Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕಾವೇರಿ ಕ್ರೆಡಿಟ್ ಜಯಲಲಿತಾಗೆ ಅರ್ಪಿಸಿದ ಎಐಎಡಿಎಂಕೆ

jaya-21ಚೆನ್ನೈ: ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕ್ರೆಡಿಟ್ ನ್ನು ಎಐಎಡಿಎಂಕೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಅರ್ಪಿಸಿದೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ತಮಿಳುನಾಡು ಪರವಾಗಿದೆ ಮತ್ತು ಕರ್ನಾಟಕ ಸಹ ನೀರು ಬಿಡಲು ಒಪ್ಪಿಕೊಂಡಿರುವುದು ನಮ್ಮ ಮುಖ್ಯಮಂತ್ರಿಯವರಿಗೆ ಸಿಕ್ಕ ಜಯ ಎಂದು ಎಐಎಡಿಎಂಕೆ ವಕ್ತಾರೆ ಸಿ.ಆರ್.ಸಾರಸ್ವತಿ ಅವರು ಹೇಳಿದ್ದಾರೆ.

‘ಕಡೆಗೂ ಕರ್ನಾಟಕ ಸ್ವಲ್ಪ ಪ್ರಮಾಣದ ನೀರು ಬಿಡಲು ಒಪ್ಪಿಕೊಂಡಿರುವು ಸಂತಸ ತಂದಿದೆ. ಅಂತಿಮವಾಗಿ ಅವರು ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ. ಇದರ ಕ್ರೆಡಿಟ್ ನಮ್ಮ ಮುಖ್ಯಮಂತ್ರಿ ಅಮ್ಮಾಗೆ ಸಲ್ಲಬೇಕು’ ಎಂದಿದ್ದಾರೆ.

ಇನ್ನು ರಾಜ್ಯದ ಪರವಾಗಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಗೂ ಧನ್ಯವಾದ ಸಲ್ಲಿಸುವುದಾಗಿ ಸಾರಸ್ವತಿ ತಿಳಿಸಿದ್ದಾರೆ.

ನಿನ್ನೆ ಸುಪ್ರೀಂ ಕೋರ್ಟ್ ಅಕ್ಟೋಬರ್ 7ರಿಂದ 18ರವರೆಗೆ ತಮಿಳುನಾಡಿಗೆ ನಿತ್ಯ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು. ಅಲ್ಲದೆ ಕರ್ನಾಟಕ ಸಹ ಈ ಹಿಂದಿನ ಆದೇಶದಂತೆ 6 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ಕೋರ್ಟ್ ಗೆ ತಿಳಿಸಿತ್ತು.

No Comments

Leave A Comment