Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಲಘು ಲಾಠಿ ಪ್ರಹಾರ ಶ್ರೀರಾಮನ ಬ್ಯಾನರ್‌ಗೆ ಅವಮಾನ: ಶಹಾಬಾದ್‌ ಉದ್ವಿಗ್ನ -ರಸ್ತೆಗಿಳಿದು ಪ್ರತಿಭಟಿಸಿದ ಜನರು

pvec13shrctr6ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ಭವಾನಿದೇವಿ ಮತ್ತು  ಶ್ರೀರಾಮನ ಚಿತ್ರವಿದ್ದ ಬ್ಯಾನರ್‌ಗೆ ದುಷ್ಕರ್ಮಿಗಳು ಸೆಗಣಿ ಬಳಿದು ಅವಮಾನಿಸಿದ್ದರಿಂದ ತಾಲ್ಲೂಕಿನ ಶಹಾಬಾದ್‌ ಬುಧವಾರ ಉದ್ವಿಗ್ನಗೊಂಡಿತು. ಪ್ರತಿಭಟನಾಕಾರರು ದ್ವಿಚಕ್ರ ವಾಹನವನ್ನು ಸುಟ್ಟು ಹಾಕಿದರು.

ಶಹಾಬಾದ್‌ನ ಮುಖ್ಯರಸ್ತೆಯ ಹಂಚಾಟೆ ಚಾಳಿ ಬಳಿ ದಸರಾ ಉತ್ಸವ ಸಮಿತಿ ಸದಸ್ಯರು ಭವಾನಿದೇವಿ ಹಾಗೂ ಶ್ರೀರಾಮನ ಚಿತ್ರವಿರುವ ಬ್ಯಾನರ್‌ ಕಟ್ಟಿದ್ದರು. ನಸುಕಿನಲ್ಲಿ ಬ್ಯಾನರ್‌ಗೆ ಸೆಗಣಿ ಹಚ್ಚಿರುವುದನ್ನು ಗಮನಿಸಿದ ವಿಶ್ವ ಹಿಂದೂ ಪರಿಷತ್‌ ಮತ್ತು ಉತ್ಸವ ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.

‘ಕೃತ್ಯ ನಡೆಸಿದವರನ್ನು ಬಂಧಿಸಬೇಕು. ಸೌಹಾರ್ದ ಕದಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು. ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ವ್ಯಾಪಾರಿಗಳು ಅಂಗಡಿಗಳನ್ನು ಬಂದ್‌ ಮಾಡಿದರು. ಪ್ರತಿಭಟನಾಕಾರರು ರಸ್ತೆತಡೆ ನಡೆಸಿ, ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ ಮುಖಂಡರಿಂದ ಘಟನೆ ಮಾಹಿತಿ ಪಡೆದು ಬ್ಯಾನರ್‌ ವಶಪಡಿಸಿಕೊಂಡರು. ಆರೋಪಿಗಳ ಪತ್ತೆಗೆ 4 ತಂಡ ರಚಿಸಿ ತನಿಖೆ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಇದರ ಮಧ್ಯೆಯೇ ಕೆಲ ಉದ್ರಿಕ್ತರು ಘೋಷಣೆ ಕೂಗುತ್ತಾ ಮತ್ತೆ ಪ್ರತಿಭಟನೆಗೆ ಮುಂದಾದರು. ಆಗ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ನಾಗರಾಜ ಮೇಲಗಿರಿ, ಅರುಣ ಪಟ್ಟಣಕರ, ಡಾ.ಅಶೋಕ ಜಿಂಗಾಡೆ, ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ ಬೋಗುಂಡಿ ಇದ್ದರು.

No Comments

Leave A Comment