Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ದಿಲ್ಲಿಗೆ ಈಗ ಜೈಶ್‌ ಉಗ್ರ ದಾಳಿ ಭೀತಿ

delhi-600ಹೊಸದಿಲ್ಲಿ : ಪಾಕ್‌ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಭಾರತದ ವಿಶೇಷ ಸೇನಾ ಪಡೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿರುವುದಕ್ಕೆ ಪ್ರತಿಯಾಗಿ ಉಗ್ರ ಮಸೂದ್‌ ಅಜರ್‌ ನೇತೃತ್ವದ ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಮತ್ತು ಮೌಲಾನಾ ಅಬ್ದುರ್‌ ರೆಹಮಾನ್‌ (ಕೋಡ್‌ ನೇಮ್‌: ಮಾರ್‌) ತಂಡದವರಿಂದ ರಾಷ್ಟ್ರ ರಾಜಧಾನಿ ದಿಲ್ಲಿಗೆ ಭಯೋತ್ಪಾದಕ ದಾಳಿಯ ಬೆದರಿಕೆ ಉಂಟಾಗಿದೆ.

ಮಸೂದ್‌ ಅಜರ್‌ನ ಜೈಶ್‌ ಎ ಮೊಹಮ್ಮದ್‌ ಉಗ್ರರು ಕಾಶ್ಮೀರ ಹಾಗೂ ಪಂಜಾಬನ್ನು ಗುರಿ ಇರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದ್ದರೆ ದಿಲ್ಲಿಯ ಮೇಲೆ ಮೌಲಾನಾ ಅಬ್ದುರ್‌ ರೆಹಮಾನ್‌ ತಂಡದ ಉಗ್ರರು ದಾಳಿ ನಡೆಸುವ ಬೆದರಿಕೆ ಇದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಪೊಲೀಸರ ಪ್ರಕಾರ ಲಷ್ಕರ್‌ ಎ ತಯ್ಯಬ ಅಥವಾ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ದಿಲ್ಲಿ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ತೀರ ಕಡಿಮೆ ಇದೆ.

ಮಸೂದ್‌ ಅಜರ್‌ನ ಸಮೂಹದವರು ವಾಟ್ಸಾಪ್‌ ಮತ್ತು ಫೇಸ್‌ ಬುಕ್‌ ಬಳಸಿಕೊಂಡು ಭಾರತೀಯ ತರುಣರನ್ನು ನೇಮಕಾತಿ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಗೊತ್ತಾಗಿದೆ. ಮಸೂದ್‌ ಅಜರ್‌ ಸಮೂಹದ, ಸಂಪೂರ್ಣ ಉಗ್ರ ತರಬೇತಿ ಪಡೆದ ಮೂವರು ಈಚೆಗೆ ಉಗ್ರ ದಾಳಿ ನಡೆಸುವುದಕ್ಕೆ ಸ್ವಲ್ಪ ಮುನ್ನ ಎಂಬಂತೆ ಭದ್ರತಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

ಜೆಇಎಂ ಮತ್ತು ಮಾರ್‌ ಉಗ್ರ ಸಮೂಹದ ಬಳಿಕ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಕಾದಿರುವ ಇತರ ಎರಡು ಸಂಘಟನೆಗಳೆಂದರೆ ಅಲ್‌ ಕಾಯಿದಾ ಭಾರತೀಯ ದಳ ಮತ್ತು ಅನ್ಸಾರ್‌ ಉದ್‌ ತವಾಹಿದ್‌ ನೇತೃತ್ವದ ಐಸಿಸ್‌ ಭಾರತೀಯ ಘಟಕ.

No Comments

Leave A Comment