Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಜಲಾಶಯಗಳಿಗೆ ಭೇಟಿ: ಕಾವೇರಿ ಕಣಿವೆ ಪ್ರದೇಶಕ್ಕೆ ತಜ್ಞರ ತಂಡ; ವೀಕ್ಷಣೆ ಆರಂಭ

56464ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಸಂಗ್ರಹ ಮತ್ತು ಬೆಳೆಗಳ ವಸ್ತು ಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌.ಝಾ ನೇತೃತ್ವದ ತಂಡ ಶುಕ್ರವಾರ ವಿಧಾನಸೌಧದಲ್ಲಿ ಮಾಹಿತಿ ಪಡೆದು, ಕಾವೇರಿ ಕೊಳ್ಳ ಪ್ರದೇಶದಲ್ಲಿ ವೀಕ್ಷಣೆ ಆರಂಭಿಸಿತು.

ಎರಡು ದಿನಗಳ ಭೇಟಿಗೆ ಗುರುವಾರ ರಾತ್ರಿ ನಗರಕ್ಕೆ ಬಂದಿರುವ ತಂಡ ಬೆಳಿಗ್ಗೆ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಿತು. ಕೇಂದ್ರದ ತಜ್ಞರ ತಂಡಕ್ಕೆ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಮತ್ತು ಜಲ ಸಂಪನ್ಮೂಲ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು.

ವಾಸ್ತವ ಸ್ಥಿತಿ ಯ ಬಗ್ಗೆ ಪವರ್ ಪಾಯಿಂಟ್ ಪ್ರಜೆಂಟೆಷನ್ ಮೂಲಕ ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ವಿವರಿಸಿದರು.

ಜಲಸಂಪನ್ಮೂಲ ಇಲಾಖಾ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಮತ್ತು ನಿವೃತ್ತ ಸಿಎಸ್ ಅರವಿಂದ್ ಜಾಧವ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಯಾ ಉಪಸ್ಥಿತರಿದ್ದರು.

ಜಿ.ಎಸ್ ಝಾ ನೇತೃತ್ವದ ತಂಡದಲ್ಲಿ ಜಲ ಆಯೋಗದ ಸದಸ್ಯ ಸೈಯದ್‌ ಮಸೂದ್‌ ಹುಸೇನ್‌, ಗೋದಾವರಿ ಮತ್ತು ಕೃಷ್ಣ ಕಣಿವೆಯ ಮುಖ್ಯ ಎಂಜಿನಿಯರ್‌ ಆರ್‌.ಕೆ. ಗುಪ್ತ, ಕೃಷಿ ಸಚಿವಾಲಯದ ಬಿ. ರಾತ್ ಮತ್ತಿತರರು ಇದ್ದಾರೆ.

No Comments

Leave A Comment