Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಾವೇರಿ ನಿರ್ವಹಣಾ ಮಂಡಳಿಗೆ ಬ್ರೇಕ್; ಉನ್ನತಾಧಿಕಾರ ತಜ್ಞರ ಸಮಿತಿಗೆ “ಸುಪ್ರೀಂ” ಅಸ್ತು

cauvery-scನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕಾವೇರಿ ವಿಚಾರ ಸಂಬಂಧ ಮಂಗಳವಾರ ನಡೆದ ಸುಪ್ರೀಂ ಕೋರ್ಟ್ ವಿಚಾರಣೆ ಕೊನೆಗೂ ಕರ್ನಾಟಕದ ಪಾಲಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದು,  ಕರ್ನಾಟಕದ ಪಾಲಿಗೆ ಮರಣ ಶಾಸನವಾಗಬಲ್ಲ ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಮುಂದೂಡಿದೆ.

ಈ ಹಿಂದಿನ ಎಲ್ಲ ವಿಚಾರಣೆಗಳಲ್ಲೂ ತಮಿಳುನಾಡ ಪರ ವಕೀಲ ನಾಫಡೆ ಮೇಲುಗೈ ಸಾಧಿಸುತ್ತಿದ್ದರಾದರೂ ನಿನ್ನೆಯ ವಿಚಾರಣೆಯಲ್ಲಿ ಕರ್ನಾಟಕದ ಪರ ಪ್ರಬಲ ವಾದಮಂಡಿಸಿದ ಫಾಲಿ  ನಾರಿಮನ್ ಅವರು ನ್ಯಾಯಾಧೀಶರಿಗೆ ಕರ್ನಾಟಕದ ಸಮಸ್ಯೆ ಅರ್ಥಮಾಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕೇಂದ್ರ ಸರ್ಕಾರದ ಮಧ್ಯ ಪ್ರವೇಶ ಹಾಗೂ ಅಟಾರ್ನಿ  ಜನರಲ್ ಮುಕುಲ್ ರೋಹ್ಟಗಿ ಅವರ ಆದೇಶ ಮಾರ್ಪಾಡು ಅರ್ಜಿ ಕೂಡ ಕರ್ನಾಟಕಕ್ಕೆ ಬೆಂಬಲವಾಗಿ ನಿಂತು ಕಾವೇರ ನಿರ್ವಹಣಾ ಮಂಡಳಿ ರಚನೆಯನ್ನು ಅಕ್ಟೋಬರ್ 18ರವರೆಗೂ  ಮುಂದೂಡುವಂತೆ ಮಾಡಿದೆ.

ಉನ್ನತಾಧಿಕಾರ ತಾಂತ್ರಿಕ ಸಮಿತಿಗೆ ಸುಪ್ರೀಂ ಅಸ್ತುಏತನ್ಮಧ್ಯೆ ಉಭಯ ರಾಜ್ಯಗಳ ನೀರಿನ ಬೇಡಿಕೆ ಹಾಗೂ ಲಭ್ಯತೆ ಪರಿಶೀಲಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ತಾಂತ್ರಿಕ ಉನ್ನತಾಧಿಕಾರ ಸಮಿತಿಯನ್ನು ರಚನೆ ಮಾಡಿದೆ.  ತಾಂತ್ರಿಕ  ಉನ್ನತಾಧಿಕಾರ ತಂಡ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದ್ದು, ಜಿ.ಎಸ್.ಝಾ ಅಧ್ಯಕ್ಷತೆಯಲ್ಲಿ  ತಾಂತ್ರಿಕ ಉನ್ನತಾಧಿಕಾರ ತಂಡವನ್ನು  ರಚಿಸಿದೆ. ಸಮಿತಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಜಲ ಆಯೋಗದ ಅಧ್ಯಕ್ಷರು ಇರುತ್ತಾರೆ ಎಂದು ಸುಪ್ರೀಂ  ಕೋರ್ಟ್ ಹೇಳಿದೆ.

ಉಳಿದಂತೆ ತಾಂತ್ರಿಕ ಉನ್ನತಾಧಿಕಾರ ಸಮಿತಿಯಲ್ಲಿ ಸಿಡಬ್ಲ್ಯುಸಿ ಸದಸ್ಯ ಸಯ್ಯದ್ ಮಸೂದ್ ಹುಸೇನ್, ಸಿಡಬ್ಲ್ಯುಸಿ ಮುಖ್ಯ ಎಂಜಿನಿಯರ್ ಆರ್.ಕೆ. ಗುಪ್ತ ಸೇರಿದಂತೆ ಕೇಂದ್ರ ಜಲ  ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ನೇಮಿಸಿದ ಅಧಿಕಾರಿಗಳ ಜತೆಗೆ ನಾಲ್ಕೂ ರಾಜ್ಯಗಳ ಒಬ್ಬ ಮುಖ್ಯ ಎಂಜಿನಿಯರ್ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಮುಖ್ಯ ಕಾರ್ಯದರ್ಶಿ  ಅಥವಾ ಅವರು ನೇಮಿಸಿದ ಅಧಿಕಾರಿ ತಂಡದ ಸದಸ್ಯರಾಗಲಿದ್ದಾರೆ. ಅ.17ರ ಒಳಗೆ ಎರಡೂ ರಾಜ್ಯಗಳ ಕಾವೇರಿ ಕಣಿವೆಗಳ ಸ್ಥಳ ಪರಿಶೀಲನೆ ನಡೆಸಿ, ವಾಸ್ತವಾಂಶಗಳ ಬಗ್ಗೆ ವರದಿ  ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಅಕ್ಟೋಬರ್ 7ರಿಂದ ತಾಂತ್ರಿಕ ತಂಡದಿಂದ ಪ್ರವಾಸ

ಇನ್ನು ಸುಪ್ರೀಂ ಕೋರ್ಟ್ ರಚನೆ ಮಾಡಿರುವ ಈ ತಾಂತ್ರಿಕ ಉನ್ನತಾಧಿಕಾರ ತಂಡ ಇದೇ ಅಕ್ಟೋಬರ್ 7ರಿಂದ 15ರವರೆಗೂ ತಮ್ಮ ಪ್ರವಾಸ ಆರಂಭಿಸಲಿದ್ದು, ಕಾವೇರಿ ನದಿ ಪಾತ್ರ ಕರ್ನಾಟಕ,  ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ನೀರಿನ ಅವಶ್ಯಕತೆ ಹಾಗೂ ಲಭ್ಯತೆ ಕುರಿತಂತೆ ಮಾಹಿತಿ ಕ್ರೋಡೀಕರಿಸಲಿದ್ದಾರೆ.

ಒಟ್ಟು 81,000 ಚದರ ಕಿ.ಮೀ.  ವ್ಯಾಪ್ತಿಯ ಕಾವೇರಿ ಕಣಿವೆ ಪ್ರದೇಶದಲ್ಲಿ ಸಂಚರಿಸಿ ಅಧ್ಯಯನ ನಡೆಸಲಿರುವ ಈ ತಾಂತ್ರಿಕ ತಂಡವು ಕಾವೇರಿ ಜಲಾನಯನ, ಅಣೆಕಟ್ಟೆಗಳಲ್ಲಿನ ಸಂಗ್ರಹ, ಅಚ್ಚುಕಟ್ಟು ಪ್ರದೇಶ, ಬೆಳೆಯ  ಸ್ಥಿತಿಗತಿ, ಕುಡಿಯುವ ನೀರಿನ ಅಗತ್ಯ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಲಿದೆ.

No Comments

Leave A Comment