Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ವಸತಿ ರಹಿತರಿಗೆ ಸುವ್ಯವಸ್ಥಿತ ಕಟ್ಟಡ – ಪ್ರಮೋದ್ ಮಧ್ವರಾಜ್

dscn3664ಉಡುಪಿ: ನಗರದ ವಸತಿ ರಹಿತರಿಗೆ ಶಾಶ್ವತ ಆಶ್ರಯ ಸೌಲಭ್ಯವನ್ನು ಒದಗಿಸುವುದು ಆದ್ಯ ಕರ್ತವ್ಯವಾಗಿದ್ದು, ಕಟ್ಟಡವನ್ನು ಉತ್ತಮವಾಗಿ, ಸುವ್ಯವಸ್ಥಿತವಾಗಿ ಕಟ್ಟಿ ಎಂದು ಮೀನುಗಾರಿಕೆ, ಯುವಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಬೀಡಿನಗುಡ್ಡೆಯಲ್ಲಿ 50ಲಕ್ಷ ರೂ.ಗಳ ವಸತಿ ರಹಿತರ ಆಶ್ರಯದ ಶಾಶ್ವತ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.

ದೀನದಯಾಳ್ ಅಂತ್ಯೋದಯ ಯೋಜನೆ, ಜೀವನೋಪಾಯ ಅಭಿಯಾನ ಯೋಜನೆಯಡಿ ನಗರ ವಸತಿರಹಿತರಿಗೆ ಆಶ್ರಯ ಉಪಘಟಕದಡಿ ನಿರ್ಮಿಸಲುದ್ದೇಶಿಸಿರುವ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಮೂಲಭೂತ ಸೌಕರ್ಯವನ್ನು ಹೊಂದಿರುವ ಉತ್ತಮವಾಗಿ ಆಶ್ರಯ ಪಡೆಯಲು ಪೂರಕವಾಗಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಇದರಿಂದ ದುರ್ಬಲ ವರ್ಗದವರು, ಒಚಿಟಿ ಮಹಿಳೆಯರು, ಮಾನಸಿಕ ಅಸ್ವಸ್ಥರು, ವೃದ್ಧರಿಗೆ ಇದರಲ್ಲಿ ಸೌಕರ್ಯ ಕಲ್ಪಿಸಲಾಗುವುದು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷರಾದ ಸಂಧ್ಯಾ ತಿಲಕ್, ಸದಸ್ಯರಾದ ವಿಜಯ ಬೈಂದೂರು, ಶಶಿರಾಜ್ ಕುಂದರ್, ನಾರಾಯಣ ಕುಂದರ್, ಪ್ರಶಾಂತ್ ಭಟ್, ಜನಾರ್ಧನ ಬಂಡಾರ್‌ಕರ್, ಗಣೇಶ್ ನೆರ್ಗೆ, ಹಸನ್ ಕೊಡವೂರು, ಶಾಂತಾರಾಂ ಸಾಲ್ವ್ಕಂರ್, ಹಸನ್ ಸಾಹೇಬ, ಪೌರಾಯುಕ್ತ ಮಂಜುನಾಥಯ್ಯ ಹಾಗೂ ನಗರಸಭೆಯ ಇಂಜಿನಿಯರ್ ಗಳು ಉಪಸ್ಥಿತರಿದ್ದರು.

No Comments

Leave A Comment