Log In
BREAKING NEWS >
ಉಡುಪಿಯ ಹಲವು ಕಡೆಗಳಲ್ಲಿ ಕೈ ಕೊಟ್ಟ ಮತಯ೦ತ್ರ-ಮತದಾನಕ್ಕೆ ಪರದಾಟುವ ಪರಿಸ್ಥಿತಿ....

ಬಂಧಿತ ಲಷ್ಕರ್ ಉಗ್ರ ಇಮ್ರಾನ್ ಬಿಲಾಲ್ ಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

imran-bilal-ccbಬೆಂಗಳೂರು: ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಇಮ್ರಾನ್ ಬಿಲಾಲ್ ಉಗ್ರಗಾಮಿ ಎಂದು ನ್ಯಾಯಾಲಯದಲ್ಲಿ ತೀರ್ಪು ನೀಡಲಾಗಿದ್ದು, ಬುಧವಾರ ಆತನ ಶಿಕ್ಷೆ ಪ್ರಮಾಣವನ್ನು ಘೋಷಣೆ ಮಾಡುವುದಾಗಿ ತಿಳಿದುಬಂದಿದೆ.

ಇಮ್ರಾನ್ ಬಿಲಾಲ್ ಬಂಧನ ಸಂಬಂಧ ನಡೆದ ಸುಧೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ನೀಡಿರುವ 56ನೇ ಸೆಷನ್ಸ್ ನ್ಯಾಯಾಲಯ ಆತನನ್ನು ಅಪರಾಧಿ ಎಂದು ತೀರ್ಪು ನೀಡಿದೆ.  ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೋಟ್ರಯ್ಯ ಎಂ ಹಿರೇಮಠ ಅವರು ಇಮ್ರಾನ್ ಬಿಲಾಲ್ ಅಪರಾಧಿಯಾಗಿದ್ದು, ನಾಳೆ ಆತನ ಶಿಕ್ಷೆ ಪ್ರಮಾಣವನ್ನು ಘೋಷಣೆ ಮಾಡುವುದಾಗಿ  ಹೇಳಿದ್ದಾರೆ.

ಕರ್ನಾಟಕದ ಖ್ಯಾತ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಗಳಾದ ಇನ್ ಫೋಸಿಸ್ ಹಾಗೂ ವಿಪ್ರೋ ಕಚೇರಿಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಆಗಮಿಸಿದ್ದ ಇಮ್ರಾನ್ ಬಿಲಾಲ್ ನನ್ನು  2007ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಹೊಸಪೇಟೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಮ್ರಾನ್ ಬಿಲಾಲ್ ನನ್ನು ಬಂಧಿಸಿದ್ದ ಪೊಲೀಸರು ಆತನಿಂದ ಎಕೆ 56 ಗನ್, 300 ಸುತ್ತು  ಜೀವಂತ ಗುಂಡುಗಳು, ಸ್ಯಾಟಲೈಟ್ ಫೋನ್ ಹಾಗೂ 5 ಗ್ರೆನೇಡ್ ಗಳನ್ನು ವಶಪಡಿಸಿಕೊಂಡಿದ್ದರು.

2007ರ ಜನವರಿ 5ರ ಮುಂಜಾನೆ ತಮಗೆ ಬಂದಿದ್ದ ಖಚಿತ ಮಾಹಿತಿಯಾಧಾರದ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಗೊರಗುಂಟೆ ಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಬಸ್ ನಲ್ಲಿ  ಪ್ರಯಾಣ ಮಾಡುತ್ತಿದ್ದ ಇಮ್ರಾನ್ ಬಿಲಾಲ್ ನನ್ನು ಬಂಧಿಸಿದ್ದರು. 32 ವರ್ಷದ ಇಮ್ರಾನ್ ಬಿಲಾಲ್ ಮೂಲತಃ ಜಮ್ಮು ಮತ್ತು ಕಾಶ್ಮೀರದವನಾಗಿದ್ದು, ಪಾಕಿಸ್ತಾನದಲ್ಲಿ ಈತ ಉಗ್ರ ತರಬೇತಿ  ಪಡೆದಿದ್ದ ಎಂದು ಹೇಳಲಾಗುತ್ತಿದೆ.

ಬಂಧನದ ಸಂದರ್ಭದಲ್ಲಿ ಆತನಿಂದ ವಿವಿಧ ಮೊಬೈಲ್ ಗಳು, ಹಲವು ಸಿಮ್ ಕಾರ್ಡ್ ಗಳು, ಬೆಂಗಳೂರು ನಗರದ ಮ್ಯಾಪ್ ಅನ್ನು ಕೂಡ ಪೊಲೀಸರು  ವಶಪಡಿಸಿಕೊಂಡಿದ್ದರು

No Comments

Leave A Comment