2ನೇ ಟೆಸ್ಟ್: ಭುವನೇಶ್ವರ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್
ಕೋಲ್ಕತ್ತಾ: ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 128 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 316 ರನ್ ಗಳಿಗೆ ಸರ್ವಪತನ ಕಂಡಿತು.
ಇದರೊಂದಿಗೆ ಪ್ರಥಮ ಇನ್ನಿಂಗ್ಸ್ ಆರಂಭಿಸಿ ನ್ಯೂಜಿಲೆಂಡ್ ಭಾರತ ವೇಗಿ ಭುವನೇಶ್ವರ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದರು. 128 ರನ್ ಗಳಿಗೆ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದೆ.ಮಳೆಬಾಧಿತ ಎರಡನೇ ದಿನದಾಟದಲ್ಲಿ ಉಭಯ ತಂಡಗಳಿಂದ ಹತ್ತು ವಿಕೆಟ್ ಪತನಗೊಂಡಿದೆ. 7 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿದ್ದ ಭಾರತ ಎರಡನೇ ದಿನದಾಟದಲ್ಲಿ 316 ರನ್ ಗಳಿಗೆ ಸರ್ಪಪತನ ಕಂಡಿತು.
ನಂತರ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತನ್ನ ಪ್ರಮುಖ 7 ವಿಕೆಟ್ ಕಳೆದುಕೊಂಡಿದೆ.ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ 13, ಟಾಮ್ ಲ್ಯಾಥಂ 1, ಹೆನ್ರಿ ನಿಕೋಲ್ಸ್ 1, ರಾಸ್ ಟೇಲರ್ 36, ಲ್ಯೂಕ್ ರಾಂಚಿ 35, ಮಿಚೆಲ್ ಸ್ಯಾಂಟ್ನರ್ 11, ಮ್ಯಾಟ್ ಹೆನ್ರಿ 0 ಗಳಿಸಿ ಔಟಾಗಿದ್ದಾರೆ.
ಬ್ರಾಡ್ಲಿ ವಾಟ್ಲಿಂಗ್ 12 ಹಾಗೂ ಜೀತನ್ ಪಟೇಲ್ 5 ರನ್ ಗಳಿಸಿ ಆಡುತ್ತಿದ್ದಾರೆ.ಭಾರತ ಪರ ಭುವನೇಶ್ವರ್ 5, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ.