Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಭೂಗತ ಪಾತಕಿ ದಾವೂದ್ ಜೀವ ಬೆದರಿಕೆ?

afridi-mಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಂದ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹಾಗೂ ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ನಡುವಿನ ಜಗಳ ತಾರಕಕ್ಕೇರಿದ್ದು, ಇವರಿಬ್ಬರ ಜಗಳದಲ್ಲಿ ಇದೀಗ ಭೂಗತ ಪಾತಕಿಯ  ದಾವೂದ್ ಇಬ್ರಾಹಿಂ ಪ್ರವೇಶ ಮಾಡಿದ್ದಾನೆ. ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ಗೆ ಸಂಬಂಧಿಕ ಕೂಡ ಆಗಿರುವ ದಾವೂದ್ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ  ಎಂದು ಹೇಳಲಾಗುತ್ತಿದೆ.
ಮಿಯಾಂದಾದ್ ಹಾಗೂ ಆಫ್ರಿದಿ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 12ರ ಸಂಜೆ ಕರೆ ಮಾಡಿರುವ ದಾವೂದ್, ಬಾಯಿಗೆ ಬಂದಂತೆ  ಮಾತನಾಡುವುದನ್ನು ನಿಲ್ಲಿಸು, ಇಲ್ಲದಿದ್ದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ಈ ಹಿಂದೆ ಪಾಕಿಸ್ತಾನದ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಜಾವೆದ್ ಮಿಯಾಂದಾದ್ ಶಾಹಿದ್ ಅಫ್ರಿದಿ ಓರ್ವ ಭ್ರಷ್ಟ ಕ್ರಿಕೆಟಿಗನಾಗಿದ್ದು, ಹಣಕ್ಕಾಗಿ ಈ ಹಿಂದೆ ಮ್ಯಾಚ್  ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು. ಈಗ ಹಣಕ್ಕಾಗಿ ವಿದಾಯದ ಪಂದ್ಯ ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಅಫ್ರಿದಿ, ಮಿಯಾಂದಾದ್ ಯಾವಾಗಲೂ  ಹಣದ ಕುರಿತಂತೆ ಚಿಂತಿಸುತ್ತಿರುತ್ತಾರೆ.
ಈಗಲೂ ಕೂಡ ಅವರು ಅದನ್ನೇ ಮಾಡುತ್ತಿದ್ದು, ಅವರ ಸ್ಥಾನಕ್ಕೆ ತಕ್ಕ ಮಾತುಗಳನ್ನಾಡಲಿ. ಇದೇ ಇಮ್ರಾನ್ ಖಾನ್ ಹಾಗೂ ಮಿಯಾಂದಾದ್ ಅವರ  ನಡುವಿನ ವ್ಯತ್ಯಾಸವಾಗಿದೆ. ಮಿಯಾಂದಾದ್ ತಮ್ಮ ಆರೋಪಗಳನ್ನು ನಿಲ್ಲಿಸದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಫ್ರಿದಿ ಎಚ್ಚರಿಕೆ ನೀಡಿದ್ದರು.
ಇದರ ನಡುವೆಯೇ ದಾವೂದ್ ಇಬ್ರಾಹಿಂ ಶಾಹಿದ್ ಅಫ್ರಿದಿಗೆ ಬೆದರಿಕೆ ಹಾಕಿರುವುದು ಪಾಕಿಸ್ತಾನ ಕ್ರಿಕೆಟ್ ರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೆದ್  ಮಿಯಾಂದಾದ್ ಅವರ ಪುತ್ರನನ್ನು ದಾವೂದ್ ಇಬ್ರಾಹಿಂ ಪುತ್ರಿ ವಿವಾಹವಾಗಿದ್ದು, ಇಬ್ಬರೂ ಇದೀಗ ಸಂಬಂಧಿಗಳಾಗಿದ್ದಾರೆ. ಇದೇ ಕಾರಣಕ್ಕೆ ಶಾಹಿದ್ ಅಫ್ರಿದಿಗೆ ದಾವೂದ್ ಬೆದರಿಕೆ ಹಾಕಿದ್ದಾನೆ  ಎಂದು ಹೇಳಲಾಗುತ್ತಿದೆ.
No Comments

Leave A Comment