Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೆಳಗಾವಿ ಸಾಂಬ್ರಾ ಏರ್ ಪೋರ್ಟ್ ಗೆ ನುಗ್ಗಲು ಯತ್ನ; ನಾಲ್ವರು ವಶಕ್ಕೆ

belgavi-airportಬೆಳಗಾವಿ: ಸುಮಾರು 12 ಮಂದಿ ಅಪರಿಚಿತ ವ್ಯಕ್ತಿಗಳು 12 ಅಡಿ ಎತ್ತರದ ಗೋಡೆ ಹಾರಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ರನ್ ವೇಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಆಗ್ನೇಯ ದಿಕ್ಕಿನಲ್ಲಿನ ಗೋಡೆ ಹಾರಿ ಒಳ ಬರಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬಂದುಕೂ ತೋರಿಸಿ ತಡೆಯಲು ಯತ್ನಿಸಿದ್ದರಿಂದ ಸುಮಾರು 8 ಮಂದಿ ಗೋಡೆ ಹಾರಿ ಪರಾರಿಯಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಮೂವರು ಜನ ಬೆಳಗಾವಿ ಯುವಕರಾಗಿದ್ದು, ಒಬ್ಬ ಹೈದರಾಬಾದ್ ಮೂಲದವನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಇವರು ಯಾಕೆ ವಿಮಾನ ನಿಲ್ದಾಣದೊಳಕ್ಕೆ ನುಗ್ಗಲು ಯತ್ನಿಸಿದರು, ಉದ್ದೇಶ ಏನು ಎಂಬ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

No Comments

Leave A Comment