಧಿ ನಾಗರಿಕರು’ ಭಾನುವಾರ ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಬಸವೇಶ್ವರ ವೃತ್ತ, ಬಿಡಿಎ ಕಚೇರಿ, ಕಾವೇರಿ ಜಂಕ್ಷನ್, ಮೇಖ್ರಿ ವೃತ್ತದ ಬಳಿ ಬೆಳಿಗ್ಗೆ 8 ಗಂಟೆಯಿಂದ ಮಾನವ ಸರಪಳಿ  ಆರಂಭಗೊಂಡಿತು. 10 ಗಂಟೆ ವೇಳೆಗೆ ಬಸವೇಶ್ವರ ವೃತ್ತದಿಂದ ಮೇಖ್ರಿವರೆಗೆ ನಿರಂತರ ಮಾನವ ಸರಪಳಿ ನಿರ್ಮಾಣ ವಾಗಿತ್ತು. ಕೆಲವೆಡೆ ರಸ್ತೆಯ ಇಕ್ಕೆಲಗಳಲ್ಲೂ  ಪ್ರತಿಭಟನಾಕಾರರು ಸಾಲುಗಟ್ಟಿ ನಿಂತಿದ್ದರು.

ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ಹಾಗೂ ಬಿಡಿಎ  ವಿರುದ್ಧ  ಸಾವಿರಾರು ಪ್ರತಿಭಟನಾಕಾರರು ಘೋಷಣೆ ಕೂಗಿದರು. ‘ಉಕ್ಕಿನ  ಸೇತುವೆ ಬೇಡ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

‘ಉಕ್ಕಿನ ಸೇತುವೆ ವಿರೋಧಿ ನಾಗರಿಕರು’ (ಸಿಟಿಜನ್ಸ್‌ ಅಗೆನೆಸ್ಟ್‌ ಸ್ಟೀಲ್‌ ಫ್ಲೈಓವರ್‌) ಸಂಘಟನೆ  ಹಮ್ಮಿಕೊಂಡಿದ್ದ ಈ ಪ್ರತಿಭಟನೆಗೆ ನಮ್ಮ ಬೆಂಗಳೂರು ಪ್ರತಿಷ್ಠಾನ, ಸುಸ್ಥಿರತೆಗಾಗಿ ನಾಗರಿಕರು (ಸಿಐಎಫ್‌ಒಎಸ್‌), ಬೆಂಗಳೂರು ಗಾಲ್ಫ್‌ ಕ್ಲಬ್‌, ವಿವಿಧ ಕಡೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು, ಆಮ್‌ ಆದ್ಮಿ ಪಾರ್ಟಿ,  ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ಮತ್ತು ರೆವೆನ್ಯೂ ನಿವೇಶನದಾರರ ಸಂಘ, ಲಂಚಮುಕ್ತ ಕರ್ನಾಟಕ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಕೈಜೋಡಿಸಿದರು.

‘ಉಕ್ಕಿನ ಮೇಲ್ಸೇತುವೆ ಬೇಡ’, ‘ಮರಗಳನ್ನು ರಕ್ಷಿಸಿ ಪರಿಸರ ಉಳಿಸಿ’, ‘ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಿ’ ಎಂಬ ಘೋಷಣೆಗಳನ್ನು ಹೊಂದಿದ್ದ ಭಿತ್ತಿಚಿತ್ರಗಳನ್ನು ಹಿಡಿದು ಪ್ರತಿಭಟಿಸಿದರು.
*
ವಾಹನ ಸಂಚಾರಕ್ಕೆ ಅಡ್ಡಿ ಇಲ್ಲ
ಮಾನವ ಸರಪಳಿ ನಿರ್ಮಾಣದಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗದಂತೆ ಸ್ವಯಂಸೇವಕರು ಎಚ್ಚರ ವಹಿಸಿದ್ದರು. ರಸ್ತೆ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ಸಾಲಾಗಿ ನಿಂತು ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ.

No Comments

Leave A Comment