Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಕಾವೇರಿಗಾಗಿ ಪ್ರಧಾನಿ ಕಚೇರಿಗೆ ಎಐಎಡಿಎಂಕೆ ಸಂಸದರ ಪರೇಡ್

aiadmkನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಎಐಎಡಿಎಂಕೆಯ ಸುಮಾರು 50 ಸಂಸದರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.

ಎಐಎಡಿಎಂಕೆ ಹಿರಿಯ ನಾಯಕ ಎಂ.ತಂಬಿದುರೈ ಅವರ ನೇತೃತ್ವದಲ್ಲಿ ಸಂಸತ್ತಿನ ಸೌಥ್ ಬ್ಲಾಕ್ ನಲ್ಲಿರುವ ಪ್ರಧಾನಿ ಕಚೇರಿವರೆಗೆ ಪರೇಡ್ ನಡೆಸಿದ ಸಂಸದರು, ಕೇಂದ್ರ ಸರ್ಕಾರ ಈ ಕೂಡಲೇ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತಂಬಿದುರೈ, ಮಂಡಳಿ ರಚನೆಗೆ ಸಂಬಂಧಿಸಿದಂತೆ ಯೂ-ಟರ್ನ್ ಹೊಡೆದಿರುವ ಕೇಂದ್ರದ ವಿರುದ್ಧ ಪ್ರತಿಭಟಿಸುವಂತೆ ನಮ್ಮ ಮುಖ್ಯಮಂತ್ರಿ ಜಯಲಲಿತಾ ಅವರು ನಮ್ಮನ್ನು ಕಳುಹಿಸಿದ್ದಾರೆ ಎಂದರು.

ಇದೇ ವೇಳೆ ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಎಐಎಡಿಎಂಕೆ ನಾಯಕ, ತಮಿಳುನಾಡು ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ರೀತಿ ನಡೆದುಕೊಳ್ಳುತ್ತಿವೆ ಎಂದರು.

ಸೆ.30ರಂದು ಸುಪ್ರೀಂ ಕೋರ್ಟ್ ಮಂಗಳವಾರದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಂದು ಮಂಡಳಿ ರಚನೆ ಮಾಡುವುದಾಗಿ ಹೇಳಿದ್ದ ಕೇಂದ್ರ ನಿನ್ನೆ ಯೂ-ಟರ್ನ್ ಹೊಡೆದಿದ್ದು, ಮಂಡಳಿ ರಚನೆ ಅಧಿಕಾರ ಸಂಸತ್ತಿಗಿದ್ದು, ಸದ್ಯ ಮಂಡಳಿ ರಚನೆ ಅಸಾಧ್ಯ ಎಂದು ಕೋರ್ಟ್ ಗೆ ತಿಳಿಸಿದೆ.

No Comments

Leave A Comment