Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಲೇಬಾರದು: ಎಚ್ ಡಿ ದೇವೇಗೌಡ

hd-devegowdaಹಾಸನ: ಕರ್ನಾಟಕದ ಕಾವೇರಿ ಭವಿಷ್ಯಕ್ಕೆ ಮರಣ ಶಾಸನವಾಗಬಲ್ಲ ಕಾವೇರಿ ನಿರ್ವಹಣಾ ಮಂಡಳಿ ಯಾವುದೇ ಕಾರಣಕ್ಕೂ ರಚನೆಯಾಗಬಾರದು ಎಂದು ಮಾಜಿ ಪ್ರಧಾನಿ ಎಚ್ ಡಿ  ದೇವೇಗೌಡ ಅವರು ಹೇಳಿದ್ದಾರೆ.

ಸೋಮವಾರ ಹಾಸನ ಜಿಲ್ಲೆಯ ಹೊಳೆ ನರಸಿಪುರ ತಾಲ್ಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು, ಕಾವೇರಿ ವಿಚಾರವಾಗಿ ತಮ್ಮ ಹೋರಾಟ ಮುಂದುವರೆಯಲಿದೆ.  ಯಾವುದೇ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಲು ರಾಜ್ಯ ಸರ್ಕಾರ ಅನುವು ಮಾಡಿಕೊಡಬಾರದು. ಈ ಬಗ್ಗೆ ಕರ್ನಾಟಕದ ಕಠಿಣ ನಿಲುವು ಮುಂದುವರೆಯಲಿದೆ. ಈ ಬಗ್ಗೆ  ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ.

ಇನ್ನು ಕಾವೇರಿ ಹೋರಾಟದ ಕುರಿತಂತೆ ಪ್ರತಿಕ್ರಿಯಿಸಿದ ದೇವೇಗೌಡ ಅವರು, ಕಾವೇರಿ ವಿಚಾರವಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಇಂದು  ಬೆಳಗ್ಗೆಯೂ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾನೆ. ಐ ತೀರ್ಪು ವಿರೋಧಿಸಿ ಕರ್ನಾಟಕ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿ ವಿಚಾರಣೆ ಕೂಡ ಇದೇ ತಿಂಗಳಲ್ಲಿ ನಡೆಯಲಿದೆ.  ಹೀಗಾಗಿ ಕರ್ನಾಟಕ ಸರ್ಕಾರ ತುಂಬಾ ಎಚ್ಚರಿಕೆಯಿಂದ ಕಾನೂನಾತ್ಮಕ ನಡೆ ಇಡಬೇಕಿದೆ.

ಕೊಂಚ ನಿರ್ಲಕ್ಷಿಸಿದರೂ ಕರ್ನಾಟಕಕ್ಕೆ ಭಾರಿ ನಷ್ಟವಾಗುತ್ತದೆ ಎಂದು ದೇವೇಗೌಡ ಸರ್ಕಾರಕ್ಕೆ  ಎಚ್ಚರಿಕೆ ನೀಡಿದರು.

No Comments

Leave A Comment