Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

4 ತಿಂಗಳಲ್ಲಿ 65,250 ಕೋಟಿ ರು. ಕಪ್ಪುಹಣ ಘೋಷಣೆ: ಜೇಟ್ಲಿ

jaitly-4ನವದೆಹಲಿ: ಕಳೆದ ನಾಲ್ಕು ತಿಂಗಳಲ್ಲಿ ಆದಾಯ ಘೋಷಣೆ ಯೋಜನಡಿ 65,250 ಕೋಟಿ ರುಪಾಯಿ ಕಪ್ಪು ಹಣ ಘೋಷಣೆಯಾಗಿದ್ದು, ಕೇಂದ್ರ ಸರ್ಕಾರಕ್ಕೆ 29,362 ಕೋಟಿ ರುಪಾಯಿ ಆದಾಯ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಶನಿವಾರ ಹೇಳಿದ್ದಾರೆ.
ದೇಶದಲ್ಲಿನ ಕಪ್ಪುಹಣದ ವಿರುದ್ದ ಸಮರ ಸಾರಿರುವ ಕೇಂದ್ರ ಸರ್ಕಾರ ಸೆಪ್ಟೆಂಬರ್‌ 30ರೊಳಗೆ ಕಪ್ಪು ಹಣ ಸ್ವಯಂ ಘೋಷಣೆಗೆ ಅವಕಾಶ ನೀಡಲಾಗಿತ್ತು. ಈ ಗಡುವಿನೊಳಗೆ 64,275 ಮಂದಿ ಆದಾಯ ಘೋಷಣೆ ಮಾಡಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಈಗ ಘೋಷಿಸಲಾಗಿರುವ ರು.65,250 ಕೋಟಿಯಲ್ಲಿ ಶೇಕಡ 45ರಷ್ಟು ಹಣ ತೆರಿಗೆ ಹಾಗೂ ದಂಡದ ರೂಪದಲ್ಲಿ ಸರ್ಕಾರದ ಬೊಕ್ಕಸ ಸೇರಲಿದ್ದು, ಇದನ್ನು ಸಾಮಾಜಿಕ ಯೋಜನೆಗಳಡಿ ಜನಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆಯ
ಮೋದಿ ಅಭಿನಂದನೆ
ಐಡಿಎಸ್‌ ಯೋಜನೆಯಡಿ ಆದಾಯ ಘೋಷಿಸಿಕೊಂಡವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಆರ್ಥಿಕ ಪಾರದರ್ಶಕತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಕೊಡುಗೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಆದಾಯ ತೆರಿಗೆ ಘೋಷಣೆ ಯೋಜನೆಯಡಿ 64,274 ಮಂದಿ ಘೋಷಣೆ ಮಾಡಿಕೊಂಡಿದ್ದು 65,250 ಕೋಟಿ ರೂ. ಕಪ್ಪು ಹಣ ಹೊರಬಂದಿದೆ. ಈ ಮೊತ್ತವು “ಕನ್ಸಾಲಿಡೇಟೆಡ್‌ ಫ‌ಂಡ್‌ ಆಫ್ ಇಂಡಿಯಾ’ ಖಾತೆಗೆ ಜಮೆಯಾಗಲಿದೆ.
ಆದಾಯ ತೆರಿಗೆ ಘೋಷಿಸಿಕೊಳ್ಳುವ ಯೋಜನೆಯನ್ನು ಸರಕಾರ ಕಳೆದ ಜೂನ್‌ 1ರಿಂದ ಆರಂಭಿಸಿತ್ತು. ಸೆ.30ರಂದು ಇದಕ್ಕೆ ಕೊನೇ ದಿನವಾಗಿತ್ತು. ಒಟ್ಟಾರೆಯಾಗಿ ನಾಲ್ಕು ತಿಂಗಳ ಕಾಲಾವಕಾಶವನ್ನು ಜನರಿಗೆ ನೀಡಲಾಗಿತ್ತು.
ಈ ಯೋಜನೆಯಡಿ ವ್ಯಕ್ತಿಯೊಬ್ಬ ತನ್ನ ಅಘೋಷಿತ ಆದಾಯ 100 ಲಕ್ಷ ಇದೆ ಎಂದು ಘೋಷಿಸಿಕೊಂಡಲ್ಲಿ ಆತ ತೆರಿಗೆ, ಸರ್ಚಾರ್ಜ್‌ ಮತ್ತು ದಂಡ ಸೇರಿ ಒಟ್ಟು 45 ಲಕ್ಷ ರೂ. ಸರಕಾರಕ್ಕೆ ಪಾವತಿಸುವ “ಭಾರೀ ರಿಯಾಯಿತಿಯ ಅವಕಾಶ’ವನ್ನು ಕಲ್ಪಿಸಲಾಗಿತ್ತು.
No Comments

Leave A Comment