Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಪಾಕ್ ಉಗ್ರ ಕ್ಯಾಂಪ್ ಗಳಿಂದ ನಾವು ನರಕದಲ್ಲಿ ವಾಸಿಸುವಂತಾಗಿದೆ: ಪ್ರತಿಭಟನಾ ನಿರತ ಪಿಒಕೆ ಜನರ ಆಕ್ರೋಶ

pok-2ಮುಜಾಫರಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸ್ಥಳೀಯ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ನಿರತ ಜನರು, ತಮ್ಮ ಪ್ರದೇಶವನ್ನು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸಮಾಜಘಾತುಕ ಶಕ್ತಿ, ಭಯೋತ್ಪಾದಕರಿಗೆ ಸ್ವರ್ಗವನ್ನಾಗಿಸಿದೆ ಎಂದು ಕಿಡಿ ಕಾರಿದ್ದಾರೆ. ಮುಜಫರಾಬಾದ್, ಕೊಟ್ಲಿ, ಚಿನಾರಿ, ಮಿರ್ ಪುರ್, ಗಿಲ್ಗಿಟ್, ಡೈಮೆರ್ ಸೇರಿದಂತೆ ಪಾಕ್ ಆಕ್ರಮಿತ ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಪಾಕಿಸ್ತಾನ ಹಾಗೂ ಭಯೋತ್ಪಾದಕರ ವಿರುದ್ಧ ಸಿಡಿದೆದ್ದಿದ್ದು, ತಮ್ಮ ಜೀವನವನ್ನು ಪಾಕಿಸ್ತಾನ, ಭಯೋತ್ಪಾದಕ ಸಂಘಟನೆಗಳು ನರಕವನ್ನಾಗಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಕ್ಯಾಂಪ್ ಗಳಲ್ಲಿ ತರಬೇತಿ ಪಡೆಯುವವರು ಸ್ಥಳೀಯ ಹಳ್ಳಿಗಳು ಲೂಟಿ ಹೊಡೆಯುತ್ತಾರೆ.

ಅಷ್ಟೇ ಅಲ್ಲದೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ಐಎಸ್ಐ ಉಗ್ರರ ತರಬೇತಿಗೆ ಹಾಗೂ ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಜನತೆ ಆರೋಪಿಸಿದ್ದಾರೆ.

ಪಾಕಿಸ್ತಾನ ತಾಲಿಬಾನ್ ಭಯೋತ್ಪಾದಕ ಸಂಘಟನೆಯ ತರಬೇತಿ ಕ್ಯಾಂಪ್ ಗಳನ್ನು ಸ್ಥಗಿತಗೊಳಿಸದೇ ಇದ್ದರೆ, ನಾವೇ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಾಕ್ ಆಕ್ರಮಿತ ಕಾಶ್ಮೀರ ನಾಯಕರು ಎಚ್ಚರಿಕೆ ನೀಡಿದ್ದಾರೆ.

No Comments

Leave A Comment