Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಪಾಕಿಸ್ತಾನದ ದೋಣಿ ಜಪ್ತಿ: 9 ಮಂದಿಯನ್ನು ವಶಕ್ಕೆ ಪಡೆದ ಕರಾವಳಿ ಪಡೆ

boatಪೋರ್ ಬಂದರ್(ಗುಜರಾತ್): ಭಾರತ ಸಮುದ್ರ ಗಡಿಯೊಳಗೆ ಪ್ರವೇಶಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಪೋರ್ ಬಂದರ್ ನಲ್ಲಿ ಕರಾವಳಿ ಪಡೆ ಸಿಬ್ಬಂದಿ ಜಪ್ತಿ ಮಾಡಿದ್ದು 9 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೋರ್ ಬಂದರ್ ಕರಾವಳಿಯಲ್ಲಿ ಬೆಳಗ್ಗೆ 10:15ರ ಸುಮಾರಿಗೆ ಸಮುದ್ರ ಗಡಿಯೊಳಗೆ ಪ್ರವೇಶಿದ್ದ ಪಾಕ್ ದೋಣಿಯನ್ನು ಸಮೀಪಿಸಿದ ಸಮುದ್ರ ಪಾವಕ್ ಹಡಗಿನ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ 9 ಮಂದಿ ಮೀನುಗಾರರು ಎಂದು ತಿಳಿದುಬಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೇಲಿನ ಭಾರತೀಯ ಸೇನೆಯ ಸೀಮಿತ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಇದರಿಂದಾಗಿ ಭಾರತದ ಗಡಿಯೊಳಗೆ ಬರುವಂತೆ ದೋಣಿಗಳ ಮೇಲೆ ಕರಾವಳಿ ಪಡೆ ತೀವ್ರ ಕಣ್ಣಿಟ್ಟಿದೆ.

No Comments

Leave A Comment