Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಅಪೋಲೊ ಆಸ್ಪತ್ರೆ ಜಯಲಲಿತಾ ಚೇತರಿಕೆ: ಆಸ್ಪತ್ರೆ ಮುಂದೆ ಎಐಎಡಿಂಎ ಕಾರ್ಯಕರ್ತರ ದಂಡು

jayalalithaaಚೆನ್ನೈ:ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಜಯಾ ಚಿಕಿತ್ಸೆಗಾಗಿ ಲಂಡನ್‌ನಿಂದ ರಿಚರ್ಡ್‌ ಜಾನ್‌ ಬೀಲ್ ನೇತೃತ್ವದ ವೈದ್ಯರ ತಂಡ ಶನಿವಾರ  ಚೆನ್ನೈ ಅಪೋಲೊ ಆಸ್ಪತ್ರೆಗೆ ಧಾವಿಸಿತ್ತು. ಈ ವೈದ್ಯರ ಚಿಕಿತ್ಸೆಗ ಜಯಾ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ.

ನ್ಯುಮೋನಿಯಾ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಜಯಾ ಅವರ ಹೃದಯ ಮತ್ತು ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.ಈ ಕಾರಣದಿಂದಾಗಿ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು  ಹೇಳಿವೆ.

ಭಾನುವಾರ ಬೆಳಗ್ಗಿನಿಂದ ಜಯಲಲಿತಾ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅಪೋಲೊ ಆಸ್ಪತ್ರೆಯ ಸುತ್ತಲೂ ಎಐಎಡಿಎಂಕೆ ಕಾರ್ಯಕರ್ತರು ಜಮಾಯಿಸಿದ್ದು,  ವಿತ್ತ ಸಚಿವ ಪನೀರ್ ಸೆಲ್ವಂ, ಗೆಳತಿ ಶಶಿಕಲಾ ಮೊದಲಾದವರು ಆಸ್ಪತ್ರೆಯಲ್ಲಿ ಜಯಾ ಅವರ ಜತೆಗಿದ್ದಾರೆ.

No Comments

Leave A Comment