Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೆಂಗಳೂರು ವಿಜ್ಞಾನಿಯಿಂದ ಅಂತಾರಾಷ್ಟ್ರೀಯ ಡ್ರಗ್‌ ದಂಧೆ!

drug-dಬೆಂಗಳೂರು: ಮಾದಕವಸ್ತು ಕಳ್ಳಸಾಗಾಟ ನಿಯಂತ್ರಣ ದಳದ ಬಲೆಗೆ ಬಿದ್ದಿರುವ ಸಂಶೋಧನಾ ವಿಜ್ಞಾನಿ ವೆಂಕಟರಾಮ್‌ ರಾವ್‌ ದೇಶದೆಲ್ಲೆಡೆ ತನ್ನ ದಂಧೆ ವಿಸ್ತರಿಸಿದ್ದು, ಇದಕ್ಕೆ ಬೆಂಗಳೂರನ್ನು ಡ್ರಗ್‌ ಯಾರ್ಡ್‌ ಮಾಡಿಕೊಂಡಿದ್ದ. ಅಷ್ಟೇ ಅಲ್ಲ, ಆತ ಅಂತಾರಾಷ್ಟ್ರೀಯ ಡ್ರಗ್‌ ಜಾಲದ ನೇರ ಸಂಪರ್ಕದಲ್ಲಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ನೈಜೀರಿಯಾ, ಆಫ್ರಿಕಾ, ಆಗ್ನೇಯ ಏಷಿಯಾ ರಾಷ್ಟ್ರಗಳ ಜತೆ ವೆಂಕಟರಾಮ್‌ ರಾವ್‌ ನೇರ ಸಂಪರ್ಕ ಹೊಂದಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಈತ ನಡೆಸುತ್ತಿದ್ದ ಮಾದಕದ್ರವ್ಯ ಸಾಗಾಟದ ಹಿಂದೆ ವ್ಯವಸ್ಥಿತ ಜಾಲವೇ ಇದೆ. ಆತ ಬೆಂಗಳೂರನ್ನು ಕೇಂದ್ರವಾಗಿಸಿ ಮುಂಬಯಿ, ಚೆನ್ನೈ ಹಾಗೂ ಹೈದರಾಬಾದ್‌ ಹಾಗೂ ಉತ್ತರ ಭಾರತದ ಹಲವು ನಗರಗಳಿಗೆ ಡ್ರಗ್‌ ಪೂರೈಸುತ್ತಿದ್ದ. ಇದಕ್ಕೆ ಆತ ಡ್ರಗ್‌ ಡೀಲರ್‌ಗಳ ವ್ಯವಸ್ಥಿತ ಜಾಲವನ್ನೇ ಹೊಂದಿದ್ದ ಎಂದು ಎನ್‌ಸಿಬಿ  ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅತಿಸಾರಕ್ಕೆ ಔಷಧ ಪತ್ತೆ ಮಾಡುವ ನೆಪದಲ್ಲಿ ಹೈದರಾಬಾದ್‌ನಲ್ಲಿ ಸ್ಥಳೀಯ ರವಿಶಂಕರ್‌ ರಾವ್‌ ಜತೆ ಸೇರಿ ಬೊಲ್ಲಾರಾಂ ಹೆಸರಿನ ಪ್ರಯೋಗಾಲಯ ನಿರ್ವಹಿಸುತ್ತಿದ್ದ. ಈ ಪ್ರಯೋಗಾಲಯಕ್ಕೆ ಅಧಿಕೃತ ಪರವಾನಿಗೆ ಪಡೆಯಲಾಗಿತ್ತು. ಈ ಪ್ರಯೋಗಾಲಯದಲ್ಲಿ ಆ್ಯಂಫಿಟಮಿನ್‌’ ಡ್ರಗ್‌ ತಯಾರಿಸುತ್ತಿದ್ದ. ಹೀಗೆ ತಯಾರಿಸಿದ ಡ್ರಗ್‌ ಅನ್ನು ತಾನೇ ನೇರವಾಗಿ ಬೆಂಗಳೂರಿಗೆ ತರುತ್ತಿದ್ದ. ಬೆಂಗಳೂರಿನಿಂದ ಡೀಲರ್‌ಗಳ ವ್ಯವಸ್ಥಿತ ಜಾಲದ ಮೂಲಕ ದೇಶದ ನಗರಗಳಿಗೆ ಪೂರೈಕೆಯಾಗುತ್ತಿತ್ತು. ರವಿಶಂಕರ್‌ ರಾವ್‌ ಆ್ಯಂಫಿಟಮಿನ್‌, ಕೊಕೇನ್‌ ತಯಾರು ಮಾಡುವುದನ್ನೇ ದಂಧೆಯನ್ನಾಗಿಸಿ ಕೊಂಡಿದ್ದ. ಬಳಿಕ ತಯಾರಿಸಿದ ಮಾದಕದ್ರವ್ಯಗಳನ್ನು ಡೀಲರ್‌ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಬದಲಿಸುತ್ತಿದ್ದ ಪತ್ನಿ
ಪತಿ ವೆಂಕಟರಾಮ ರಾವ್‌ ಬಂಧನವಾಗುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ, ವಿಜ್ಞಾನಿ ಪತ್ನಿ ಪ್ರೀತಿ (35) ಬೆಂಗಳೂರು ಹೊರ ವಲಯದಲ್ಲಿರುವ ತನ್ನ ಮನೆಯನ್ನು ಸ್ಥಳಾಂತರಿಸುತ್ತಿದ್ದರು. ತನಿಖಾ ತಂಡ ಅ. 1ರಂದು ಹೆಬ್ಬಗೋಡಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ 300 ಗ್ರಾಂ ಆ್ಯಂಫಿಟಮಿನ್‌ ಹಾಗೂ 1.23 ಕೋ.ರೂ. ನಗದು ವಶಪಡಿಸಿಕೊಂಡಿತ್ತು. ಪತಿಯ ಈ ದಂಧೆಗೆ ಪತ್ನಿ ಪ್ರೀತಿ ಬೆಂಬಲವಾಗಿ ನಿಂತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನೂ  ಬಂಧಿಸಲಾಗಿದೆ ಎಂದು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

No Comments

Leave A Comment