Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಪ್ರಧಾನಿ ಮೋದಿಗೆ ಬೆದರಿಕೆ: ಬಲೂನ್’ನಲ್ಲಿ ಬೆದರಿಕೆ ಸಂದೇಶ ಕಳುಹಿಸಿದ ಪಾಕ್

pak-baloon-threatಗುರುದಾಸ್ಪುರ: ಭಾರತೀಯ ಸೇನೆಗೆ ಸೀಮಿತ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸತತ ಯತ್ನ ನಡೆಸುತ್ತಿರುವ ಪಾಕಿಸ್ತಾನ, ಬಲೂನ್ ಮೂಲಕ ಇದೀಗ ಬೆದರಿಕೆ ಸಂದೇಶವೊಂದನ್ನು ರವಾನಿಸಿದೆ.

ಉರ್ದು ಭಾಷೆಯಲ್ಲಿ ಸಂದೇಶ ಬರೆದಿರುವ ಬಲೂನ್ ಗಳು ದೀನಾನಗರದಲ್ಲಿ ದೊರಕಿದ್ದು, ಪ್ರಧಾನಿ ಮೋದಿಯವರಿಗೆ ಬೆದರಿಕೆಯೊಡ್ಡಲಾಗಿದೆ ಎಂದು ತಿಳಿದುಬಂದಿದೆ.

ಬೆದರಿಕೆ ಸಂದೇಶ ಬರೆದಿರುವ ಎರಡು ಬಲೂನ್ ಗಳು ದೊರಕಿದ್ದು, ಒಂದು ಬಲೂನ್ ಮೇಲೆ ಪಾಕಿಸ್ತಾನ ಸೇನಾ ಬಲವನ್ನು ಪರಿಶೀಲಿಸಲು ನಿಮಗೆಷ್ಟು ಧೈರ್ಯ…ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಿಯೇ ತೀರುತ್ತೇವೆಂದು ಬರೆದಿದೆ, ಮತ್ತೊಂದು ಬಲೂನ್ ಮೇಲೆ ಪ್ರಧಾನಿ ಮೋದಿಯವರಿಗೆ ಬೆದರಿಕೆಯೊಡ್ಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಸುನ್ ಲೇ…ಅಯೂಬಿ ಕಿ ತಲ್ವಾರ್ ಅಭಿ ಹಮಾರೆ ಪಾಸ್ ಹೈ..ಇಸ್ಲಾಂ ಜಿಂದಾಬಾದ್ ಎಂದು ಬರೆಯಲಾಗಿದೆ.

ಬಲೂನ್ ಗಳು ಶುಕ್ರವಾರ ಸಂಜೆ ಸುಮಾರಿಗೆ ಸ್ಥಳೀಯರ ಕೈಗೆ ಸಿಕ್ಕಿದ್ದು, ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದರಂತೆ ಸ್ಥಳಕ್ಕೆ ಬಂದ ಪೊಲೀಸರು ಬಲೂನ್ ಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.ಬೆದರಿಕೆ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಗಡಿಯಲ್ಲಿರುವ ಗುರುದಾಸ್ಪುರ, ಪಠಾಣ್ ಕೋಟ್ ಜಿಲ್ಲೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ್ದಾರೆಂದು ತಿಳಿದುಬಂದಿದೆ.

No Comments

Leave A Comment