Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಟೀಂ ಇಂಡಿಯಾ ಐತಿಹಾಸಿಕ 900ನೇ ಏಕದಿನ ಪಂದ್ಯ: ಅಲ್ಪ ಮೊತ್ತಕ್ಕೆ ಕುಸಿದ ನ್ಯೂಜಿಲೆಂಡ್

nz-vs-indಧರ್ಮಶಾಲಾ: ಐತಿಹಾಸಿಕ 900ನೇ ಏಕದಿನ ಪಂದ್ಯವನ್ನಾಡುತ್ತಿರುವ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ್ದು, ಕೇವಲ 190 ರನ್ ಗಳಿಗೆ ವಿಲಿಯಮ್ಸನ್ ಬಳಗ  ಆಲ್ ಔಟ್ ಆಗಿದೆ.
ಧರ್ಮಶಾಲಾದಲ್ಲಿ ಇಂದು ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ನಾಯಕ ಮಹೇಂದ್ರ ಸಿಂಗ್  ಧೋನಿ ಭರವಸೆಯನ್ನು ಹುಸಿಗೊಳಿಸದ ಭಾರತೀಯ ಬೌಲರ್ ಗಳು ಕಿವೀಸ್ ಆಟಗಾರರ ವಿರುದ್ಧ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದರು. ಹಾರ್ಧಿಕ್ ಪಾಂಡ್ಯಾ, ಉಮೇಶ್ ಯಾದವ್ ಹಾಗೂ  ಜಾಧವ್ ಮಾರಕ ಬೌಲಿಂಗ್ ಪ್ರದರ್ಶನ ಮಾಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಕೇವಲ 190 ರನ್ ಗಳಿಗೆ ಕಟ್ಟಿಹಾಕಿದರು.ಆರಂಭಿಕ ಆಟಗಾರ ಲಾಥಮ್ ರನ್ನು ಹೊರತು ಪಡಿಸಿದರೆ ನಾಯಕ ವಿಲಿಯಮ್ಸನ್ ಸೇರಿದಂತೆ ಕಿವೀಸ್ ಪಡೆಯ ಎಲ್ಲ ಬ್ಯಾಟ್ಸಮನ್ ಗಳೂ ಪೆವಿಲಿಯನ್ ಪರೇಡ್ ನಡೆಸಿದರು. ಪಂದ್ಯದ 2ನೇ  ಓವರ್ ನಲ್ಲೇ ನ್ಯೂಜಿಲೆಂಡ್ ಗೆ ಮೊದಲ ಆಘಾತ ನೀಡಿದ ಭಾರತ, ಎರಡನೇ ಓವರ್ ನ ಅಂತಿಮ ಎಸೆತದಲ್ಲಿ ಪಾಂಡ್ಯಾ ಮಾರ್ಟಿನ್ ಗಪ್ಟಿಲ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ  ಮೊದಲ ಮುನ್ನಡೆಯನ್ನು ತಂದಿತ್ತರು.
ಬಳಿಕ ನಾಯಕ ವಿಲಿಯಮ್ಸನ್ ಕೇವಲ 3 ರನ್ ಗಳಿಸಿ ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದರೆ, ಟೇಲರ್ ಕೂಡ ಬಂದಷ್ಟೇ ವೇಗವಾಗಿ ಶೂನ್ಯ ಸುತ್ತಿ  ಯಾದವ್ ಬೌಲಿಂಗ್ ನಲ್ಲಿ ಧೋನಿಗೆ ಕ್ಯಾಚಿತ್ತು ಹೊರ ನಡೆದರು. ಬಳಿಕ ಆ್ಯಂಡರ್ಸನ್ (4), ರೊಂಚಿ (0) ವಿಕೆಟ್ ಅನ್ನು ಪಾಂಡ್ಯಾ ಕಬಳಿಸಿದರು. ಕೆಳಕ್ರಮಾಂಕದ ಆಟಗಾರ ನೀಶಂರ ವಿಕೆಟ್ ಅನ್ನು  ಜಾಧವ್ ಪಡೆದರು.ಬಳಿಕ ಸಾಂಥನರ್(0), ಬ್ರೇಸ್ ವೆಲ್ (15) ಕೂಡ ಔಟ್ ಆದರು. ಆದರೆ ಈ ಹಂತದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಗೆ ಕೆಳ ಕ್ರಮಾಂಕದ ಆಟಗಾರ ಸೌಥಿ ಬಲ ತುಂಬಿದರು. ಏಕಾಂಗಿಯಾಗಿ  ಹೋರಾಟ ನಡೆಸುತ್ತಿದ್ದ ಲಾಥಮ್ ಗೆ ಸಾಥ್ ನೀಡಿದ ಸೌಥಿ ಅರ್ಧಶತಕ ಗಳಿಸಿ ಕಿವೀಸ್ ಬ್ಯಾಟಿಂಗ್ ಗೆ ಜೀವ ತುಂಬಿದರು.
ಇದೇ ಸಂದರ್ಭದಲ್ಲಿ ಲಾಥಮ್ ಕೂಡ ಅರ್ಧಶತಕ ಸಿಡಿಸಿದ್ದರು. ಆದರೆ   42ನೇ ಓವರ್ ನಲ್ಲಿ ಸೌಥಿ ಮಿಶ್ರಾ ಬೌಲಿಂಗ್ ನಲ್ಲಿ ಪಾಂಡೆಗೆ ಕ್ಯಾಚಿತ್ತು ಹೊರ ನಡೆದರು.ಅಂತಿಮವಾಗಿ ವಿಲಿಯಮ್ಸನ್ ಪಡೆ 45 ಓವರ್ ಗಳಲ್ಲಿ 190 ರನ್ ಗಳಿಗೆ ಆಲ್ ಔಟ್ ಆಯಿತು. ಆ ಮೂಲಕ ಭಾರತಕ್ಕೆ ಗೆಲ್ಲಲ್ಲು 191 ರನ್ ಗಳ ಗುರಿ ನೀಡಿದರು.ಭಾರತದ ಪರ ಹಾರ್ಧಿಕ್ ಪಾಂಡ್ಯಾ, ಮಿಶ್ರಾ ತಲಾ 3 ವಿಕೆಟ್ ಪಡೆದರೆ, ಯಾದವ್ ಹಾಗೂ ಜಾಧವ್ ತಲಾ 2 ವಿಕೆಟ್ ಪಡೆದು ಮಿಂಚಿದರು.
No Comments

Leave A Comment