Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಚಿತ್ರದುರ್ಗ:ಸೌಹಾರ್ದ ನಡಿಗೆ ಶರಣ ಸಂಸ್ಕೃತಿಯ ಕಡೆಗೆ ಜಾಥ

dsc_0139ಚಿತ್ರದುರ್ಗ:ಐತಿಹಾಸಿಕ ನಗರಿ ಚಿತ್ರದುರ್ಗ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಗರದ ಕನಕ ವೃತ್ತ, ಕೋಟೆ ಮುಂಭಾಗ, ಜೋಗಿಮಟ್ಟಿ ರಸ್ತೆ, ಚಳ್ಳಕೆರೆ ಗೇಟ್, ಆರ್.ಟಿ.ಓ ಆಫೀಸ್, ರಾಷ್ಟ್ರಿಯ ಹೆದ್ದಾರಿ -೧೩, ರೈಲ್ವೇ ಸ್ಟೆಷನ್ ಎಸ್.ಜೆ.ಎಂ.ವಿದ್ಯಾರ್ಥಿ ನಿಲಯದಿಂದ ಸುಮಾರು ಏಳು ಕಡೆಯಿಂದ ಆಯೋಜಿಸಿದ್ದ ಸೌಹಾರ್ದ ನಡಿಗೆ ಶರಣ ಸಂಸ್ಕೃತಿಯ ಕಡೆಗೆ ಜಾಥದಲ್ಲಿ ಸಾವಿರಾರು ವಿದ್ಯಾರ್ಥಿಗಳು, ನಾಗರಿಕರು, ಎಸ್.ಜೆ.ಎಂ.ವಿದ್ಯಾಪೀಠದ ನೌಕರರು, ರಾಜಕಾರಣಿಗಳು, ಮಕ್ಕಳು, ಸೂಚನಾ ಫಲಕದೊಂದಿಗೆ ಸೌಹಾರ್ದ ನಡಿಗೆ ಶರಣ ಸಂಸ್ಕೃತಿ ಉತ್ಸವದ ಕಡೆಗೆ ಎಂದು ಜಯಘೋಷಗಳನ್ನು ಹಾಕುತ್ತ ನಗರದ ಕೇಂದ್ರ ಬಿಂದು ಗಾಂಧಿ ವೃತ್ತದ ಬಳಿಯಿಂದ ಎಸ್.ಜೆ.ಎಂ.ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ಸೇರಿದರು.dsc_0131

ಸೂಚನಾ ಫಲಕಗಳಲ್ಲಿ ಒಳ್ಳೆಯ ಪುಸ್ತಕಗಳನ್ನು ಓದಬೇಕು, ಒಳ್ಳೆಯ ಸ್ನೇಹಿತರನ್ನು ಹೊಂದಬೇಕು, ಆಸಕ್ತಿಯಿಂದ ಜೀವನದ ಅನಾವರಣ, ನಿರಾಸಕ್ತಿಯಿಂದ ಜೀವನ್ಮರಣ, ಎನ್ನ ದೇಹ ದಂಡಿಗೆಯ ಮಾಡಯ್ಯ, ಕೊಟ್ಟ ಮಾತಿಗೆ ತಪ್ಪುದೆಂದರೆ ಮರಣವನ್ನು ಅಪ್ಪಿದಂತೆ ಎಂಬ ಶ್ಲೋಕಗಳಿದ್ದವು.dsc_0128

dsc_0113

ಎಸ್.ಜೆ.ಎಂ.ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಸೌಹಾರ್ದ ನಡಿಗೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡುತ್ತಾ ಪ್ರಪಂಚದಲ್ಲೆಡೆ ಅನ್ನದ ಕೂಗು, ನೀರಿನ ಕೂಗು, ಯುದ್ದದ ಕೂಗು ಕೇಳಿಬರುತ್ತಿವೆ. ಈ ಮೂರು ಕೂಗುಗಳು ವಿನಾಶದ ಅಂಚಿಗೆ ಕೆರೆದೊಯ್ಯಬಹುದು, ಅದರಲ್ಲೂ ನೀರಿನ ಕೂಗು ರಾಜ್ಯದ ಶಾಂತಿಯನ್ನು ಕದಡಬಹುದು, ನಾವುಗಳು ರಾಜ್ಯದಲ್ಲಿ ಕಾವೇರಿ ಮತ್ತು ಮಹದಾಯಿ ಸಮಸ್ಯೆಗಳನ್ನು ನೋಡುತ್ತಿದ್ದೇವೆ. ಅವುಗಳನ್ನು ನಿಭಾಯಿಸುವ ಮತ್ತು ನಿರ್ವಹಿಸುವ ಕಾರ್ಯ ಸರ್ಕಾರ ಮಾಡಬೇಕಿದೆ. ದೇಶದ ಗಡಿಭಾಗಗಳಲ್ಲಿ ಯುದ್ದದ ಕೂಗು ಕಾಣುತ್ತಿದ್ದೇವೆ, ಅದರಿಂದಲೂ ಅನೇಕ ನಷ್ಟಗಳು ಸಂಭವಿಸಬಹುದು, ಆದ್ದರಿಂದ ಶಾಂತಿಯನ್ನು ಕಾಪಡಿಕೊಳ್ಳುವ ಹೊಣೆ ನಮ್ಮದು ದುಡ್ಡಿದ್ದವರಲ್ಲ ನಾವು ಶಾಂತಿ ನೇಲಸಿದೆ ಮತ್ತು ಶ್ರೀಮಂತರು ಎಂಬ ಬಾವನೆ ಇದೆ, ಅದು ತಪ್ಪು ಕಲ್ಪನೆ ಯಾರಲ್ಲಿ ಹೃದಯವಂತಿಕೆ ಇದೆಯೋ ಅವರಲ್ಲಿ ಶಾಂತಿ ನೆಲೆಸಿರುತ್ತದೆ. ಶರಣ ಸಂಸ್ಕೃತಿ ಉತ್ಸವ ಶಾಂತಿ ಮತ್ತು ಹೃದಯವಂತರನ್ನು ಹುಟ್ಟಿ ಹಾಕುವ ದಿವ್ಯ ಔಷಧ ಈ ಉತ್ಸವ ಕೇವಲ ೭ ದಿನಗಳಿಗೆ ಸೀಮಿತವಾಗಿರದೆ ನಿಮ್ಮಗಳ ಮನದಲ್ಲಿ ನಿರಂತವಾಗಿ ನೆಲಸಬೇಕು, ಆಗ ಅದು ಸಂಸ್ಕೃತಿಯ ಪ್ರಧಾನವಾಗುತ್ತದೆ, ಜೋತೆಗೆ ಅಂತಹ ಸಂಧರ್ಭ ತಂದು ಕೊಂಡರೆ ಶಾಂತಿ ನೆಲೆಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ನಿವೃತ್ತ ಐ.ಎ.ಎಸ್.ಅಧಿಕಾರಿ ಶ್ರೀ ಕೆ ಅಮರ ನಾರಾಯಣರವರು ಮಾತನಾಡುತ್ತಾ ಸಮಾಜ ಎತ್ತ ಹೊಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಶಾಂತಿ ಇಲ್ಲದ ಕಾರಣ ಅಶಾಂತಿಯ ಯುದ್ದ ನೆಡೆಯುತ್ತಿದೆ. ಇದನ್ನು ತಿದ್ದುವ ಕಾರ್ಯ ಡಾ. ಶಿವಮೂರ್ತಿ ಮುರುಘಾ ಶರಣರು ಮಾಡುತ್ತಿದ್ದಾರೆ. ಪ್ರಪಂಚದ ಕೆಲವು ಭಾಗಗಳಲ್ಲಿ ಯುದ್ದಗಳು ನೆಡೆಯುತ್ತಿವೆ. ಅದರಲ್ಲೂ ಭಾರತವೂ ಒಂದು ಅದಕ್ಕೆ ಅಶಾಂತಿ ಕಾರಣ. ನಮಗೆಲ್ಲಾ ಅಶಾಂತಿಯ ವಾತಾವರಣ ಇದೆ. ಅದನ್ನು ಸರಿಪಡಿಸಲು ಶ್ರೀಗಳ ಈ ಉತ್ಸವಗಳು ನೆರವಿಗೆ ಬರುತ್ತಿವೆ. ಕರ್ಮ ಭೂಮಿಯಲ್ಲಿ ಶ್ರಮವಹಿಸಿದರೆ ಅಭಿವೃದ್ಧಿ ಸಾದ್ಯ. ನಾವೆಲ್ಲಾ ಶಾಂತಿ ಸೌಹಾರ್ದದಿಂದ ಪ್ರೀತಿಯಿಂದ ಬಾಳಬೇಕು ಎಂದರು.
ಆರ್ ಶೇಷಣ್ಣ ಕುಮಾರ್ ಉತ್ಸವ ಸಮಿತಿಯ ಕಾರ್ಯದರ್ಶಿಗಳು ಪರಮಪೂಜ್ಯರ ನೇತೃತ್ತ್ವದಲ್ಲಿ ನೆಡೆಯುವ ಶರಣ ಸಂಸ್ಕೃತಿ ಉತ್ಸವಕ್ಕೆ ಜೈ ಜೈ ಎಂದು ಜಯಘೋಷ ಹಾಕುತ್ತಾ ಖಾದಿಯ ಬಗ್ಗೆ ಸ್ವಯಂ ರಚಿತ ಕವನವಾಚನ ಮಾಡಿದರು.
ಖಾದಿ ತೋರುವುದು ಶಾಂತಿಯ ಹಾದಿ
ನೆಮ್ಮದಿಯ ಬದುಕಿಗೆ ಇದೇ ಭದ್ರ ಬುನಾದಿ
ಬುದ್ದ ಬಸವ ಮಹಾವೀರರಿಗೂ ಜೈ ಎಂದರು
ಏಸು ಪೈಗಂಬರನಿಗೂ ಜೈ ಜೈ ಎಂದರು.
ಬಾಬಾ ಸಾಹೇಬರಿಗೆ ನಮಿಸಿದರು
ಕನಕ ರಾಯಣ್ಣನ ಸ್ಮರಿಸಿದರು.
ಮದಕರಿ ಖಡ್ಗವ ನೋಡಿ ನೆಡೆದರು
ಒನಕೆ ಚಿತ್ರವ ಇಣಕಿ ಬಂದರು
ಮಹಾತ್ಮನತ್ತ ಕೂಡಿ ನೆಡೆದರು
ಬಸವಾದಿ ಶರಣರ ಹಾದಿ ಹಿಡಿದರು.
ಖಾದಿ ತೋರುವುದು ಶಾಂತಿಯ ಹಾದಿ
ಎಂದು ಖಾದಿಯ ಬಗ್ಗೆ ವಾಚಿಸಿದರು.

ಶ್ರೀ ಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ಶ್ರೀ ಕೆ.ಎಂ.ವೀರೇಶ್. ಶ್ರೀ ಜಿ,ಹೆಚ್.ತಿಪ್ಪಾರೆಡ್ಡಿ,ಶಾಸಕರು. ಶ್ರೀ ಕೆ ಅಮರನಾರಾಯಣ, ಶ್ರೀ ಬಿ.ಕಾಂತರಾಜ್ ಪ್ರಧಾನ ಕಾರ್ಯದರ್ಶಿ,ಶರಣ ಸಂಸ್ಕೃತಿ ಉತ್ಸವ, ಸಹ ಕಾರ್ಯದರ್ಶಿ ಶ್ರೀ ನಿರಂಜನಮೂರ್ತಿ, ಶ್ರೀಮತಿ ಶಾಮಲ ಶಿವಪ್ರಕಾಶ್ ನಗರಸಭೆ ಸದಸ್ಯರು, ಶ್ರೀ ತಾಜ್ ಪೀರ್. ಎಸ್.ಜೆ.ಎಂ.ವಿದ್ಯಾಪೀಠ ಕಾರ್ಯದರ್ಶಿಗಳದ ಶ್ರೀ ಕೆ.ವಿ.ಪ್ರಭಾಕರ್. ಕಾರ್ಯನಿರ್ವಾಹಣ ಅಧಿಕಾರಿಗಳದ ಡಾ. ಜಿ.ಎನ್.ಮಲ್ಲಿಕಾರ್ಜುನಪ್ಪ, ಮತ್ತು ಡಾ.ಈ.ಚಿತ್ರಶೇಖರ್, ಕೆ.ಇ.ಬಿ.ಷಣ್ಮುಖಪ್ಪ ಚಂದ್ರಶೇಖರ್ ಬಾಬು, ಶ್ರೀಮತಿ ವಿಣಾವಿಜಯ ಅಧ್ಯಕ್ಷರು ಅಖಿಲ ಭಾರತ ವೀರಶೈವ ಮಹಿಳಾ ಘಟಕ. ಶ್ರೀ ತಿಪ್ಪೇಸ್ವಾಮಿ ಹೆಚ್.ಡಿ. ವಿದ್ಯಾನಗರ ಅಭಿವೃದ್ಧಿ ಸಂಘದ ಅಧ್ಯಕ್ಷರು, ಶ್ರೀ ಮೋಕ್ಷರುದ್ರಸ್ವಾಮಿ, ಶ್ರೀಮತಿ ಸೌಮ್ಯಶ್ರೀ ಪ್ರಕಾಶ್, ವೀರಶೈವ ಸಂಘದ ಅಧ್ಯಕ್ಷರಾದ ಶ್ರೀ ಜಯಕುಮಾರ್, ಗಾರೆಹಟ್ಟಿ ಮುರುಗೆಣ್ಣ, ಶ್ರೀ ಉಮೇಶ್ ವಕೀಲರು, ಶ್ರೀ ರಘುನಾಥರೆಡ್ಡಿ, ಶ್ರೀಮತಿ ಅನುರಾಧ ವಿಜಯಕುಮಾರ್, ನಗರಸಭೆ ಸದಸ್ಯರು. ಶ್ರೀ ಪೈಲ್ವಾನ್ ತಿಪ್ಪೇಸ್ವಾಮಿ, ಡಾ| ನಾರಾಯಣಮೂರ್ತಿ. ಡಾ| ಯೋಗೇಂದ್ರ. ನಗರಸಭಾ ಸದಸ್ಯ ತಿಪ್ಪೇಶ್. ಶ್ರೀ ಡಿ.ಎಸ್.ಜಯ್ಯಣ್ಣ. ಮಹಡಿ ಶಿವಮೂರ್ತಿ. ಟಿ.ಜಿ.ಗುರುಮೂರ್ತಿ ಹಾಗೂ ವಿವಿಧ ಗಣ್ಯರು ಎಸ್.ಜೆ.ಎಂ.ವಿದ್ಯಾಸಂಸ್ಥೆಯ ನೌಕರ ವರ್ಗದವರು. ವಿವಿದ ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಹರಗುರು ಚರಮೂರ್ತಿಗಳು. ನೂರಾರು ಭಕ್ತಾಧುಗಳು ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರೊ. ವಿಶ್ವನಾಥ್ ಸ್ವಾಗತಿಸಿದರು. ಪ್ರಾರ್ಥನೆಯನ್ನು ಉಮೇಶ್ ಪತ್ತಾರ್ ಹಾಡಿದರೆ ನಿರೂಪಣೆಯನ್ನು ಹಾಲಪ್ಪ ನಾಯಕ ಹಾಗೂ ಶರಣು ಸಮರ್ಪಣೆಯನ್ನು ಎಸ್.ಜೆ.ಎಂ.ಡೆಂಟಲ್ ಕಾಲೇಜು ಪ್ರಾಂಶುಪಾಲರಾದ ಡಾ. ಗೌರಮ್ಮ ನೆರವೇರಿಸಿದರು.

No Comments

Leave A Comment