Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ರಾಹೀಲ್ ಷರೀಫ್ ನಿವೃತ್ತಿಗೂ ಮುನ್ನ ಭಾರತದ ಮೇಲೆ ಭೀಕರ ದಾಳಿ?

raheel-sharifನವದೆಹಲಿ: ನವೆಂಬರ್ ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ನಿವೃತ್ತರಾಗಲಿದ್ದು, ಅದಕ್ಕೂ ಮುನ್ನ ಭಾರತ ಮೇಲೆ ಪ್ರತಿದಾಳಿಗೆ ನಡೆಸಲು ಚಿಂತನೆ ನಡೆಸಿದ್ದಾರಂತೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳ ಮೇಲೆ ಭಾರತ ಸೀಮಿತ ದಾಳಿ ನಡೆಸಿರುವಂತೆಯೇ, ಅತ್ತ ರಾಹೀಲ್ ಷರೀಫ್ ಸಹ ರಕ್ತಸಿಕ್ತ ದಾಳಿಗೆ ಚಿಂತಿಸುತ್ತಿದ್ದಾರೆ. ರಾಹೀಲ್ ತೀವ್ರ ಭಾರತ ವಿರೋಧಿ ಧೋರಣೆ ಹೊಂದಿದ್ದು, ಕೆಲ ಬಾರಿ ಪ್ರಧಾನಿ ನವಾಜ್ ಷರೀಫ್ ಅವರನ್ನೇ ಧಿಕ್ಕಿರಿಸಿದ್ದರು.

ಪಿಒಕೆಯಲ್ಲಿ ಭಾರತ ಸೀಮಿತ ದಾಳಿ ನಡೆಸಿರುವುದು ರಾಹೀಲ್ ಗೆ ಪಾಕಿಸ್ತಾನದಲ್ಲಿ ಹಿನ್ನಡೆಯಾಗಿದ್ದು ತಮ್ಮ ಸೇನಾ ಬಲ ಸಾಮರ್ಥ್ಯ ತೋರಿಸಲು ಮುಂದಾಗಬಹುದು ಎಂಬ ಮಾಹಿತಿಗಳು ಬರುತ್ತಿವೆ.

ರಾಹೀಲ್ ನಿವೃತ್ತಿಗೂ ಮುನ್ನ ಪಾಕ್ ಸೇನೆಯಿಂದ ಗಡಿಯಾಚಿನಿಂದ ದಾಳಿ ನಡೆಸಬಹುದು ಎಂಬ ಬಲವಾದ ಶಂಕೆಯನ್ನು ಭಾರತದ ಭದ್ರತಾ ಪಡೆಗಳು ಊಹಿಸಿದ್ದು, ಗಡಿಯಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಇನ್ನು ಯುದ್ಧ ಭೀತಿ ಹಿನ್ನೆಲೆಯಲ್ಲಿ ಗಡಿಯಿಂದ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Comments
  • This post is really interesting. I have bookmarked it.

    Do you allow guest post on your blog ? I can provide high quality posts
    for you. Let me know.

    October 11, 2016

Leave A Comment