ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕದಿರು ಪೂಜೆ…
ಉಡುಪಿಯ ತೆಂಕುಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಶನಿವಾರ ಶ್ರೀ ದೇವರ ಸನ್ನಿದಾನಕ್ಕೆ ಕದಿರನ್ನು ಪಲ್ಲಕಿ ಉತ್ಸವದೊಂದಿಗೆ ತಂದು, ದೇವರ ಸನ್ನಿಧಿಯಲ್ಲಿ ಮಹಾಪೂಜೆಯ ಬಳಿಕ ಭಕ್ತರಿಗೆ ಹಂಚಲಾಯಿತು.
ದೇವಳದ ಪ್ರಧಾನ ಅರ್ಚಕರು ಪೂಜಾ ವಿಧಾನಗಳನ್ನು ನೆರವೇರಿಸಿದರು. ದೇವಳದ ಮೊಕ್ತೇಸರರಾದ ಪಿ.ವಿ. ಶೆಣೈ, ವಸಂತ ಕಿಣಿ, ರೋಹಿತಾಕ್ಷ ಪಡಿಯಾರ್, ಗಣೇಶ್ ಕಿಣಿ ಹಾಗೂ ಸಮಾಜ ಬಾಂಧವರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.