Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಯೂರೋಪಿಯನ್ ರಾಕೆಟ್ ಮೂಲಕ ಭಾರತದ ಜಿಸ್ಯಾಟ್-18 ಉಪಗ್ರಹ ಉಡಾವಣೆ ಮಾಡಿದ ಇಸ್ರೋ!

isro-gsat-18-launchಕೊವುರೌ: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕೊವುರೌನಲ್ಲಿರುವ  ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.ಭಾರತೀಯ ಕಾಲಮಾನದಂತೆ ಬುಧವಾರ ಬೆಳಗಿನ ಜಾವ 2 ಗಂಟೆಗೆ ಜಿಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಬೇಕಿತ್ತು. ಆದರೆ ಉಡಾವಣಾ ಪ್ರದೇಶದಲ್ಲಿ ವ್ಯತಿರಿಕ್ತ  ವಾತಾವರಣವಿದ್ದುದರಿಂದ ಹಾಗೂ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿತ್ತು. ಅದರಂತೆ ಗುರುವಾರ ನಿಗದಿತ ಸಮಯಕ್ಕೆ ಸರಿಯಾಗಿ ಜಿಸ್ಯಾಟ್-18  ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಜಿಸ್ಯಾಟ್-18 ಸುಮಾರು 3,404 ಕೆ.ಜಿ. ತೂಕ ಹೊಂದಿದ್ದು, ಈ ಉಪಗ್ರಹವನ್ನು ಹೊತ್ತ ಏರಿಯಾನ್-5 ವಿಎ-231 ರಾಕೆಟ್ ಅಗಸಕ್ಕೆ ಚಿಮ್ಮಿತು. ಬಳಿಕ 32 ನಿಮಿಷಗಳಲ್ಲಿ ರಾಕೆಟ್ ಉಪಗ್ರಹವನ್ನು  ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.ಭಾರಿ ಗಾತ್ರದ ಉಪಗ್ರಹವಾಗಿದ್ದರಿಂದ ವಿದೇಶದಲ್ಲಿ ಉಡಾವಣೆಇಸ್ರೋ ತಜ್ಞರ ಪ್ರಕಾರ ಪ್ರಸ್ತುತ ಉಡಾವಣೆಯಾಗಿರುವ ಜಿಸ್ಯಾಟ್-18 ಭಾರಿ ಗಾತ್ರದ ಉಪಗ್ರಹವಾಗಿದ್ದು, ತನ್ನಲ್ಲಿರುವ ರಾಕೆಟ್ ಗಳ ಮೂಲಕ ಇದನ್ನು ಉಡಾವಣೆ ಮಾಡಲು ಸಾಧ್ಯವಿಲ್ಲ.  ಹೀಗಾಗಿ ವಿದೇಶಿ ರಾಕೆಟ್ ಅನ್ನು ಬಳಕೆ ಮಾಡಲಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಆದರೆ ಶೀಘ್ರದಲ್ಲಿಯೇ ಇಸ್ರೋ ಇದಕ್ಕೂ ಪರಿಹಾರ ಕಂಡುಕೊಳ್ಳಲ್ಲಿದ್ದು, ಇಸ್ರೋ ಜಿಎಸ್ಎಲ್ವಿ  ಎಂಕೆ3 ರಾಕೆಟ್ ಅಭಿವೃದ್ಧಿ ಪಡಿಸಿದ ನಂತರ ಭಾರೀ ಗಾತ್ರದ ಉಪಗ್ರಹಗಳನ್ನೂ ಸಹ ಭಾರತವೇ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಲಿದೆ.ಇಸ್ರೋ ನಿರ್ಮಿಸಿರುವ ಜಿಸ್ಯಾಟ್-18 ಉಪಗ್ರಹ ಅತ್ಯಾಧುನಿಕ ಸಂವಹನ ಉಪಗ್ರಹವಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 14 ಸಂವಹನ ಉಪಗ್ರಹಗಳೊಂದಿಗೆ ಸೇವೆ  ಸಲ್ಲಿಸಲಿದೆದ್ದು, ಜಿಸ್ಯಾಟ್ ಸಿಬ್ಯಾಂಡ್, ಕೆ.ಯು. ಬ್ಯಾಂಡ್ಗಳನ್ನು ಹೊಂದಿದೆ. ಈ ಉಪಗ್ರಹ 15 ವರ್ಷಗಳ ಕಾಲ ಸೇವೆ ಸಲ್ಲಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ

.ಕರ್ನಾಟಕದಿಂದ ಉಪಗ್ರಹ ನಿಯಂತ್ರಣಇಂದು ನಭಕ್ಕೆ ಹಾರಿರುವ ಈ ಜಿಸ್ಯಾಟ್-18 ಉಪಗ್ರಹವನ್ನು ಕರ್ನಾಟಕದಿಂದ ನಿಯಂತ್ರಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕರ್ನಾಟಕದ ಹಾಸನ ಮತ್ತು ಬೆಂಗಳೂರಿನಲ್ಲಿರುವ  ನಿಯಂತ್ರಣ ಕೇಂದ್ರಗಳಲ್ಲಿ ಉಪಗ್ರಹ ನಿಯಂತ್ರಣ ಮಾಡಲಾಗುತ್ತದೆ.ಇನ್ನು ಭಾರತದ ಉಪಗ್ರಹವನ್ನು ಹೊತ್ತು ಸಾಗಿದ ಏರಿಯಾನ್-5 ರಾಕೆಟ್ ಪಾಲಿಗೆ ಇದು 74ನೇ ಉಡಾವಣೆಯಾಗಿದ್ದು, ಎಲ್ಲ ಉಡಾವಣೆಗಳೂ ಕೂಡ ಯಶಸ್ವಿಯಾಗಿದೆ. ಏರಿಯಾನ್ ಉಪಗ್ರಹ  ಉಡಾವಣಾ ವಾಹಕವನ್ನು ಏರಿಯಾನ್ ಪ್ಯಾಸೆಂಜರ್ ಪೇಲೋಡ್ ಎಕ್ಸಪರಿಮೆಂಟ್ ಸಂಸ್ಥೆ ನಿರ್ಮಿಸಿದ್ದು, 1981ರಿಂದಲೂ ಭಾರತ ತನ್ನ ವಿವಿಧ ಉಪಗ್ರಹಗಳನ್ನು ಇದೇ ಸಂಸ್ಥೆಯ ಮೂಲಕ  ಉಡಾಯಿಸುತ್ತಾ ಬಂದಿದೆ.

No Comments

Leave A Comment