Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಮತ್ತೆ ಕಾಶ್ಮೀರದಲ್ಲಿ ಸೇನೆ ಮೇಲೆ ಉಗ್ರ ದಾಳಿ: ಓರ್ವ ಯೋಧ ಹುತಾತ್ಮ

14-nt-7ಶ್ರೀನಗರ: ಜಮ್ಮು- ಕಾಶ್ಮೀರದ ಉರಿ ಸೇನಾನೆಲೆ ಮೇಲಿನ ದಾಳಿಯ ಅನಂತರ 26 ದಿನಗಳಲ್ಲಿ 6ನೇ ಬಾರಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸೇನೆಯ ಅಂಗವಾದ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ತುಕಡಿಯ ಮೇಲೆ ಉಗ್ರರು ಶುಕ್ರವಾರ ಸಂಜೆ ದಾಳಿ ನಡೆ ಸಿದ್ದು, ಓರ್ವ ಯೋಧ ಹುತಾತ್ಮನಾಗಿ 8 ಯೋಧರು ಗಾಯಗೊಂಡಿದ್ದಾರೆ.

ಶ್ರೀನಗರದಲ್ಲಿ ಭದ್ರತಾ ಕೆಲಸಗಳನ್ನು ಮುಗಿಸಿ ಯೋಧರು ತಮ್ಮ ಮೂಲ ಶಿಬಿರಕ್ಕೆ ತೆರಳುತ್ತಿದ್ದರು. ಆಗ ಅವರ ವಾಹನಗಳ ಮೇಲೆ ಹೊರ ವಲಯದ ಝಾಕೂರಾ ಎಂಬಲ್ಲಿ, ರಸ್ತೆಯ ಪಕ್ಕ ಅವಿತಿದ್ದ 2-3 ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. 6 ಸೇನಾ ವಾಹನಗಳಲ್ಲಿ ಕೊನೆಯ ವಾಹನವು ದಾಳಿಗೆ ತುತ್ತಾಗಿದೆ. ಯೋಧರು ಪ್ರತಿ ದಾಳಿ ಮಾಡುತ್ತಿದ್ದಂತೆಯೇ ಉಗ್ರರು ಪರಾರಿಯಾಗಿದ್ದಾರೆ ಎಂದು ಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳು ಯೋಧರಲ್ಲಿ ಓರ್ವ ಪೊಲೀಸ್‌ ಕೂಡ ಸೇರಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.

No Comments

Leave A Comment