Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಮುಂಬೈ ಉಗ್ರ ದಾಳಿ “ಹೀರೋ ಸೀಸರ್” ವಿಧಿವಶ

police-dog-caesarನವದೆಹಲಿ: 26/11 ಮುಂಬೈ ದಾಳಿ ವೇಳೆ ಉಗ್ರದಾಳಿಯನ್ನು ಪತ್ತೆ ಮಾಡಿ ನೂರಾರು ನಾಗರಿಕರ ಸಾವನ್ನು ತಪ್ಪಿಸಿದ್ದ ಮುಂಬೈ ಪೊಲೀಸ್ ಶ್ವಾನ ಸೀಸರ್ ಗುರುವಾರ ರಾತ್ರಿ ಸಾವನ್ನಪ್ಪಿದೆ  ಎಂದು ತಿಳಿದುಬಂದಿದೆ.

ಹನ್ನೊಂದು ವರ್ಷ ವಯಸ್ಸಿನ ಸೀಸರ್ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿತ್ತು. ಕಳೆದ ಕೆಲ ದಿನಗಳಿಂದ ಹಿಂದೆ ನಾಯಿ ಆರೋಗ್ಯ ತೀರಾ ಹದಗೆಟ್ಟು ನಡೆಯಲೂ  ಆಗದ ಸ್ಥಿತಿಯಲ್ಲಿತ್ತು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಸೀಸರ್ ಆರೋಗ್ಯದಲ್ಲಿ ಕಳೆದೊಂದು ವಾರದಲ್ಲಿ ತಕ್ಕ ಮಟ್ಟಿನ ಚೇತರಿಕೆ ಕಂಡಿತ್ತು. ಇದರಿಂದ ಸೀಸರ್ ಮೊದಲಿನಂತೆ ಓಡಾಡಬಹುದು  ಎಂಬ ಆಶಾಭಾವ ಹೊಂದಿದ್ದೇವು.

ಆದರೆ ಅದು ಹುಸಿಯಾಗಿದ್ದು, ನಿನ್ನೆ ತಡರಾತ್ರಿಯಲ್ಲಿ ಸೀಸರ್ ಸಾವನ್ನಪ್ಪಿದೆ.ಮುಂಬೈ ಉಗ್ರ ದಾಳಿ ವೇಳೆ ತಾಜ್ ಹೊಟೆಲ್ ನಲ್ಲಿ ಅಡಗಿದ್ದ ಉಗ್ರರ ಜಾಡು ಹಿಡಿಯುವಲ್ಲಿ ಸೀಸರ್ ಪ್ರಮುಖ ಪಾತ್ರ ವಹಿಸಿತ್ತು. ಸೀಸರ್ ನೊಂದಿಗೆ ಇಲಾಖೆಯ ಇತರೆ ಶ್ವಾನಗಳಾದ ಮ್ಯಾಕ್ಸ್,  ಸುಲ್ತಾನ್ ಮತ್ತು ಟೈಗರ್ ಎಂಬ ನಾಯಿಗಳು ಸಹಾಯ ಮಾಡಿದ್ದವು. ಈ ನಾಲ್ಕು ಪೊಲೀಸ್ ನಾಯಿಗಳಲ್ಲಿ ಮ್ಯಾಕ್ಸ್ ಮತ್ತು ಸುಲ್ತಾನ್ ನಾಯಿಗಳು ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ  ಸಾವನ್ನಪ್ಪಿದ್ದವು.

ಇತ್ತೀಚೆಗಷ್ಟೇ ಟೈಗರ್ ಎಂಬ ನಾಯಿ ಕೂಡ ಸಾವನ್ನಪ್ಪುವುದರೊಂದಿಗೆ ಸೀಸರ್ ಒಂಟಿಯಾಗಿತ್ತು. ಫಿಜಾ ಶಾ ಎಂಬ ವ್ಯಕ್ತಿ ಈ ನಾಯಿಯನ್ನು ಪೋಷಿಸುತ್ತಿದ್ದರು.ಇದೀಗ ಸೀಸರ್ ಕೂಡ ತನ್ನ ಸ್ನೇಹಿತರಂತೆ ಇಹಲೋಕ ತ್ಯಜಿಸಿದೆ. ಸೀಸರ್ ಸಾವಿಗೆ ಮುಂಬೈ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಇಲಾಖೆಯ ವತಿಯಿಂದ ಶೋಕಾಚರಣೆಗೆ ಆದೇಶ  ನೀಡಲಾಗಿದೆ. ಅಂತೆಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಸೀಸರ್ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment