Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ನಿತೀಶ್‌ ಕಟಾರಾ ಕೊಲೆ ಅಪರಾಧಿಗಳ ಜೈಲು ಶಿಕ್ಷೆ 30ರಿಂದ 25 ವರ್ಷಕ್ಕೆ

katara-murder-case-700

ಹೊಸದಿಲ್ಲಿ : 2002ರ ನಿತೀಶ್‌ ಕಟಾರಾ ಕೊಲೆ ಪ್ರಕರಣದ ಅಪರಾಧಿಗಳಾಗಿರುವ ವಿಕಾಸ್‌ ಯಾದವ್‌ ಮತ್ತು  ಆತನ ಸೋದರ ಸಂಬಂಧಿ ವಿಶಾಲ್‌ ಯಾದವ್‌ ಅವರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌, ಇವರಿಬ್ಬರ ಜೈಲು ಶಿಕ್ಷೆಯ ಅವಧಿಯನ್ನು 30ರಿಂದ 25 ವರ್ಷಗಳಿಗೆ ಇಳಿಸಿದೆ.

ಕೊಲೆ ಅಪರಾಧಿಗಳಾದ ವಿಕಾಸ್‌ ಯಾದವ್‌ ಮತ್ತು ವಿಶಾಲ್‌ ಯಾದವ್‌ ಅವರ ಜೈಲು ವಾಸದ ಶಿಕ್ಷೆಯ ಅವಧಿಯನ್ನು 30ರಿಂದ 25 ವರ್ಷ ಇಳಿಸಿದ ಸುಪ್ರೀಂ ಕೋರ್ಟ್‌, “ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಈ ಅಪರಾಧಿಗಳು 25 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಮತ್ತು ಇವರಿಗೆ ಸಹಾಯಕನಾಗಿ ಕೆಲಸ ಮಾಡಿದ ನಿಕಟವರ್ತಿ ಸುಖದೇವ್‌ ಪೆಹಲ್ವಾನ್‌ 20 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕು’ ಎಂದು ಹೇಳಿತು.

ರಾಜಕಾರಣಿ ಡಿ ಪಿ ಯಾದವ್‌ ನ ಪುತ್ರನಾಗಿರುವ ವಿಕಾಸ್‌ ಯಾದವ್‌ನ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌, ದಿಲ್ಲಿ ಹೈಕೋರ್ಟಿಗೆ ಜೀವಾವಧಿ ಶಿಕ್ಷೆಯ ಅವಧಿಯನ್ನು ತೀರ್ಮಾನಿಸುವ ಅಧಿಕಾರವಿದೆ ಎಂದು ಹೇಳಿತಲ್ಲದೆ ವಿಕಾಸ್‌ ಯಾದವ್‌ ಮತ್ತು ಸುಖದೇವ್‌ ಪೆಹಲ್ವಾನ್‌ ಅವರ ಶಿಕ್ಷಾ ಅವಧಿಯು ಏಕಕಾಲದಲ್ಲಿ ಸಾಗತ್ತದೆ; ದಿಲ್ಲಿ ಹೈಕೋರ್ಟ್‌ ಆದೇಶಿಸಿರುವ ಪ್ರಕಾರ ಒಂದರ ಬಳಿಕ ಒಂದಾಗಿ ಅಲ್ಲ ಎಂದು ಸ್ಪಷ್ಟಪಡಿಸಿತು. ಜಸ್ಟಿಸ್‌ ದೀಪಕ್‌ ಮಿಶ್ರಾ ಮತ್ತು ಜಸ್ಟಿಸ್‌ ಸಿ ನಾಗಪ್ಪನ್‌ ಅವರನ್ನು ಸುಪ್ರೀಂ ಕೋರ್ಟ್‌ ಪೀಠವು ಒಳಗೊಂಡಿತ್ತು.

2014ರ ಎಪ್ರಿಲ್‌ನಲ್ಲಿ ದಿಲ್ಲಿ ಹೈಕೋರ್ಟ್‌ ಕಠಾರಾ ಕೊಲೆ ಅಪರಾಧಿಗಳಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ ಸಾಕ್ಷ್ಯ ನಾಶ ಮಾಡಿದ್ದಕ್ಕೆ ಹೆಚ್ಚುವರಿಯಾಗಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದಕ್ಕೆ ಮುನ್ನ ದಿಲ್ಲಿಯ ವಿಚಾರಣಾ ನ್ಯಾಯಾಲಯವು ಈ ಅಪರಾಧಿಗಳಿಗೆ 14 ವರ್ಷಗಳ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿತ್ತು.

2015ರಲ್ಲಿ  ಸುಪ್ರೀಂ ಕೋರ್ಟ್‌, ಕಟಾರಾ ಕೊಲೆ ಆರೋಪಿಗಳು ಅಪರಾಧಿಗಳೆಂಬ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಜೈಲು ಶಿಕ್ಷೆಯ ಅವಧಿಯನ್ನು ಪರಾಮರ್ಶಿಸುವುದಕ್ಕೆ ಒಪ್ಪಿಕೊಂಡಿತ್ತು.

ಡಿ ಪಿ ಯಾದವ್‌ ಅವರ ಪುತ್ರಿ ಭಾರತಿ ಯಾದವ್‌ ಅವರೊಂದಿಗೆ ಸಂಬಂಧ ಹೊಂದಿದ ಕಾರಣಕ್ಕೆ 2002ರಲ್ಲಿ ನಿತೀಶ್‌ ಕಟಾರಾ ಅವರನ್ನು ಆರೋಪಿಗಳು ಕೊಲೆಗೈದಿದ್ದರು.

No Comments

Leave A Comment