Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬೆಂಗಳೂರು; ಬೆಳ್ಳಂದೂರು ಬಳಿಯ ಸೆಂಟ್ರಲ್‌ ಮಾಲ್‌ ಹಿಂಭಾಗದಲ್ಲಿ ನಡೆದ ದುರ್ಘಟನೆ ಕಟ್ಟಡ ಕುಸಿದು ಮೂವರ ಸಾವು

NDRF personnel carrying out the rescue work after an under construction building collapsed at Belandur in Bengaluru on Wednesday. -Photo/ M S MANJUNATH

NDRF personnel carrying out the rescue work after an under construction building collapsed at Belandur in Bengaluru on Wednesday. -Photo/ M S MANJUNATH

ಬೆಂಗಳೂರು: ಬೆಳ್ಳಂದೂರು ಬಳಿಯ ಸೆಂಟ್ರಲ್‌ ಮಾಲ್‌ ಹಿಂಭಾಗದಲ್ಲಿದ್ದ ಐದು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಬುಧವಾರ ಕುಸಿದು ಬಿದ್ದಿದ್ದರಿಂದ ಸೆಕ್ಯುರಿಟಿ ಗಾರ್ಡ್‌ ಅಶೋಕ್‌ ಮಹಾಂತ (27) ಹಾಗೂ ಕಾರ್ಮಿಕರಾದ ರಹಾದೆ (22), ರಾಮ್‌ಬಾಬು (22) ಎಂಬು ವವರು ಮೃತಪಟ್ಟಿದ್ದಾರೆ.
ಒಡಿಶಾ ಮೂಲದ ಅಶೋಕ್‌. ಆಂಧ್ರಪ್ರದೇಶದ ರಹಾದೆ ಕಟ್ಟಡದ ಅವಶೇಷಗಳಡಿ ಸಿಲುಕಿ ಅಸುನೀಗಿದ್ದು, ರಾಮ್‌ ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಯಾದಗಿರಿಯ ನಾಗರಾಜ್‌ (30), ಅವರ ಪುತ್ರ ಬನಪ್ಪ (8), ಆಂಧ್ರಪ್ರದೇಶದ ಆದಿತ್ಯ, ಬಿಸ್ನು ಮೈಥೀನ್‌, ಚಂದನ್‌, ಸಮೀರ್‌ ಹಾಗೂ ದೀಪಾಂಕರ್ ಎಂಬುವರು ಗಾಯ ಗೊಂಡಿದ್ದಾರೆ. ಆಂಧ್ರಪ್ರದೇಶ ಮೂಲದ ಶ್ರೀನಿವಾಸ್‌ ರೆಡ್ಡಿ, ವಿನಯಕುಮಾರ್‌ ದೊಗ್ಗೂರ್‌ ಸೇರಿದಂತೆ ಐವರು ಸ್ನೇಹಿ ತರ ಮಾಲೀಕತ್ವದ 2,400 ಚದರ ಅಡಿ ಜಾಗದಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿತ್ತು. ಸದ್ಯ ಟೈಲ್ಸ್‌ ಜೋಡಣೆ ಕೆಲಸ ನಡೆಯುತ್ತಿತ್ತು. ಈ ವೇಳೆಯೇ ಕಟ್ಟಡ ಕುಸಿದು ಬಿದ್ದಿದೆ.

‘ಕಟ್ಟಡದ ಕೆಳ ಅಂತಸ್ತಿನಲ್ಲಿ ಯಾದಗಿರಿಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎರಡು ಹಾಗೂ ನಾಲ್ಕನೇ ಅಂತಸ್ತಿನಲ್ಲಿ ಆಂಧ್ರಪ್ರದೇಶದ ಕಾರ್ಮಿಕರು ಟೈಲ್ಸ್‌ ಜೋಡಿಸುತ್ತಿದ್ದರು.  ಮಧ್ಯಾಹ್ನ 12.15ರ ಸುಮಾರಿಗೆ ದಿಢೀರ್‌್ ಕಟ್ಟಡ ಕುಸಿದು ಬಿತ್ತು. ಕಟ್ಟಡದ ಪಕ್ಕದಲ್ಲಿದ್ದ ಜಾಗ  ನೋಡಲು ಬಂದಿದ್ದ ನಾನು ಗಾಯಾಳುಗಳ ರಕ್ಷಣೆಗೆ ಧಾವಿಸಿದೆ’ ಎಂದು ಪ್ರತ್ಯಕ್ಷದರ್ಶಿ ಕೆ.ಎಂ.ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಶೆಡ್‌ನಲ್ಲಿದ್ದ ಸೆಕ್ಯುರಿಟಿ ಗಾರ್ಡ್‌: ಸದ್ಯ ಕುಸಿದಿರುವ ಕಟ್ಟಡದ ಪಕ್ಕದಲ್ಲಿರುವ ‘ಇಂಟಿರಿಯಲ್‌ ಆರ್ಕೆಡ್‌’ ಅಪಾರ್ಟ್‌ ಮೆಂಟ್‌ನಲ್ಲಿ ಅಶೋಕ್‌ ಸೆಕ್ಯುರಿಟಿ ಗಾರ್ಡ್‌ ಆಗಿದ್ದರು. ಅವರಿಗೆ ತಂಗಲು ಅಲ್ಲೇ ಚಿಕ್ಕ ಶೆಡ್‌ ನಿರ್ಮಿಸಿ ಕೊಡ ಲಾಗಿತ್ತು.  ಕಟ್ಟಡದ ಅವಶೇಷಗಳು ಶೆಡ್‌ ಮೇಲೆ ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅಶೋಕ್ ಅವರ ಕುಟುಂಬ ಸದಸ್ಯರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದರು.

ಮಣ್ಣಿನಲ್ಲಿ ಸಿಲುಕಿಕೊಂಡ ರಹಾದೆ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ ಡಿ ಆರ್ ಎಫ್‌) ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ, ಕಟ್ಟಡದಲ್ಲಿ ಸಿಲುಕಿದ್ದ ಸಮೀರ್‌, ರಾಮ್‌ಬಾಬು ಹಾಗೂ ದೀಪಾಂಕರ್‌ ಅವರನ್ನು ಹೊರ ತಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು.  ಆದರೆ, ಮಣ್ಣಿನಲ್ಲಿ ಸಿಲುಕಿಕೊಂಡ ಕಾರ್ಮಿಕ ರಹಾದೆ, ಉಸಿರಾಟದ ತೊಂದರೆಯಿಂದ ಸ್ಥಳದಲ್ಲೇ ಕೊನೆಯುಸಿರೆಳೆದರು.

ಕಟ್ಟಡದಿಂದ ಜಿಗಿದು ಪಾರು: ಕಟ್ಟಡದ ಕುಸಿಯುತ್ತಿದ್ದಂತೆ 4ನೇ ಅಂತಸ್ತಿನಲ್ಲಿ ಟೈಲ್ಸ್‌ ಜೋಡಿಸುತ್ತಿದ್ದ ಚಂದನ್‌ ಹಾಗೂ ಬಿಸ್ನು ಮೈಥೀನ್‌ ಅವರು ಕೆಳಗೆ ಜಿಗಿದು ಪ್ರಾಣಾ ಪಾಯದಿಂದ ಪಾರಾದರು.

‘ಟೈಲ್ಸ್‌ ಜೋಡಣೆಗೆ ಸಿಮೆಂಟ್‌ ಕಲಸುತ್ತಿದ್ದೆ. ಅಷ್ಟರಲ್ಲಿ ಕಟ್ಟಡ ನಡುಗಿದ ಅನುಭವವಾಯಿತು. ಕಟ್ಟಡ ನಿಧಾನ ವಾಗಿ ವಾಲುತ್ತಿತ್ತು. ಭಯವಾಗಿ ರಸ್ತೆಗೆ ಜಿಗಿದೆ. ಕಾಲಿಗೆ ಪೆಟ್ಟು ಬಿತ್ತು.  ಸ್ಥಳೀಯರು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು’ ಎಂದು ಚಂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು ಯಾದಗಿರಿಯ ನಾಗರಾಜ್‌, ಕೆಳ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಸ್ಥಳದಲ್ಲಿ ಪುತ್ರ ಬನಪ್ಪ   ಆಟವಾಡುತ್ತಿದ್ದ. ಕುಸಿಯುವ ವೇಳೆಯಲ್ಲಿ ಹೊರಗೆ ಓಡಿಬರುವಾಗ ನಾಗರಾಜ್‌ ಅವರ ಬೆರಳು ತುಂಡಾಗಿದೆ. ಬನಪ್ಪನ ತಲೆಗೆ ಸಣ್ಣ ಪೆಟ್ಟು ಬಿದ್ದಿದ್ದು, ಜೀವಕ್ಕೆ  ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದರು.

‘ಕಾರ್ಮಿಕರ ತಲೆಗಳು ಮಾತ್ರ ಕಾಣಿಸುತ್ತಿದ್ದವು. ಅಲ್ಲಿಗೆ ಹೋಗುವುದು ಕಷ್ಟವಾಗಿತ್ತು. ಎಚ್ಚರ ತಪ್ಪಿದರೆ ಕಟ್ಟಡದ ಅವಶೇಷಗಳು ಸಹ ಕುಸಿಯುವ ಭಯವಿತ್ತು. ಹೀಗಾಗಿ ಅವರಿಗೆ ಆಮ್ಲಜನಕ ಪೂರೈಸಿ, ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹೊರತೆಗೆಯಲಾಯಿತು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ಸಹಾಯಕ ಕಮಾಂಡರ್‌  ಕೆ.ಎಂ. ಸುಖೇಶ್‌ ಅವರು ತಿಳಿಸಿದರು.

ಚಿಕಿತ್ಸಾ ವೆಚ್ಚ ಭರಿಸುವ ಭರವಸೆ: ‘ಕಟ್ಟಡ ಕುಸಿದಿದ್ದರಿಂದ ಗಾಯಗೊಂಡ ಕಾರ್ಮಿಕರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು’ ಎಂದು ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗುತ್ತಿಗೆದಾರರು ಹಾಗೂ ಮಾಲೀಕರ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಘಟನೆಯಲ್ಲಿ ಮೃತಪಟ್ಟವರು ಕಾರ್ಮಿಕರಾಗಿದ್ದು, ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು   ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
*
ನೋಟಿಸ್‌ ನೀಡಿದ್ದರೂ ಉಲ್ಲಂಘನೆ
‘ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲು ಮಾಲೀಕರು ಅನುಮತಿ ಪಡೆದಿದ್ದರು. ಆದರೆ ಅಕ್ರಮವಾಗಿ 5 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಇದುವೇ ಅವಘಡಕ್ಕೆ ಕಾರಣ’ ಎಂದು ಮಹದೇವಪುರ ವಲ ಯದ ಜಂಟಿ ಆಯುಕ್ತ ಮುನಿವೀರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಟ್ಟಡ ನಿರ್ಮಾಣದಲ್ಲಿ ಗುಣ ಮಟ್ಟ ಕಾಯ್ದುಕೊಂಡಿಲ್ಲ. ಜತೆಗೆ ಅವೈಜ್ಞಾನಿಕವಾಗಿ ಯೋಜನೆ ಮಾಡ ಲಾಗಿದೆ. ಆ ಬಗ್ಗೆ ಮೇನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಕಟ್ಟಡ ನಿರ್ಮಾಣ ನಿಲ್ಲಿಸುವಂತೆ ಅಂದೇ ನೋಟಿಸ್‌ ನೀಡ ಲಾಗಿತ್ತು. ಅಷ್ಟಾದರೂ ಕಟ್ಟಡವನ್ನು ನಿರ್ಮಿಸುತ್ತಿದ್ದರು’ ಎಂದು ತಿಳಿಸಿದರು.

No Comments

Leave A Comment