Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಕೃಷ್ಣಾ ಮಠ ಮುತ್ತಿಗೆ ಹಾಕುವವರಿಗೆ ಸ್ವಾಗತಿಸಲು ಉಡುಪಿ ಜೆಲ್ಲಾ ಬಿಜೆಪಿ ಯುವಮೋರ್ಚಾ ಸನ್ನದ್ಧ :ಪೆರ್ಣಂಕಿಲ ಶ್ರೀಶ ನಾಯಕ್

22
ಉಡುಪಿ:ಪಂಕ್ತಿಭೇದ ನಡೆಯುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಉಡುಪಿ ಕೃಷ್ಣಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆಯನ್ನು ಒಡ್ಡಿವೆ. ಕೃಷ್ಣಮಠದಲ್ಲಿ ಪಂಕ್ತಿಭೇದ ನಡೆಯುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಎಲ್ಲಾ ದೇವಾಲಯಗಳಲ್ಲಿರುವಂತೆ ಇಲ್ಲಿಯೂ ಸಂಪ್ರದಾಯಸ್ಥ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದೆ. ಇದು ಯಾವುದೇ ಸಮುದಾಯದ ಭಾವನೆಗಳಿಗೆ ದಕ್ಕೆ ತರುವ ಸಾಧ್ಯತೆ ಇಲ್ಲ.ಆದರೂ ಪೇಜಾವರಶ್ರೀಗಳನ್ನು ಗುರಿಯಾಗಿರಿಸಿಕೊಂಡು ಮೊನ್ನೆ ಅವಹೇಳನಕಾರಿ ಭಾಷಣ ಮಾಡಲಾಗಿದೆ.

ಶ್ರೀಗಳ ಬಗ್ಗೆ ಉಡುಪಿ ಚಲೋ ಕಾರ್ಯಕ್ರಮದಲ್ಲಿ ಕೆಟ್ಟದಾಗಿ ಮಾತನಾಡಿದ ದ್ವಾರಕಾನಾಥ್, ದಿನೇಶ್ ಅಮೀನ್ ಮಟ್ಟು ಮತ್ತಿತರರ ಮೇಲೆ ಪೊಲೀಸರು ಕಾನೂನುಕ್ರಮ ಕೈಗೊಳ್ಳಬೇಕು ಎಂದು ಯುವಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆ ಮತ್ತು ಕೇಂದ್ರ ಸರಕಾರದ ಜನಪ್ರಿಯತೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ದಲಿತರನ್ನು ದಾಳವಾಗಿ ಬಳಸಿಕೊಂಡು ಕೆಟ್ಟ ರಾಜಕಾರಣ ನಡೆಸುತ್ತಿದೆ. ಗುಜರಾತಿನಲ್ಲಿ ನಡೆದ ಊನಾ ಚಲೋ ಮತ್ತು ಇಲ್ಲಿ ನಡೆದಿರುವ ಉಡುಪಿ ಚಲೋ ಈ ಗುಪ್ತ ಕಾರ್ಯಸೂಚಿಯ ಪುಟ್ಟ ಭಾಗಗಳಾಗಿವೆ. ಉಡುಪಿ ಚಲೋ ಕಾರ್ಯಕ್ರಮದ ಎಲ್ಲಾ ರೂಪುರೇಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾದ್ಯಮ ಸಲಹೆಗಾರರೇ ತಯಾರಿಸಿದ್ದರು ಎನ್ನುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ದಲಿತರನ್ನು ಹಿಂದೂ ಸಮಾಜದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವವರು ದಾರಾಳ ಬರಬಹುದು. ನಿಮ್ಮ ಎಲ್ಲಾ ರೀತಿಯ ಸ್ವಾಗತಕ್ಕೆ ನಾವು ಸಿದ್ಧರಿದ್ದೇವೆ.ಯುವ ಮೋರ್ಚಾ ಕಾರ್ಯಕರ್ತರು ಹೋರಾಟವನ್ನೇ ಮೈಗೂಡಿಸಿಕೊಂಡು ಬಂದವರು. ಒಂದು ವೇಳೆ ನೀವು ಮುತ್ತಿಗೆ ಹಾಕುವುದೇ ಹೌದಾದರೆ ನಿಮ್ಮ ಸ್ವಾಗತಿಸಲು ನಿಮಗಿಂತ ಹತ್ತು ಪಟ್ಟು ಹೆಚ್ಚು ಸಂಖ್ಯೆಯಲ್ಲಿ ನಾವೂ ಬರಲಿದ್ದೇವೆ. ಉಡುಪಿಯ ಜನರ ಆತಿಥ್ಯ ಹೇಗಿರುತ್ತದೆ ಎನ್ನುವುದನ್ನು ಇಡೀ ದೇಶವೇ ನೋಡುವಂತಾಗಲಿ ಎಂದು ಎಚ್ಚರಿಕೆ ನೀಡಿದ್ದಾರೆ.

No Comments

Leave A Comment