Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಪೇಜಾವರ ಶ್ರೀ ಬಗ್ಗೆ ಯೋಗೇಶ್‌ ವ್ಯಂಗ್ಯ:ಅವಹೇಳನ ಖಂಡಿಸಿ ಪ್ರತಿಭಟನೆ

50ಬೆಂಗಳೂರು: ವಿವಾದಾತ್ಮಕ ಹೇಳಿಕೆಗಳಿಂದ ಖ್ಯಾತಿ ಪಡೆದಿರುವ ಸಾಹಿತಿ ಯೋಗೇಶ್‌ ಮಾಸ್ತರ್‌, ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರ ಕುರಿತು ವ್ಯಂಗ್ಯ ಬರಹವನ್ನು ಫೇಸ್‌ಬುಕ್‌ನಲ್ಲಿ “ಅಪ್‌ಲೋಡ್‌’ ಮಾಡಿದ್ದಾರೆ.

ತಮ್ಮ ಬರಹದಲ್ಲಿ ಪೇಜಾವರ ಶ್ರೀಗಳನ್ನು ಮಗುವಿಗೆ ಹೋಲಿಕೆ ಮಾಡಿರುವ ಯೋಗೇಶ್‌ ಮಾಸ್ತರ್‌, ನಿನ್ನ ಗೊಂಬೆ(ಶ್ರೀಕೃಷ್ಣ)ಯನ್ನುಕಿತ್ತುಕೊಳ್ಳುವುದಿಲ್ಲ. ನಿನ್ನೊಂದಿಗೆ ಸಹಪಂಕ್ತಿಯಲ್ಲಿ ಊಟಕ್ಕೂ ಕೂರುವುದಿಲ್ಲ.ನಿನ್ನ ಗೊಂಬೆ ಮನೆಗೂ ಬರುವುದಿಲ್ಲ ಎಂದು ಟೀಕೆಗೆ ಗುರಿಯಾಗಿದ್ದಾರೆ.

ತಾಕತ್ತಿದ್ದರೆ ಕೃಷ್ಣಮಠಕ್ಕೆ ಮುತ್ತಿಗೆ ಹಾಕಿ ನೋಡೋಣ: ಅನ್ಸಾರ್‌

ಉಡುಪಿ: ಉಡುಪಿ ಚಲೋ ಎನ್ನುವ ಕಾರ್ಯಕ್ರಮದಲ್ಲಿ ಗುಜರಾತಿನಿಂದ ಬಂದ ವ್ಯಕ್ತಿಯೊಬ್ಬ ಬಾಯಿಗೆ ಬಂದಂತೆ ಮಾತನಾಡಿ ಉಡುಪಿಯ ಸೌಹಾರ್ದತೆಯನ್ನು ಕೆಡಿಸಲು ಹೊರಟಿದ್ದಾನೆ. ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾನೆ.

ತಾಕತ್ತಿದ್ದರೆ ಮುತ್ತಿಗೆ ಹಾಕಲಿ. ಅದನ್ನು ಹೇಗೆ ತಡೆಯುವುದೆಂದು ನಮಗೆ ತಿಳಿದಿದೆ ಎಂದು ಮುಸ್ಲಿಂ ಮುಂದಾಳು, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್‌ ಅಹಮ್ಮದ್‌ ಅವರು ಹೇಳಿದರು.

ಪೇಜಾವರ ಶ್ರೀ ಬ್ಲಿಡ್‌ ಡೊನೇಶನ್‌ ಟೀಂನ ವತಿಯಿಂದ ಉಡುಪಿಯ ಸಂಸ್ಕೃತ ಕಾಲೇಜು ಸರ್ಕಲ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪೇಜಾವರ ಶ್ರೀಗಳು ನೇರನಡೆ ನುಡಿಯವರಾಗಿರ ಬಹುದು. ಆದರೆ ಅವರು ಹಿಂದು ಗಳಂತೆಯೇ ದಲಿತರಿಂದ ಹಿಡಿದು ಮುಸ್ಲಿಂ, ಕ್ರಿಶ್ಚಿಯನ್‌ ಮೊದಲಾದ ಸರ್ವಧರ್ಮೀಯರನ್ನು ಕೂಡ ಒಂದೇ ರೀತಿಯಾಗಿ ಕಾಣುತ್ತಾರೆ. ಎಲ್ಲಿಂದಲೋ ಬಂದ ಗುಜರಾತಿನ ಆ ವ್ಯಕ್ತಿಗೆ ಶ್ರೀಕೃಷ್ಣ ಮಠದ ಬಗ್ಗೆ ಏನು ಗೊತ್ತಿದೆ? ಮಠಕ್ಕೆ ಇರುವ ದಾರಿಗಳೆಷ್ಟು ಎಂದು ಆತನಿಗೆ ತಿಳಿದಿದೆಯೇ? ಪೇಜಾವರ ಶ್ರೀಗಳು ದಲಿತರ ವಿರೋಧಿ ಎನ್ನುವಂತೆ ಆತ ಬಿಂಬಿಸಿದ್ದಾನೆ. ಪೇಜಾವರ ಶ್ರೀಯವರು ದಲಿತರ ಅಭಿವೃದ್ಧಿಗೆ ನೀಡಿದಷ್ಟು ಒತ್ತು ಆತ ನೀಡಿದ್ದಾನೆಯೇ? ಪೇಜಾವರ ಶ್ರೀಗಳ ಬಗ್ಗೆ ಆತನಾಡಿದ ಮಾತುಗಳು ಖಂಡನೀಯ. ಮುಂದಿನ ಹೋರಾಟದ ಕುರಿತು ಪೇಜಾವರ ಶ್ರೀಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದವರು ಹೇಳಿದರು. ಪೇಜಾವರ ಶ್ರೀ ಬ್ಲಿಡ್‌ ಡೊನೇಶನ್‌ ಟೀಂನ ಅಧ್ಯಕ್ಷ ಮಹಮ್ಮದ್‌ ಆರಿಫ್, ರಾಧಾಕೃಷ್ಣ ಶೆಟ್ಟಿ, ಜೋಸೆಫ್ ಸಲ್ದಾನ, ಸಾಹಿಲ್‌ ರಹಮತುಲ್ಲಾ, ಮಮ್ತಾಜ್‌ ಅಲಿ, ಆರಿಫ್ ಅಜ್ಜರಕಾಡು, ಅರ್ಶದ್‌, ಅಬ್ದುಲ್‌ ಪಾಲ್ಗೊಂಡಿದ್ದರು.

No Comments

Leave A Comment