Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಭೀಕರ ರಸ್ತೆ ಅಪಘಾತ ಲಾರಿ-ಕಾರು ಢಿಕ್ಕಿ: ತಾಯಿ-ಮಗ ಸಾವು

accಕಾರ್ಕಳ: ಕಟಾವು ಯಂತ್ರವನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿ ಹಾಗೂ ನ್ಯಾನೋ ಕಾರು ಢಿಕ್ಕಿಯಾದ ಪರಿಣಾಮ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ನಿಟ್ಟೆಯ ಲೆಮಿನಾ ಕ್ರಾಸ್‌ ಬಳಿ ಬುಧವಾರ ಸಂಜೆ ಸಂಭವಿಸಿದೆ.

ಮಿಯಾರು ಗ್ರಾಮದ ಜೋಡುಕಟ್ಟೆ ನಿವಾಸಿ ಗ್ಲೋರಿಯಾ ಆಯಿಲ್‌ ಮಿಲ್‌ನ ಮಾಲಕ ವಾಲ್ಟರ್‌ ಡಿ’ಸೋಜಾ ಅವರ ಪತ್ನಿ  ಶಾಲೆಟ್‌ ಡಿ’ಸೋಜಾ (45) ಹಾಗೂ ಪುತ್ರ ವಿನ್ಸನ್‌ ಡಿ’ಸೋಜಾ (21) ಮೃತಪಟ್ಟವರು. ಲಾರಿ ಕಾರ್ಕಳದಿಂದ ಪಡುಬಿದ್ರಿ ಮಾರ್ಗವಾಗಿ ಮಂಗಳೂರಿನತ್ತ ತೆರಳುತ್ತಿದ್ದರೆ ಕಾರು ಬೆಳ್ಮಣ್‌ ಕಡೆಯಿಂದ ಕಾರ್ಕಳದತ್ತ ಬರುತ್ತಿತ್ತು. ವಿನ್ಸನ್‌ ಕಾರು ಚಲಾಯಿಸುತ್ತಿದ್ದರು. ಕಾರನ್ನು ಕೆಲವು ತಿಂಗಳ ಹಿಂದೆಯಷ್ಟೇ ಖರಿಸಿದ್ದರು.

ತಪ್ಪಿದ ಚಾಲಕನ ನಿಯಂತ್ರಣ
ಸಂಜೆ 4 ಗಂಟೆ ವೇಳೆಗೆ ಬೆಳ್ಮಣ್‌ ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ನ್ಯಾನೋ ಕಾರು ನಿಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ತಾಯಿ – ಮಗ ಸ್ಥಳದಲ್ಲೇ ಮೃತಪಟ್ಟರು. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಮೃತ ದೇಹಗಳು ಕಾರಿನ ಒಳಗೆ ಸಿಲುಕಿ ಛಿದ್ರವಾಗಿದ್ದವು. ಜೆಸಿಬಿ ಮೂಲಕ ಕಾರಿನ ಗಾಜು ಒಡೆದು ಮೃತ ದೇಹಧಿಗಳನ್ನು ಸ್ಥಳೀಯರ ಸಹಕಾರದಿಂದ ಹೊರತೆಗೆಯಲಾಯಿತು.

ರಸ್ತೆ ಸಂಚಾರ ಸ್ಥಗಿತ: ಅಪಘಾತ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರಿಂದ ಕಾರ್ಕಳ – ಪಡುಬಿದ್ರಿ ಚತುಷ್ಪಥ ರಸ್ತೆಯಲ್ಲಿ ಸುಮಾರು ಮುಕ್ಕಾಲು ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು.  ಕೆಲ ಸಮಯದ ಹಿಂದಷ್ಟೇ ಚತುಷ್ಪಥವಾಗಿದ್ದ ಈ ರಸ್ತೆಯಲ್ಲಿ ಈವೆರಗೂ ಐದಾರು ಭೀಕರ ಅಪಘಾತಗಳು ಸಂಭವಿಸಿವೆ.

ವಿದೇಶಕ್ಕೆ ಹೋಗುವ ಕನಸು ನನಸಾಗಲಿಲ್ಲ
ಇತ್ತೀಚೆಗಷ್ಟೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿ ಕ್ಯಾಂಪಸ್‌ ಸಿಲೆಕ್ಷನ್‌ ಮೂಲಕ ಗುಜರಾತ್‌ನ ಕ್ಯಾಪ್ಟನ್‌ ಟ್ರ್ಯಾಕ್ಟರ್‌ ಕಂಪೆನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿ ಒಂದೂವರೆ ತಿಂಗಳ ಹಿಂದೆ ಕೆಲಸಕ್ಕೆ ಸೇರಿದರೂ ಕಾರಣಾಂತರಗಳಿಂದ ಉದ್ಯೋಗ ತ್ಯಜಿಸಿ ಊರಿಗೆ ಮರಳಿದ್ದರು.

ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವ ಕನಸು ಕಾಣುತ್ತಿದ್ದ ವಿನ್ಸನ್‌ ಡಿ’ಸೋಜಾ ಅವರು ಪಾಸ್‌ಪೋರ್ಟ್‌ ಸಂಬಂಧಿತ ಕೆಲಸಗಳಿಗಾಗಿ ತಾಯಿಯೊಂದಿಗೆ ಮಂಗಳೂರಿಗೆ ತೆರಳಿದ್ದರು. ಕಾರ್ಕಳಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವಿನ್ಸನ್‌ ಇದೇ ತಿಂಗಳ ಅ. 11ರಂದು ವಿದೇಶಕ್ಕೆ ಹೋಗುವ ದಿನ ನಿಗದಿಯಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ವಾಲ್ಟರ್‌ ಡಿ’ಸೋಜಾ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವಳು ಹೈದರಾಬಾದ್‌ನ ಟೆಕ್‌ ಮಹೇಂದ್ರ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

No Comments

Leave A Comment