Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಪಿ‌ಐ‌ಎಂನ ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ

dsc_2398‘ಆತ್ಮಸ್ಥೈರ್ಯ ಹಾಗೂ ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ಈ ವಿದ್ಯಾಸಂಸ್ಥೆಯಿಂದ ಪಡೆದೆ ಎಂದು ಹಳೆ ವಿದ್ಯಾರ್ಥಿಗಳು ಹೇಳುವುದೇ ಸಂಸ್ಥೆಯ ಸಾಪಲ್ಯಕ್ಕೆ ಸಾಕ್ಷಿ’ ಎಂದು ಉಡುಪಿ ಶ್ರೀ ಅದಮಾರು ಮಠದ ಪೀಠಾಧಿಪತಿಗಳು ಹಾಗೂ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಪೂಜ್ಯ ಶ್ರೀಪಾದರು, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನಜ್‌ಮೆಂಟ್‌ನಲ್ಲಿ ರೂಪುಗೊಂಡ ಹಳೆವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಾಲಿನ ಅಂತಿಮ ಎಂಬಿ‌ಎ ವಿದ್ಯಾರ್ಥಿಗಳೂ ಸೇರಿದಂತೆ, ಈ ವರೆಗಿನ ಹತ್ತು ಎಂಬಿ‌ಎ ತಂಡಗಳ 600 ವಿದ್ಯಾರ್ಥಿಗಳ ಹೆಸರು, ವಿಳಾಸ, ಇಮೇಲ್ ಐಡಿ, ದೂರವಾಣಿ ಸಂಖ್ಯೆ ಮುಂತಾದ ಎಲ್ಲಾ ವಿವರಗಳನ್ನೊಳಗೊಂಡ ಪುಸ್ತಕವನ್ನು ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಪಾದಂಗಳವರು ಬಿಡುಗಡೆ ಮಾಡಿದರು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾಗಿ ಶ್ರೀ ನರಸಿಂಹ ಎಸ್.ಎಸ್., ಉಪಾಧ್ಯಕ್ಷರುಗಳಾಗಿ ಶ್ರೀ ಗಿರೀಶ್ ಐತಾಳ್ ನಾಗೂರು ಹಾಗೂ ಶ್ರೀ ಪ್ರಮೋದ್ ಶೇಟ್, ಕಾರ್ಯಧರ್ಶಿಯಾಗಿ ಶ್ರೀಮತಿ ಡಯಾನ ಸಲ್ಡಾನಾ, ಮತ್ತು ಜತೆಕಾರ್ಯದರ್ಶಿಗಳಾಗಿ ಶ್ರೀ ಉಮೇಶ್ ಬಾಧ್ಯ ಹಾಗೂ ಶ್ರೀ ಸಂದೇಶ್ ಕುಮಾರ್ ನಿಯುಕ್ತಿಗೊಂಡರು. ‘ಪಿ.ಐ..ಎಂ.ನ ಏಳಿಗೆಗಾಗಿ ಕಟಿಬದ್ದರಾಗಿದ್ದು, ಸಕಲ ರೀತಿಯಲ್ಲಿ ಸಂಸ್ಥೆಯ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ’ ಕಾರ್ಯಾಧ್ಯಕ್ಷ ಶ್ರೀ ನರಸಿಂಹ ಎಸ್.ಎಸ್., ಹಾಗೂ ಉಪಾಧ್ಯಕ್ಷ ಶ್ರೀ ಗಿರೀಶ್ ಐತಾಳ್ ತಿಳಿಸಿದರು.

ಪಿ.ಐ.ಎಂ.ನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಜಿ. ಎಸ್. ಚಂದ್ರಶೇಖರ್‌ರವರು ಮಾತನಾಡಿ, ‘ಸಂಘಶಕ್ತಿ’ ಯಿಂದ ಎಲ್ಲವೂ ಸಾಧ್ಯ. ಈ ಸಂಘ ಪಿ.ಐ.ಎಂ.ಗೆ ಇನ್ನೂ ಹೆಚ್ಚಿನ ಬಲ ಕೊಡಲು ಸಾಧ್ಯ ಎಂದರು.

ಪೂರ್ಣಪ್ರಜ್ಞ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಸಂಚಾಲಕರಾದ ಡಾ. ಕೃಷ್ಣ ಕೊತಾಯ, ಸಂಘಕ್ಕೆ ಶುಭಕೋರಿ, ಪದಾದಿಕಾರಿಗಳು ಉತ್ತಮ ಕೆಲಸ ಮಾಡಲೆಂದು ಹಾರೈಸಿದರು.

ಪಿ.ಐ..ಎಂ.ನ ನಿರ್ದೇಶಕರಾದ ಡಾ. ಎಂ. ಆರ್. ಹೆಗಡೆ, ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಉದ್ದಿಶ್ಯಗಳನ್ನು ವಿವರಿಸಿದರು. ಪ್ರಾಕ್ತನ ಹಾಗೂ ಪ್ರಸಕ್ತ ವಿದ್ಯಾರ್ಥಿಗಳು ಈ ಸಂಘದ ಸದುಪಯೋಗ ಪಡೆಯಬೇಕೆಂದು ಅವರು ಆಶಿಸಿದರು.

No Comments

Leave A Comment