Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

13.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ದ‌ರೋಡೆ

loc-6ಕಟೀಲು/ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಅವರ ಗಿಡಿಕೆರೆ ಶೇಡಿಗುರಿಯಲ್ಲಿರುವ ಮನೆಗೆ ಸೋಮವಾರ ತಡರಾತ್ರಿ ದರೋಡೆಕೋರರ ತಂಡ ನುಗ್ಗಿ ಮನೆಯವರನ್ನು ಬೆದರಿಸಿ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ನಡೆಸಿದೆ.

ತಂಡದಲ್ಲಿ  ಸುಮಾರು 8 ಮಂದಿ ದರೋಡೆ ಕೋರರಿದ್ದು, ಕೃತ್ಯ ಎಸಗಿದ  ಬಳಿಕ ಮನೆಯವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದೆೆ. ಪ್ರಸಾದ ಕೇಳುವ ನೆಪ ವಾಸುದೇವ ಆಸ್ರಣ್ಣ ಅವರ ಪತ್ನಿ ನಿರಂಜ ನಾಕ್ಷಿ, ಮಗ ಕುಮಾರ ಆಸ್ರಣ್ಣ, ಸೊಸೆ ಸರಿತಾ ಹಾಗೂ ಮಗು, ಮಗಳು ರೂಪಾ ಹಾಗೂ ಇಬ್ಬರು ಮಕ್ಕಳು ಕಟೀಲು ದೇವಸ್ಥಾನದಲ್ಲಿ ನವರಾತ್ರಿ ತೃತೀಯ ದಿನವಾದ ಸೋಮವಾರ ರಾತ್ರಿ ಮೆರವಣಿಗೆ ಮುಗಿಸಿಕೊಂಡು ಸುಮಾರು 12 ಗಂಟೆಯ ವೇಳೆಗೆ ಮನೆಗೆ ಬಂದು ಮಲಗಿದ್ದರು. 12.15ರ ವೇಳೆಗೆ ಮನೆಯ ಕಾಲಿಂಗ್‌ ಬೆಲ್‌ ಬಾರಿಸಿದ್ದು ಹೊರಗಿದ್ದವರು ನಮಗೆ ಪ್ರಸಾದ ಬೇಕು ಎಂದು ಕೇಳಿದ್ದರು. ಆಗ ಕುಮಾರ ಆಸ್ರಣ್ಣ ನಾಳೆ ಬನ್ನಿ ಎಂದು ತಿಳಿಸಿದಾಗ ಅಲ್ಲೇ ಸ್ವಲ್ಪದೂರದಲ್ಲಿ ನಿಂತುಕೊಂಡಿದ್ದ ನಾಲ್ಕು ಮಂದಿ ಮುಸುಕುಧಾರಿಗಳು ಏಕಾಏಕಿ ಧಾವಿಸಿ ಬಂದು ಬಾಗಿಲು ಒಡೆದು ಒಳಗೆ ಪ್ರವೇಶಿಸಿದರು.6svbajpe

ಮಾಳಿಗೆಯಿಂದಲೂ ನುಗ್ಗಿದರು
ದರೋಡೆಕೋರರ ತಂಡದ ನಾಲ್ಕು ಮಂದಿ ಕಾರು ಶೆಡ್‌ ಮೂಲಕ ಮನೆಯ ಮಾಳಿಗೆ ಏರಿ ಅಲ್ಲಿನ ಬಾಗಿಲನ್ನು ಮುರಿದು ಮಾರಕಾಯುಧಗಳೊಂದಿಗೆ ಕೆಳಗೆ ಇಳಿದು ಇಡೀ ಮನೆಯಲ್ಲಿ ಭಯದ ವಾತಾವರಣ ನಿರ್ಮಿಸಿದರು. ಒಳಗೆ ಬಂದವರೇ ಎಲ್ಲರನ್ನೂ ಹೆದರಿಸಲಾರಂಭಿಸಿದರು. ಹಣದ ತಿಜೋರಿ ಎಲ್ಲಿದೆ ತೋರಿಸಿ ಎಂದು ಕುಮಾರ ಆಸ್ರಣ್ಣ ಅವರನ್ನು ಬೆದರಿಸಿ
ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಭಯ ಭೀತರಾದ ವಾಸುದೇವ ಆಸ್ರಣ್ಣ ಅವರ ಪುತ್ರಿ ರೂಪಾ ಅವರು ಚಿಕ್ಕಪ್ಪ ವೆಂಕಟ್ರಮಣ ಆಸ್ರಣ್ಣ ಅವರಿಗೆ ಫೋನ್‌ ಮಾಡಿ ವಿಷಯ ತಿಳಿಸಲು ಮುಂದಾದಾಗ ದರೋಡೆಕೋರ ತಂಡದಲ್ಲಿದ್ದ ಓರ್ವ ಪಿಸ್ತೂಲ್‌ ತೋರಿಸಿ ಮೊಬೈಲ್‌ ಕಸಿದು ಕೊಂಡ. ಬಳಿಕ ಮನೆಯನ್ನು ಜಾಲಾಡಿ ಚಿನ್ನಾಭರಣ ಹಾಗೂ ನಗದು ದೋಚಿ, ಮನೆಯಲ್ಲಿದ್ದ ವರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಯಿತು. ಸಂಶಯದಿಂದ ಧಾವಿಸಿ ಬಂದರು
ಅಣ್ಣನ ಮನೆಯಿಂದ ಫೋನ್‌ ಬಂದರೂ ಸರಿಯಾಗಿ ಮಾತನಾಡದ ಕಾರಣ ಸಂಶಯ ಕ್ಕೀಡಾದ ವೆಂಕಟ್ರಮಣ ಆಸ್ರಣ್ಣ ಅವರು ವಾಪಸ್‌ ಫೋನ್‌ ಮಾಡಿದಾಗ ಅದನ್ನು ಸ್ವೀಕರಿಸಿರಲಿಲ್ಲ. ಒಂದೆರಡು ಬಾರಿ ಪ್ರಯತ್ನಿಸಿದ ಬಳಿಕ ಅವರು ಸಂಶಯಗೊಂಡು ಕಾರು ಹತ್ತಿ ತಮ್ಮನ ಮನೆಗೆ ಧಾವಿಸಿದರು. ಎಕ್ಕಾರು ರಸ್ತೆಯ ದೇವರಕಟ್ಟೆಯ ಬಳಿ ಇರುವ ವೆಂಕಟ್ರಮಣ ಆಸ್ರಣ್ಣ ಅವರ ಮನೆ ವಾಸುದೇವ ಆಸ್ರಣ್ಣ ಅವರ ಮನೆಗೆ ಸುಮಾರು 2 ಕಿ.ಮೀ. ದೂರ
ದಲ್ಲಿದೆ. ಅಲ್ಲಿಂದ ಘಟನೆ ನಡೆದ ಮನೆಗೆ ಬರುವಷ್ಟರಲ್ಲಿ ದರೋಡೆಕೋರರು ಕೃತ್ಯ ನಡೆಸಿ ಪರಾರಿಯಾಗಿದ್ದರು. ಮನೆಯ ಒಳಗೆ ಪ್ರವೇಶಿಸಿದ ವೆಂಕಟ್ರಮಣ ಆಸ್ರಣ್ಣರು ಕೋಣೆಯೊಳಗೆ ಬಂದಿಯಾಗಿದ್ದ ಮನೆ ಮಂದಿಯನ್ನು ಬಿಡುಗಡೆ
ಗೊಳಿಸಿ ಘಟನೆಯ ಕುರಿತು ಪೊಲೀಸರಿಗೆ ತತ್‌ಕ್ಷಣವೇ ಮಾಹಿತಿ ನೀಡಿದರು.

ಕಟೀಲು ದೇವಸ್ಥಾನದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದು ವಾಸುದೇವ ಆಸ್ರಣ್ಣ ಅವರಿಗೆ ಈ ಬಾರಿ ಪೂಜೆಯ ಜವಾಬ್ದಾರಿ ಇರುವ ಹಿನ್ನೆಲೆ ಯಲ್ಲಿ ಅವರು ಕಂಕಣ ತೊಟ್ಟಿದ್ದು ದೇವಸ್ಥಾನದಲ್ಲೇ ಉಳಿದುಕೊಂಡಿದ್ದರು. ಕುಮಾರ ಆಸ್ರಣ್ಣ ಅವರು ನೀಡಿರುವ ದೂರಿ ನಂತೆ ಬಜಪೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು, ರೇಖಾಚಿತ್ರ ಗಾರರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪಕ್ಕದ ಗುಡ್ಡದಲ್ಲಿ ಮೊಬೈಲ್‌ ಪತ್ತೆ
ದರೋಡೆಕೋರರು ಮನೆಯಲ್ಲಿದ್ದ ಮೊಬೈಲ್‌ ಫೋನ್‌ಗಳನ್ನು ಕಿತ್ತುಕೊಂಡಿದ್ದರು. ಅದರಲ್ಲಿ ಕುಮಾರ ಆಸ್ರಣ್ಣ ಅವರ ಮೊಬೈಲನ್ನು ಪಕ್ಕದ ಗುಡ್ಡದಲ್ಲಿ ಎಸೆದು ಹೋಗಿದ್ದಾರೆ. ಅದೇ ಸ್ಥಳದಲ್ಲಿ ಕಡ್ಲೆಯ ಖಾಲಿ ಪ್ಯಾಕೆಟ್‌ಗಳು ಇದ್ದವು.

ಕಾದು ಕುಳಿತು ಬಂದರು?
ದರೋಡೆಕೋರರು ಮನೆಯ ಕುರಿತು ಎಲ್ಲ ಮಾಹಿತಿ ಹೊಂದಿರುವ ಸಂಶಯ ಇದೆ. ಮನೆ ಮಂದಿ ದೇವಳಕ್ಕೆ ಹೋಗಿದ್ದವರು ವಾಪಸ್‌ ಬರುವವರೆಗೆ ಕಾದು ಕುಳಿತು ಬಳಿಕ ನುಗ್ಗಿ ದಂತಿದೆ. ಆಸ್ರಣ್ಣ ಅವರ ಪುತ್ರಿಯನ್ನು ಹೊರತು
ಪಡಿಸಿ ಇತರೆಲ್ಲರೂ ದೇವಳಕ್ಕೆ ಹೋಗಿದ್ದರು. ದರೋಡೆಕೋರರು  ಮನೆ ಮಂದಿ ಬಂದ ಬಳಿಕವೇ ನುಗ್ಗಿದ್ದರು. ಆದುದರಿಂದ ಅವರಿಗೆ ಮೊದಲೇ ಮಾಹಿತಿ ಇದ್ದು, ಕೃತ್ಯ ನಡೆಸುವಾಗ ಒಂದು ವೇಳೆ ಮನೆ ಮಂದಿ ಬಂದರೆ ಅಪಾಯ ಎಂದರಿತು ಎಲ್ಲರೂ ಮನೆ ಸೇರಿದ ಬಳಿಕ ಅವರನ್ನು ಕೋಣೆಯೊಳಗೆ ಬಂಧಿಸಿಯೇ ದರೋಡೆ ನಡೆಸಲು ಸಂಚು ನಡೆಸಿದಂತಿದೆ. ದರೋಡೆ ನಡೆಸಿದವರು 10 ನಿಮಿಷ ಗಳಲ್ಲಿ ಎಲ್ಲ ಕೆಲಸ ಮುಗಿಸಿ ಪರಾರಿಯಾಗಿರು ವುದರಿಂದ ಅವರು ವೃತ್ತಿಪರ ದರೋಡೆಕೋರ ರಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದರೋಡೆಕೋರರು ದೋಚಿದ್ದೇನು ?
650 ಗ್ರಾಂ ಚಿನ್ನಾಭರಣ ಹಾಗೂ 30,000 ರೂ. ನಗದನ್ನು ದರೋಡೆಕೋರರು ದೋಚಿದ್ದಾರೆ. 17 ಚೈನ್‌ಗಳು, 1 ದೊಡ್ಡ ಚಿನ್ನದ ಮಾಲೆ, 20 ಉಂಗುರ, 3 ನೆಕ್ಲೆಸ್‌ಗಳು, 1 ವಂಕಿ ಹಾಗೂ 3 ಮೊಬೈಲ್‌ಗ‌ಳು ಇದರಲ್ಲಿ ಸೇರಿವೆ. ಚಿನ್ನಾಭರಣಗಳ ಮೌಲ್ಯ ಸುಮಾರು, 13.50 ಲಕ್ಷ ರೂ. ಅಂದಾಜಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಉಪ ಆಯುಕ್ತ ಡಾ| ಸಂಜೀವ ಪಾಟೀಲ್‌ ತಿಳಿಸಿದ್ದಾರೆ.

ಹಿಂದಿ, ತುಳುವಲ್ಲಿ ಮಾತು…
ದರೋಡೆಕೋರರ ತಂಡದ  ಮೂವರು ಮುಸುಕುಧಾರಿ ಗಳಿದ್ದರು. ಅರ್ಧಂಬರ್ಧ ಹಿಂದಿ ಹಾಗೂ ತುಳುಭಾಷೆ ಮಾತನಾಡುತ್ತಿದ್ದರು. ಇಡೀ ಮನೆಯನ್ನು ಜಾಲಾಡಿದ್ದಾರೆ ಎಂದು ಕುಮಾರ ಆಸ್ರಣ್ಣ ತಿಳಿಸಿದ್ದಾರೆ. ಮನೆ ಹಾಗೂ ಮನೆಯವರ ಚಲನವಲನಗಳ ಬಗ್ಗೆ ಮಾಹಿತಿ ಇದ್ದವರೇ ಸಾಕಷ್ಟು ಪೂರ್ವತಯಾರಿ ನಡೆಸಿ ಈ ಕೃತ್ಯವನ್ನು ನಡೆಸಿರುವ ಶಂಕೆ ವ್ಯಕ್ತವಾಗಿದೆ.

ದರೋಡೆಕೋರರ ಪತ್ತೆಗೆ 2 ತಂಡ
ವಾಸುದೇವ ಆಸ್ರಣ್ಣ ಅವರ ಮನೆಗೆನುಗ್ಗಿ ದರೋಡೆ ನಡೆಸಿದ ಘಟನೆ ಪ್ರಕರಣದ ಆರೋಪಿಗಳ ಪತ್ತೆಗೆ ಶೋಧ ಕಾರ್ಯನಡೆಯುತ್ತಿದೆ ತನಿಖೆಗೆ 2 ತಂಡಗಳನ್ನು ರಚಿಸಲಾಗಿದೆ 7ರಿಂದ 8 ಮಂದಿ ದರೋಡೆಕೋರರರು ತಂಡದಲ್ಲಿದ್ದ ಬಗ್ಗೆ ಮಾಹಿತಿ ಇದೆ. ದುಷ್ಕರ್ಮಿಗಳ ಬಳಿ ಎರಡು ರಿವಾಲ್ವರ್‌, ಚೂರಿ ಇತ್ತು ಎಂದು ದೂರಿನಲ್ಲಿ ತಿಳಿದುಬಂದಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

No Comments

Leave A Comment