Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಭಾರತದ ಜತೆ ಉತ್ತಮ ಬಾಂಧವ್ಯ: ಡೊನಾಲ್ಡ್‌ ಟ್ರಂಪ್:ಉತ್ತಮ ಬಾಂಧವ್ಯ

trumpವಾಷಿಂಗ್ಟನ್‌:  ‘ನಾನು ಅಧಿಕಾರಕ್ಕೆ ಬಂದರೆ ಭಾರತದ ಜತೆಗಿನ ಬಾಂಧವ್ಯ ವನ್ನು ಮತ್ತಷ್ಟು  ಗಟ್ಟಿಗೊಳಿಸುವುದಾಗಿ’ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಭಾನುವಾರ ತಿಳಿಸಿದ್ದಾರೆ.

ಅನಿವಾಸಿ ಭಾರತೀಯರು ಆಯೋಜಿಸಿದ್ದ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರ ಜತೆಗೆ ಅಮೆರಿಕದ ಮಿತ್ರ ರಾಷ್ಟ್ರವಾಗಿದೆ. ಜಾಗತಿಕವಾಗಿ ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಭಾರತ ಅಪಾರ ಮಾನವ ಸಂಪನ್ಮೂಲ ಹೊಂದಿದ್ದು   ಬೌದ್ಧಿಕ ಮತ್ತು ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿದೆ’  ಎಂದು  ಟ್ರಂಪ್‌ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಇಂತಹ ದೇಶದ ಜೊತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವುದು ಅಮೆರಿಕಕ್ಕೆ ಹೆಮ್ಮೆ ತರುವ ವಿಚಾರ ಎಂದು ಟ್ರಂಪ್‌ ನುಡಿದರು.

ಮುಂದುವರಿದ ಲೈಂಗಿಕ ಕಿರುಕುಳ ಆರೋಪ: ಮಹಿಳೆಯರ ಕುರಿತ ಅಸಭ್ಯ ಹೇಳಿಕೆಗಳನ್ನು ನೀಡಿದ್ದ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರ ವಿಡಿಯೊ ಬಿಡುಗಡೆಯಾದ ಬೆನ್ನಲ್ಲೇ ಅವರ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಆರೋಪಗಳ ಸರಣಿ ಮುಂದುವರಿದಿದೆ.
ಟ್ರಂಪ್‌ ಅವರು ತಮ್ಮ ಜನನಾಂಗವನ್ನು ನೇವರಿಸಿ  ತಮ್ಮ ಮೇಲೆ ಬಲವಂತದಿಂದ ಲೈಂಗಿಕ ಕಿರುಕುಳ ಎಸಗಿದ್ದರು ಎಂದು ಮತ್ತಿಬ್ಬರು ಮಹಿಳೆಯರು ದೂರಿದ್ದಾರೆ.

‘2007ರಲ್ಲಿ ಡೊನಾಲ್ಡ್‌ ಟ್ರಂಪ್‌ ನನ್ನ ಜನನಾಂಗವನ್ನು ನೇವರಿಸಿ, ಅಸ್ವಾಭಾವಿಕ ಲೈಂಗಿಕ ಕೃತ್ಯವೆಸಗಿದ್ದರು ಎಂದು ರಿಯಾಲಿಟಿ ಟಿವಿ ಕಾರ್ಯಕ್ರಮದ ಮಾಜಿ ಸ್ಪರ್ಧಿ ಸಮ್ಮರ್‌ ಜರ್ವೋಸ್‌ ದೂರಿದ್ದಾರೆ.

1990ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ರಾತ್ರಿ  ಪಾರ್ಟಿಯಲ್ಲಿ ಟ್ರಂಪ್‌ ನನ್ನ ಜನನಾಂಗವನ್ನು ನೇವರಿಸಿ, ಕಿರುಕುಳ ನೀಡಿದ್ದರು ಎಂದು ಕ್ರಿಸ್ಟಿನಾ ಆ್ಯಂಡರ್‌ಸನ್‌ ನೀಡಿದ ಹೇಳಿಕೆಯನ್ನು ಶುಕ್ರವಾರ ವಾಷಿಂಗ್ಟನ್‌ ಪೋಸ್ಟ್ ವರದಿ ಮಾಡಿದೆ.

ಈ ಆರೋಪಗಳೆಲ್ಲವೂ ‘ಸುಳ್ಳು’ ಎಂದಿರುವ ಟ್ರಂಪ್‌, ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ತಿರುಗೇಟು ನೀಡಿದ್ದಾರೆ.

No Comments

Leave A Comment