Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಫ‌ುಲ್‌ ಪ್ಯಾಂಟ್‌ ಧರಿಸಿ, ಲಾಠಿ ಬೇಡ: ಆರ್‌ಎಸ್‌ಎಸ್‌ಗೆ ಹೈಕೋರ್ಟ್‌

rss-fಚೆನ್ನೈ : ಆರ್‌ಎಸ್‌ಎಸ್‌ ಸದಸ್ಯರು ಮುಂದಿನ ತಿಂಗಳು ರಾಜ್ಯದಲ್ಲಿ ವಿಜಯದಶಮಿ ಮೆರವಣಿಗೆ ನಡೆಸುವಾಗ ಫ‌ುಲ್‌ ಪ್ಯಾಂಟ್‌ ಧರಿಸಬೇಕು ಮತ್ತು ಕೈಯಲ್ಲಿ ಲಾಠಿ  ಹಿಡಿಯಕೂಡದು ಎಂದು ರಾಜ್ಯ ಹೈಕೋರ್ಟ್‌ ತಾಕೀತು ಮಾಡಿದೆ.

ತಮಿಳುನಾಡಿನಲ್ಲಿ  ದೊಡ್ಡ ಮಟ್ಟದಲ್ಲಿ ಈ ತನಕ ಕಾಣಿಸಿಕೊಂಡಿಲ್ಲದ ಆರ್‌ಎಸ್‌ಎಸ್‌ ಸಂಘಟನೆ ಈ ಬಾರಿಯ ವಿಜಯದಶಮಿಯಂದು ರಾಜ್ಯದಲ್ಲಿ ಕನಿಷ್ಠ 14 ಕಡೆಗಳಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದೆ.

ಈ ಮೆರವಣಿಗೆಗಳಲ್ಲಿ ತಲಾ 200ರಿಂದ 300 ಮಂದಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಕನ್ಯಾಕುಮಾರಿ ಮತ್ತು ಕೊಯಮುತ್ತೂರಿನಲ್ಲಿ  ಸುಮಾರು 2,000 ಆರ್‌ಎಸ್‌ಎಸ್‌ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾನೂನು, ಶಿಸ್ತು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಮುಂದೊಡ್ಡಿ ತಮಿಳು ನಾಡು ಪೊಲೀಸರು ಆರ್‌ಎಸ್‌ಎಸ್‌ನ ವಿಜಯದಶಮಿ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರು.

ಆದರೆ ರಾಜ್ಯ ಹೈಕೋರ್ಟ್‌ ಆರ್‌ಎಸ್‌ಎಸ್‌ಗೆ ಅನುಮತಿ ನೀಡಿದೆ. ಹಾಗಿದ್ದರೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆರ್‌ಎಸ್‌ಎಸ್‌ ಸದಸ್ಯರು ಫ‌ುಲ್‌ ಪ್ಯಾಂಟ್‌ ಧರಿಸಿರಬೇಕು ಮತ್ತು ಕೈಯಲ್ಲಿ ಲಾಠಿ ಹಿಡಿದಿರಬಾರದು ಎಂದು ತಾಕೀತು ಮಾಡಿದೆ.

No Comments

Leave A Comment